ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಾಧನೆ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಟೆಯಾಗಿದ್ದು, ಇನ್ಮುಂದೆ ಸಿದ್ದರಾಮಯ್ಯ ಡಾಕ್ಟರ್ ಸಿದ್ದರಾಮಯ್ಯ ಎಂದು ಕರೆಯಿಸಿಕೊಳ್ಳಲಿದ್ದಾರೆ,
ಸಿಎಂ ಸಿದ್ದರಮಯ್ಯ ಗೆ ಗೌರವ ಡಾಕ್ಟರೇಟ್ ನೀಡಲು ದೇವರಾಜು ಅರಸು ವಿವಿ ನಿರ್ಧರಿಸಿದ್ದು, ಶೀಘ್ರದಲ್ಲಿ ಎಲ್ಲವೂ ಅಧಿಕೃತಗೊಳ್ಳಲಿದೆ,
ಕೋಲಾರದ ಟಮಕದಲ್ಲಿರುವ ದೇವರಾಜು ಅರಸು ವಿವಿಯಲ್ಲಿ ಇವತ್ತು ನಡೆಯುವ 15 ನೇ ಘಟಿಕೋತ್ಸವದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಿಸುವ ಸಾಧ್ಯತೆಯಿದೆ,
ಈ ಹಿಂದೆ ಸಿಎಂ ಸಿದ್ದರಾಮಯ್ಯ ಕೂಡ ಸಂಸ್ಧೆಯ ಟ್ರಸ್ಟಿಯಾಗಿದ್ದರು, ರಾಜಕೀಯ ಹಾಗೂ ಸಾಮಾಜಿಕ ಸಾಧನೆಯನ್ನು ಪರಿಗಣಿಸಿ ಡಾಕ್ಟರೇಟ್ ನೀಡಲಾಗುತ್ತಿದೆ, ಈ ವಿಚಾರ ಘಟಿಕೋತ್ಸವದಲ್ಲಿ ಅಧಿಕೃತವಾಗಿ ಪ್ರಕಟವಾಗಲಿದೆ,