ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ನಿಧಾನವಾಗಿ ಮಹಾಮಾರಿ ಕೊರೋನಾ ಆತಂಕವೂ ಹೆಚ್ಚಾಗುತ್ತಿದೆ, ಈಗಾಗಲೇ ರಾಜ್ಯಕ್ಕೆ ಕೊರೋನಾ ಹೊಸ ತಳಿ ಎಂಟ್ರಿ ಕೊಟ್ಟಿದ್ದು ದಿನೇ ಪಾಸಿಟಿವ್ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕೇವಲ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 71 ಕೇಸ್ ವರದಿಯಾಗಿದೆ ,
ಬೆಂಗಳೂರಿನಲ್ಲಿ ವೇಗವಾಗಿ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು ನಗರದ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ,
ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದೆ, ಇನ್ನುಳಿದಂತೆ ಬೊಮ್ಮನಹಳ್ಳಿಯಲ್ಲಿ 7, ಬೆಂಗಳೂರು ಕೇಂದ್ರ 5, ಯಲಹಂಕ 4 ದಾಸರಹಳ್ಳಿಯಲ್ಲಿ 1, ಆರ್ ಆರ್ ನಗರ 1 ಮಾದೇವಪುರದಲ್ಲಿ 16, ಬೆಂಗಳೂರು ದಕ್ಷಿಣ 14, ಬೆಂಗಳೂರು ಪೂರ್ವ 13, ಬೆಂಗಳೂರು ಪಶ್ಷಿಮ 10 ಪ್ರಕರಣಗಳು ದಾಖಲಾಗಿವೆ,