ಸಿಂಧ್: ಕಾರ್ಡ್ ಬೋರ್ಡ್ ನಿಂದ ಮಾಡಿದ ರಫೇಲ್ ಯುದ್ಧ ವಿಮಾನದ ಪ್ರತಿಕೃತಿಯನ್ನು ದಹಿಸಿ ಭಾರತದ ವಿರುದ್ಧ ನಾವು ಯುದ್ಧದಲ್ಲಿ ಜಯ ಗಳಿಸಿದ್ದೇವೆ ಎಂದು ಸಂಭ್ರಮಾಚರಣೆ ಮಾಡಿರುವ ಘಟನೆಯೊಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ, ಸಿಂಧ್ ಪ್ರಾಂತ್ಯದ ಗವರ್ನರ್ ಮಹಮ್ಮದ್ ಕಮ್ರಾನ್ ಖಾನ್ ತಸ್ಸೋರಿ ಈ ಹುಚ್ಚಾಟ ನಡೆಸಿ ನಗೆಪಾಟಲೀಗೀಡಾಗಿರುವ ವ್ಯಕ್ತಿಯಾಗಿದ್ದು ಈತನ ವಿಡಿಯೋಗೆ ನೆಟ್ಟಿಗರು ನಿಮ್ಮ ಸಾಮರ್ಥ್ಯ ಯೋಗ್ಯತೆಯೇ ಇಷ್ಟು ಎಂದು ಗೇಲಿ ಮಾಡಿದ್ದಾರೆ,
ರಟ್ಟಿನ ರಫೇಲ್ ವಿಮಾನಕ್ಕೆ ಬೆಂಕಿಯಿಡುವ ಮುನ್ನ ಈತ ಮಾತನಾಡಿ ನಮ್ಮ ಸೈನಿಕರು ಶೌರ್ಯದಿಂದ ಹೋರಾಡಿ ನಿಜವಾದ ರಫೇಲ್ ವಿಮಾನವನ್ನು ಕೆಳಗುರುಳಿಸಿದ್ದಾರೆ, ಭೂ ಸೇನೆ ವಾಯುಸೇನೆ ಹಾಗೂ ನೌಕಾಸೇನೆಯ ಎಲ್ಲಾ ಯೋಧರೂ ಒಗ್ಗಟ್ಟಾಗಿ ಭಾರತವನ್ನು ಸೋಲಿಸಿದ್ದಾರೆ ಎಂದು ಕೊಚ್ಚಿಕೊಂಡಿದ್ದಾನೆ,