ಪನಾಮಾ ಸಿಟಿ: ಭಾರತೀಯ ಸಂಸದರ ಸರ್ವಪಕ್ಷ ನಿಯೋಗವು ಪನಾಮ ಸಿಟಿಯಲ್ಲಿ ಭಯೋತ್ಪಾದನೆಯ ವಿರುದ್ಧ ಭಾರತದ ಒಗ್ಗಟ್ಟು ಮತ್ತು ಕಠಿಣ ನೀತಿಯ ಸಂದೇಶವನ್ನು ನೀಡಿದೆ, ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗದ ಭಾಗವಾಗಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪನಾಮಾದಲ್ಲಿ ಅಬ್ಬರದ ಭಾಷಣ ಮಾಡಿದ್ದಾರೆ,
ನಮ್ಮಲ್ಲಿ ಭಾಷೆಗಳು, ಧರ್ಮ ನಾವು ಬಂದ ಪ್ರದೇಶಗಳು ಮತ್ತು ನಾವು ಪ್ರತಿನಿಧಿಸುವ ರಾಜಕೀಯ ಪಕ್ಷಗಳಲ್ಲಿ ವೈವಿಧ್ಯತೆ ಇದೆ, ಆದರೆ ನಾವು ಇಡೀ ಜಗತ್ತಿಗೆ ನೀಡುತ್ತಿರುವ ಸಂದೇಶವೆಂದರೆ ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಬಂದಾಗ, ನಾವು ಒಂದೇ ಮತ್ತು ನಾವು ಮುಕ್ತ ಧ್ವನಿಯಲ್ಲಿ ಮಾತನಾಡುತ್ತೇವೆ ಎಂದರು,
ಪಾಕಿಸ್ತಾನದ ಬಳಿ ಈಗ ಕಳೆದುಕೊಳ್ಳಲು ಏನೂ ಇಲ್ಲ, ಅದು ಐಸಿಯುನಲ್ಲಿ ಐಎಂಎಫ್ ನ ಡ್ರಿಪ್ಸ್‍ನ ಮೇಲೆ ಅವಲಂಬಿತವಾಗಿದೆ, ಆದರೆ ಕಳೆದ 70 ವರ್ಷಗಳಲ್ಲಿ ಸಾವಿರಾರು ಭಯೋತ್ಪಾದಕ ದಾಳಿಗಳ ಮೂಲಕ ಭಾರತವನ್ನು ರಕ್ತಸ್ರಾವಗೊಳಿಸಿದೆ, ಆದರೆ ತನ್ನ ಹೇಳಿಕೆ ನೀತಿಯ ಮೂಲಕ ಪಾಕಿಸ್ತಾನವು ನಮ್ಮನ್ನು ಹೇಗೆ ಬೇರೆಡೆಗೆ ಸಳೆಯಲು ಪ್ರಯತ್ನಿಸಿದೆ ಎಂಬುದನ್ನು ನಾವು ನೋಡಿದ್ದೇವೆ ಎಂದು ತಿಳಿಸಿದರು,
ನೀವು ದಾಳಿ ಮಾಡಿದರೆ ನಾವು ಇನ್ನು ಸುಮ್ಮನಿರುವುದಿಲ್ಲ ಎಂದು ಪ್ರಧಾನಿ ಮೋದಿ ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ, ಮೌನವಾಗಿರೋ ದಿನಗಳು ಕಳೆದು ಹೋಗಿದೆ, ನೀವು ನಮ್ಮ ಮೇಲೆ ದಾಳಿ ಮಾಡಿದರೆ, ಭರತವು ಒಮ್ಮೆ ಅಲ್ಲ ನೂರು ಬಾರಿ ಆಪರೇಷನ್ ಸಿಂಧೂರ್ ನಡೆಸುವ ಶಕ್ತಿಯನ್ನು ಹೊಂದಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ,