“ಹೊಂಬಾಳೆ ಸಂಹಿತ ಹರಿಣಿಕುಮಾರ್ ಕೃಷಿ ಮಾಧ್ಯಮ ಪ್ರಶಸ್ತಿ-2025”- ಅರ್ಜಿ ಆಹ್ವಾನ

varthajala
0

 ಬೆಂಗಳೂರು, ಜುಲೈ 18 (ಕರ್ನಾಟಕ ವಾರ್ತೆ): ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕೃಷಿ ತಂತ್ರಜ್ಞಾನಗಳ ಪ್ರಸರಣೆಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಮಾಧ್ಯಮ ಪ್ರಶಸ್ತಿಯನ್ನು ಪ್ರಾರಂಭಿಸಿದ್ದು,  “ಹೊಂಬಾಳೆ ಸಂಹಿತ ಹರಿಣಿಕುಮಾರ್ ಕೃಷಿ ಮಾಧ್ಯಮ ಪ್ರಶಸ್ತಿ-2025” ಗೆ ಅರ್ಜಿ ಆಹ್ವಾನಿಸಲಾಗಿದೆ.

ಮುದ್ರಣ ಮತ್ತು ವಿದ್ಯಮಾನ ಮಾಧ್ಯಮದ ಪತ್ರಕರ್ತರು, ವರದಿಗಾರರು, ನಿರೂಪಕರು, ಅಧಿಕಾರಿಗಳು ಮತ್ತು ವಿಸ್ತರಣ ಕಾರ್ಯಕರ್ತರು ಅರ್ಜಿಯನ್ನು ಸಲ್ಲಿಸಬಹುದು.  
ಪ್ರಶಸ್ತಿಯು ಪ್ರಮಾಣಪತ್ರ ಹಾಗೂ ರೂ.10,000/- ನಗದು ಬಹುಮಾನ ಒಳಗೊಂಡಿರುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಹಳೆಯ ವಿದ್ಯಾರ್ಥಿಗಳ ಸಂಘ (ರಿ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಪಶು ವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ, ಬೆಂಗಳೂರು-560024 ಇವರಿಗೆ 2025 ರ ಆಗಸ್ಟ್ 14 ರೊಳಗೆ ಸಲ್ಲಿಸುವುದು.
ಭಾರತ ಕೃಷಿ ಪ್ರಧಾನ ರಾಷ್ಟ್ರ, ಶೇಕಡ 60 ರಷ್ಟು ಜನರ ಮುಖ್ಯ ಕಸುಬು ವ್ಯವಸಾಯವಾಗಿದೆ. ಕೃಷಿ ಸಂಬಂದಿತ ವಿಶ್ವವಿದ್ಯಾನಿಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯ ಅಂಗ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ರೈತರು ಕೃಷಿಯಲ್ಲಿ ನೂತನ ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸುತ್ತಿವೆ. ಈ ನೂತನ ತಂತ್ರಜ್ಞಾನಗಳನ್ನು ಕೃಷಿ ವಿಜ್ಞಾನ ಕೇಂದ್ರಗಳು, ವಿಸ್ತರಣಾ ಶಿಕ್ಷಣ ಘಟಕಗಳು, ಸರ್ಕಾರದ ಅಭಿವೃದ್ಧಿ ಇಲಾಖೆಗಳು ಕೃಷಿ ಪರಿಕರ ಸಂಸ್ಥೆಗಳು ಮತ್ತು ಸಮೂಹ ಮಾಧ್ಯಮಗಳು ರೈತರಿಗೆ ತಲುಪಿಸುತ್ತಿದ್ದಾರೆ. ಆದರೂ ಸಹ ಬಹುತೇಕ ತಂತ್ರಜ್ಞಾನಗಳು ರೈತರಿಗೆ ಸಕಾಲದಲ್ಲಿ ತಲುಪದೆ ಕೃಷಿ ಅಭಿವೃದ್ಧಿ ಕುಂಟಿತವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ಮತ್ತು ವಿದ್ಯುನ್ಯಾನ ಮಾಧ್ಯಮಗಳು ರಾಜಕೀಯ, ಕ್ರೀಡೆ ಮತ್ತು ಮನೋರಂಜನೆಗೆ ನೀಡುವ ಮಹತ್ವವನ್ನು ಕೃಷಿ ರಂಗಕ್ಕೆ ನೀಡುತ್ತಿಲ್ಲ. ಇದನ್ನು ಮನಗಂಡು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು ಕೃಷಿ ಮಾಧ್ಯಮ ಪ್ರಶಸ್ತಿಯನ್ನು ಪ್ರಾರಂಭಿಸಿದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080-23410754 ಇ-ಮೇಲ್ ವಿಳಾಸ: alumniuasb83@gmail.com   ಜಾಲತಾಣ : www.alumniuasb.in  ಗೆ ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)