ಹಿಂದೆ ಕನ್ನಡ ಕಡ್ಡಾಯವಾಗಿ ಕಲಿಸಬೇಕು ಎಂಬ ಸರ್ಕಾರದ ನೀತಿಯನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು, ಈಗ ಕನ್ನಡ ಭಾಷೆಗೆ ೧೨೫ ಅಂಕ ಬೇಡ, ೧೦೦ ಅಂಕ ಇರಲಿ. ಎಂದು ಹೇಳಿರುವುದು ತಾಯಿ ಭಾಷೆಗೆ(ಕನ್ನಡ) ಮಾಡಿದ ಅವಮಾನ ಮತ್ತು ಭಾಷಾವಾರು ಪ್ರಾಂತದ ಕಲ್ಪನೆಗೆ ಅಪಚಾರವಾಗಿದೆ. ಇದನ್ನು ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ
ತೀವ್ರವಾಗಿ ವಿರೋಧಿಸುತ್ತವೆ.
2001ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ 66.5%, ಡಿ. ಶಶಿಕುಮಾರ್ ಅವರು ಕನ್ನಡಕ್ಕೆ ಹೆಚ್ಚಿನ ಅಂಕ ಇರುವುದನ್ನು ವಿರೋಧಿಸುವ ತಮ್ಮ
ವಾದವನ್ನು ಸಮರ್ಥಿಸಿ ಕೊಳ್ಳಲು ಕನ್ನಡಿಗರ ಜನಸಂಖ್ಯೆ42% ಎಂದು ಹೇಳಿದ್ದಾರೆ. ಇದು ಜನರನ್ನು ಹಾದಿ ತಪ್ಪಿಸುವ ಪ್ರಯತ್ನವಾಗಿದೆ. ಇದನ್ನು ನಾವು ಖಂಡಿಸುತ್ತೇವೆ.
ಸರ್ಕಾರದ ಅಧಿಕೃತ ಮಾಹಿತಯನ್ನು ತಪ್ಪಾಗಿ ನೀಡಿರುವ ಶಿಕ್ಷಣೋದ್ಯಮಿ ಡಿ.ಶಶಿಕುಮಾರ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸುತ್ತೇವೆ. ಪ್ರಥಮ ಭಾಷೆಗೆ ಭಾಷಾವಾರು ರಾಜ್ಯಗಳು ರಚನೆಯಾದ ನಂತರ(1956) ಪ್ರಥಮ ಬಾಷೆಗೆ 150 ಅಂಕ ಇತ್ತು. ಗೋಕಾಕ್ ಭಾಷಾ ಸೂತ್ರದಲ್ಲಿ(1982) ಕನ್ನಡವನ್ನು ಏಕೈಕ ಕಡ್ಡಾಯ ಭಾಷೆಯಾಗಿ ಮಾಡಿ ಉಳಿದಂತೆ ದ್ವಿತೀಯ ಭಾಷೆಗೆ 1೦೦ ಮತ್ತು ತೃತಿಯ ಬಾಷೆಗೆ 5೦ ಅಂಕವನ್ನು ಮುಂದುವರೆಸಿತು. ಈ ಸೂತ್ರದ ಜಾರಿಗೆ ಚಳವಳಿ ನಡೆಯುತ್ತಿದ್ದಾಗ ಸರ್ಕಾರ 3 ಭಾಷೆಗಳಿಗೂ ಸಮಾನವಾಗಿ 1೦೦ ಅಂಕ ನಿಗಧಿಪಡಿಸಿ ಆದೇಶ ಹೊರಡಿಸಿತು. ಇದನ್ನು ಚಳವಳಿಗಾರರು
ಒಪ್ಪಲಿಲ್ಲ. ಕೊನೆಗೆ ಹೋರಾಟಗಾರರು, ವಿವಿಧ ಕ್ಷೇತ್ರದ ಗಣ್ಯರ ಸಭೆ ನಡೆದು ರಾಜಿ ಸೂತ್ರವಾಗಿ ಪ್ರಥಮ ಭಾಷೆಗೆ 125, ಉಳಿದೆರಡು ಭಾಷೆಗೆ ನೂರುನೂರು ಅಂಕಗಳು
ನಿಗಧಿ ಆಯಿತು. ಈಗ ಅದಕ್ಕೂ ಸಂಚಕಾರ ಬಂದಿರುವುದು ಕನ್ನಡಿಗರ ಪಾಲಿಗೆ ದೊಡ್ಡ ದುರಂತವಾಗಿದೆ.