ಭರತನಾಟ್ಯ ಕಲಾವಿದೆಯೂ ಮತ್ತು ಶಿಕ್ಷಕಿಯೂ ಆಗಿರುವ ಗುರು ದೀಪಾ ಭಟ್ ಅವರು ಟ್ರಿನಿಡಾಡ್ ಮತ್ತು ಟೊಬಾಗೋ ದೇಶದ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಯ ಐಸಿಸಿಆರ್ಕೇಂದ್ರದಲ್ಲಿ ಭರತನಾಟ್ಯ ಶಿಕ್ಷಕಿ ಮತ್ತು ಕಲಾವಿದೆಯಾಗಿ ನೇಮಕಗೊಂಡಿದ್ದಾರೆ.ಈ ಮಹತ್ವದ ನೇಮಕಾತಿ ಭಾರತದ ಶ್ರೇಷ್ಠ ಕಲೆಯಾದ ಭರತನಾಟ್ಯವನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವ ಉದ್ದೇಶವನ್ನು ಹೊಂದಿದ್ದು, ಭಾರತೀಯ ಸಂಸ್ಕೃತಿಯ ಸಂಚಾರದ ಮಾರ್ಗದಲ್ಲಿ ಇದು ಒಂದು ಮಹತ್ವದ ಹೆಜ್ಜೆ ಎನ್ನಬಹುದು.
ಶ್ರಿಮತಿ ದೀಪಾ ಭಟ್ ಅವರು ಹಲವಾರು ದಶಕಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದು, ನೃತ್ಯ ಕುಟೀರದ ನಿರ್ದೇಶಕಿಯಾಗಿ ನೃತ್ಯ ಶಿಕ್ಷಣ ಮತ್ತು ಪ್ರದರ್ಶನದಲ್ಲಿ ವಿಶಿಷ್ಟ ಕೊಡುಗೆ ನೀಡಿದವರು. ಈ ನೇಮಕಾತಿ ಅವರು ನಡೆಸುತ್ತಿರುವ ನೃತ್ಯ ಪ್ರಯಾಣಕ್ಕೆ ಒಂದು ಮಹತ್ವದ ಮೆಟ್ಟಿಲು ಎಂಬುದರಲ್ಲಿ ಸಂಶಯವಿಲ್ಲ.
ಅವರ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಭವಿಷ್ಯದ ಸಾಧನೆಗಳಿಗೆ ಶುಭಾಶಯಗಳು.
VK NEWS DIGITAL
ಮೌಲ್ಯಗಳು ಅಂದು-ಇಂದು: ಡಾ. ಯ.ಚಿ. ದೊಡ್ಡಯ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತಕರು