ರ್ನಾಟಕ ಸರ್ಕಾರದ ಪೌರಾಡಳಿತ ಮತ್ತು ಹಜ್ ಸಚಿವರಾಗಿ ನನ್ನ ಎರಡನೇ ವರ್ಷದ ಸೇವಾ ಅವಧಿ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಅವಧಿಯ ಪ್ರಮುಖ ಸಾಧನೆಗಳು ಮತ್ತು ಯೋಜನೆಗಳ ಪ್ರಗತಿಯನ್ನು ಒಳಗೊಂಡ ವರದಿಯ ಕೈಪಿಡಿಯನ್ನು ನಿಮಗೆ ಸಲ್ಲಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಪೌರಾಡಳಿತ ಇಲಾಖೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿ, ಪೌರಸೇವೆಗಳ ಡಿಜಿಟಲೀಕರಣ, ತ್ಯಾಜ್ಯ ನಿರ್ವಹಣೆ ಸ್ವಚ್ಛತಾ ಹಿತಚಿಂತನೆಗಳು, ಗೃಹ ಯೋಜನೆಗಳು ಹಾಗೂ ನಾಗರಿಕರಿಗೆ ಸುಲಭ ಸೇವೆಗಳನ್ನು ನೀಡುವತ್ತ ಸಾಕಷ್ಟು ಹೆಜ್ಜೆ ಹಾಕಿದೆ. ಹಜ್ ಕಾರ್ಯಚರಣೆಗಳ ಸಹಾಯ ಹಾಗೂ ವ್ಯವಸ್ಥೆಯ ನಿರ್ವಹಣೆಯಲ್ಲೂ ನಾವು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ಸಾಧನೆಗಳ ಕೈಪಿಡಿಯನ್ನು ನಿಮಗೆ ಸಲ್ಲಿಸುತ್ತಿದ್ದೇನೆ. ಈ ಕೈಪಿಡಿಯಲ್ಲಿ ಮೇ 2023 ರಿಂದ ಜೂನ್ 2025ರವರೆಗೆ ನಡೆದ ಪ್ರಮುಖ ಯೋಜನೆಗಳು, ತಾಂತ್ರಿಕ ಅಭಿವೃದ್ದಿಗಳು ಮತ್ತು ಪ್ರಗತಿಯ ವಿವರವಿದೆ. ಇದು ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರೂಪುಗೊಂಡ ಉತ್ತಮ ಆಡಳಿತದ ಚಿಂತನೆಗೆ ಸಾಕ್ಷಿಯಾಗಿದೆ.
ನಿಮ್ಮ ಬಹುಮೌಲ್ಯವಾದ ಸಲಹೆ ಹಾಗೂ ಮಾರ್ಗದರ್ಶನ ನಮ್ಮ ಮುಂದಿನ ಪ್ರಯತ್ನಗಳಿಗೆ ಪ್ರೇರಣೆಯಾಗಲಿದೆ ಈ ಕೈಪಿಡಿಯನ್ನು ತಮ್ಮ ದಯಪೂರ್ವಕ ಅವಗಾಹನೆಗೆ ಸಲ್ಲಿಸಿದೆ.
ಆದರಪೂರ್ವಕವಾಗಿ
ತಮ್ಮ ವಿಶ್ವಾಸಿ,
ರಹೀಂ ಖಾನ್,
ಪೌರಾಡಳಿತ ಮತ್ತು ಹಜ್ ಸಚಿವರು
ಕರ್ನಾಟಕ ಸರ್ಕಾರ