4 ವರ್ಷಗಳಲ್ಲಿ 177 ಮಕ್ಕಳ ಅಸಹಜ ಸಾವು, ಅಮಾಯಕ ಮಕ್ಕಳ ಸಾವು ತಡೆಗಟ್ಟಿ; ಡಾ.ತಿಪ್ಪೇಸ್ವಾಮಿ ಕೆ.ಟಿ.

varthajala
0
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಸಹಜ ಸಾವುಗಳ ಸಂಖ್ಯೆ ಹೆಚ್ಚುತಿದ್ದು ಈ ಬಗ್ಗೆ ಸರ್ಕಾರ ಹಾಗೂ ಸಮಾಜ ಜಗರೂಕವಾಗಬೇಕಿದೆ ಹಾಗೂ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಅನುಸರಿಸುವ ಮೂಲಕ ಅಮಾಯಕ ಮಕ್ಕಳ ಸಾವುಗಳನ್ನು ತಡೆಗಟ್ಟಬೇಕಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.

ಅವರು ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಅಸಹಜ ಸಾವುಗಳನ್ನು ತಡೆಗಟ್ಟುವ ಸಂಬಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿಶಾಮಕ ಸೇವಗಳ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ ಮಾತನಾಡಿದರು.
 
ಇದಕ್ಕೆ ಪೂರಕವಾಗಿ ಅಗ್ನಿಶಾಮಕ ಸೇವಗಳ ಇಲಾಖೆ ನೀಡಿದ ಮಾಹಿತಿ ಪ್ರಕಾರ ಕೆರೆ, ಕಟ್ಟೆ ಹಾಗೂ ಕೃಷಿ ಹೊಂಡ ಸೇರಿದಂತೆ ವಿವಿಧ ನೀರಿನ ಮೂಲಗಳಲ್ಲಿ ಬಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 48 ಮಕ್ಕಳು ಸಾವನ್ನಪ್ಪಿದ್ದಾರೆ. ಶಿಕ್ಷಣ ಇಲಾಖೆಯ ಮಾಹಿತಿಯಂತೆ 2024-25ನೇ ಸಾಲಿನಲ್ಲಿ ಒಟ್ಟು 10 ಮಕ್ಕಳು ಅಸಹಜ ಸಾವಿಗೆ ಒಳಗಾಗಿದ್ದಾರೆ.
 
ಪೊಲೀಸ್ ಇಲಾಖೆಯ ಮಾಹಿತಿಯಂತೆ 2022 ರಿಂದ 2025ರ ವರೆಗೆ ಆತ್ಮಹತ್ಯೆಯಿಂದ 30, ನೀರಿನಲ್ಲಿ ಮುಳುಗಿ 48, ಬೆಂಕಿ ಹಾಗೂ ವಿದ್ಯುತ್ ಅವಘಡಗಳಿಂದ 17, ವಿಷಜಂತು ಕಚ್ಚಿ 17, ಅನಾರೋಗ್ಯದಿಂದ 25 ಒಳಗೊಂಡಂತೆ ಇನ್ನಿತರೆ ಕಾರಣಗಳಿಂದ ನಾಲ್ಕು ವರ್ಷಗಳಲ್ಲಿ ಒಟ್ಟಾರೆ 177 ಮಕ್ಕಳು ಅಸಹಜ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ರವರು ಮಕ್ಕಳ ಜೊತೆಗೆ ಕಾರ್ಯನಿರ್ವಹಿಸುವ ಇಲಾಖೆಗಳು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು. 

ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯಗಳ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಡಿ ನಿರಂತರವಾಗಿ ಮಕ್ಕಳ ಆರೋಗ್ಯ ತಪಾಸಣೆ ಮಾಡುವಂತೆ ಡಿ.ಹೆಚ್.ಓ ರವರಿಗೆ ಸೂಚಿಸಿದರು.
 
ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಹಾಗೂ ವಿದ್ಯುತ್ ಪರಿವರ್ತಕಗಳನ್ನು ತೆರೆವುಗೊಳಿಸುವ ಸಂಬಂದ ಬೆಸ್ಕಾಂ ಜೊತೆಗೆ ಸಮನ್ವಯ ಸಾಧಿಸಬೇಕು, ಮುಂದೆ ಇಂಥ ಘಟನೆ ನಡೆದರೆ ಆಯಾ ವ್ಯಾಪ್ತಿಯ ಬಿ.ಇ.ಓ ಹಾಗೂ ಡಿಡಿಪಿಐ ರವರನ್ನು ಹೊಣೆಮಾಡಲಾಗುತ್ತದೆ ಎಂದರು. ಇಡೀ ಜಿಲ್ಲೆಯಾದ್ಯಂತ ಶಾಲೆ ಹಾಗೂ ವಸತಿ ನಿಲಯಗಳ ಆವರಣದಲ್ಲಿ ಬೀಳುವ ಹಂತದಲ್ಲಿರುವ ಮರಗಳ ಸಮೀಕ್ಷೆ ನಡೆಸಿ ಅರಣ್ಯ ಇಲಾಖೆಯ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
 
ಕೃಷಿಹೊಂಡಗಳಿಗೆ ಪೆನ್ಸಿಂಗ್ ಕಡ್ಡಾಯಾವಾಗಿದ್ದು ಜೀವಹಾನಿ ತಪ್ಪಿಸಬೇಕಿದೆ. ಕೃಷಿ ಹೊಂಡಗಳ ಅಂತಿಮ ಬಿಲ್ ಮಾಡುವಾಗ ಇದನ್ನು ಖಚಿತಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆ ಅನುಷ್ಟಾನವಾಗದೆ ಜೀವ ಹಾನಿಯಾದಲ್ಲಿ ಕೃಷಿ ಹೊಂಡದ ಮಾಲಿಕ ಹಾಗೂ ಸಂಬಂದಪಟ್ಟ ಅಧಿಕಾರಿಗಳ ಮೇಲೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲು ಶಿಪಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.  

ಕಲ್ಲುಗಣಿಕಾರಿಕೆ ಪ್ರದೇಶದಲ್ಲಿ ಹೆಚ್ಚಿನ ಸುರಕ್ಷತೆ ಅನುಸರಿಸಬೇಕಿದ್ದು ನಿಷ್ಕ್ರೀಯ ಕಲ್ಲುಕ್ವಾರಿಗಳ ಮಾಲೀಕರಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲು ಹಾಗೂ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸಿರುವುದನ್ನು ಖಾತ್ರಿಪಡಿಸಿಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
 
ಮಕ್ಕಳ ಅಸಹಜ ಸಾವು ತಪ್ಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು ಈ ಬಗ್ಗೆ ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ್ಕೆ ಸೂಚಿಸಿದ ಸದಸ್ಯರು ಈ ಬಗ್ಗೆ ಶಾಲೆಗಳ ಪೋಷಕರ ಸಭೆಗಳಲ್ಲೂ ಜಾಗೃತಿ ಮೂಡಿಸುವಂತೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016ನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
 
ಅಂಗನವಾಡಿಗಳ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಹೆಚ್ಚಿನ ಆದ್ಯತೆವಹಿಸಬೇಕಾಗಿದ್ದು ಕಟ್ಟಡ ಸುರಕ್ಷತೆ, ಅದರಲ್ಲೂ ಬಾಡಿಗೆ ಕಟ್ಟಡಗಳು ಮತ್ತು ಸಮುದಾಯ ಭವನಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಲ್ಲಿನ ಮಕ್ಕಳ ಸುರಕ್ಷತೆಗೆ ಗಮನಹರಿಸಲು ಸೂಚಿಸಿದರು.

VK DIGITAL NEWS:




Post a Comment

0Comments

Post a Comment (0)