*ವೆಲ್ಲೂರು 04.08.2025:* ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ವೆಲ್ಲೂರಿನಲ್ಲಿರುವ ಶ್ರೀರಾಮಪುರ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಶ್ರೀಪುರಂ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ ಗೌರವಾನ್ವಿತ ರಾಜ್ಯಪಾಲರು, ಶ್ರೀ ನಾರಾಯಣಿ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಕೆಲವು ನಿಮಿಷಗಳ ಕಾಲ ಪ್ರಾರ್ಥನೆ ಮಾಡುವ ಮೂಲಕ ದೇವಾಲಯದಲ್ಲಿ ಸಮಯ ಕಳೆದರು.
ಶ್ರೀ ನಾರಾಯಣಿ ಪೀಠದ ಸಂಸ್ಥಾಪಕ ಮತ್ತು ಪೀಠಾಧಿಪತಿ ಶ್ರೀ ಶಕ್ತಿ ಅಮ್ಮ ಅವರ ಆಶೀರ್ವಾದ ಪಡೆದರು. ಶ್ರೀ ಶಕ್ತಿ ಅಮ್ಮ ಅವರು ಗೌರವಾನ್ವಿತ ರಾಜ್ಯಪಾಲರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ರೀ. ಸುರೇಶ್ ಬಾಬು ನಿರ್ದೇಶಕ ಮತ್ತು ಟ್ರಸ್ಟಿ ಶ್ರೀಪುರಂ, ಶ್ರೀ ಸೌಂದರರಾಜನ್ ಶ್ರೀ ನಾರಾಯಣಿ ಪೀಡಮ್ ಟ್ರಸ್ಟಿ, ಶ್ರೀ ಸಂಪತ್ ಮ್ಯಾನೇಜರ್, ಭಾಸ್ಕರ್ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.