ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜಗಳ ಮಾರಾಟ ನಿಷೇಧ

varthajala
0

ಬೆಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ನೀಡಲಾಯಿತು.

ಬೆಂಗಳೂರು : ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ ! ಆಗಸ್ಟ್ 15 ರಂದು 79 ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ರಾಷ್ಟ್ರಧ್ವಜವನ್ನು ಪ್ರತಿ ಮನೆಯಲ್ಲಿ, ಶಾಲೆಗಳಲ್ಲಿ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ, ಅದೇ ಕಾಗದದ/ಪ್ಲಾಸ್ಟಿಕ್‌ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಬೇಗನೇ ನಾಶವಾಗುವುದಿಲ್ಲ, ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ. 

ಹಾಗಾಗಿ ಸರಕಾರದ ಅಧಿನಿಯಮಗಳನ್ನು ಧಿಕ್ಕರಿಸಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವ ಮಾರಾಟಗಾರರು ಹಾಗೂ ಧ್ವಜ ಸಂಹಿತೆ ಪ್ರಕಾರ ಧ್ವಜವನ್ನು ಗೌರವಿಸದ ಜನರು, ಸಂಸ್ಥೆಗಳು ಮತ್ತು ಗುಂಪುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರಿನ ಜಿಲ್ಲಾಧಿಕಾರಿಗಳಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿಯನ್ನು ನೀಡಲಾಯಿತು. ಈ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಡ್ವೋಕೇಟ್ ಕೃಷ್ಣಸ್ವಾಮಿ ಕಣವೆ, ಅಡ್ವೋಕೇಟ್ ಶಕುಂತಲಾ ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ, ರಾಷ್ಟ ರಕ್ಷಣಾಪಡೆಯ ಶ್ರೀ ಪ್ರವೀಣ್, ಶ್ರೀ ಸೂರ್ಯ, ಶ್ರೀರಾಮಸೇನೆಯ ಪ್ರಮುಖರು, ವಕೀಲರು ಸೇರಿದಂತೆ ಹಲವಾರು ಹಿಂದುತ್ವನಿಷ್ಠರು ಉಪಸ್ಥಿತರಿದ್ದರು.

 VK DIGITAL NEWS:


Post a Comment

0Comments

Post a Comment (0)