ಸೆಪ್ಟೆಂಬರ್ 10 ರಂದು ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆಯಡಿ ವಸುಧೇಂದ್ರ ಅವರ ಕಾದಂಬರಿ ತೇಜೋ ತುಂಗಭದ್ರ ಕೃತಿ ಕುರಿತ ಕಾರ್ಯಕ್ರಮ

varthajala
0

 ಬೆಂಗಳೂರು, ಸೆಪ್ಟೆಂಬರ್ 09 (ಕರ್ನಾಟಕ ವಾರ್ತೆ) ಕನ್ನಡ ಪುಸ್ತಕ ಪ್ರಾಧಿಕಾರವು ಇದೇ ಸೆಪ್ಟೆಂಬರ್ 10 ರಂದು ಶ್ರೀ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಕೊಡಿಗೇಹಳ್ಳಿ, ದೊಡ್ಡಬಳ್ಳಾಪುರ ಇವರ ಸಹಯೋಗದೊಂದಿಗೆ “ಅಂಗಳದಲ್ಲಿ ತಿಂಗಳ ಪುಸ್ತಕ” ಯೋಜನೆಯಡಿ ಖ್ಯಾತ ಲೇಖಕ ವಸುಧೇಂದ್ರ ಅವರ ಕಾದಂಬರಿ “ತೇಜೋ ತುಂಗಭದ್ರ” ಕೃತಿ ಕುರಿತು ದೊಡ್ಡಬಳ್ಳಾಪುರದ ಕೊಡಿಗೇಹಳ್ಳಿಯ ಶ್ರೀ ದೇವರಾಜ ಅರಸು ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳು ಹಾಗೂ ವೈದ್ಯರಾದ ಡಾ. ನಾ ಸೋಮೇಶ್ವರ ಅವರು ಈ ಕಾದಂಬರಿ ಕುರಿತು ಅವಲೋಕನ ಮಾಡಲಿದ್ದಾರೆ. ಕಾದಂಬರಿಯ ಲೇಖಕರಾದ ವಸುಧೇಂದ್ರ ಅವರು ಸಹ ಭಾಗವಹಿಸಲಿದ್ದಾರೆ.
ಶ್ರೀ ದೇವರಾಜ ಅರಸು ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಜಿ.ಹೆಚ್. ನಾಗರಾಜ, ಉಪಾಧ್ಯಕ್ಷರಾದ ಜೆ. ರಾಜೇಂದ್ರ, ಕಾರ್ಯದರ್ಶಿಗಳಾದ ಕೆ.ಜಿ. ಹನುಮಂತರಾಜು ಹಾಗೂ ಶ್ರೀ ದೇವರಾಜು ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೌರಪ್ಪ ಎಂ.ಎಸ್. ಇವರುಗಳು ಉಪಸ್ಥಿತರಿರಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀ ದೇವರಾಜು ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಕನ್ನಡ ಭಾμÁ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಚಿಕ್ಕಣ್ಣ ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)