ಕಾರ್ನಿಯಾ ಅಂಧತ್ವ ನಿವಾರಣೆಗೆ ಸೈಕ್ಲಾಥಾನ್

varthajala
0

 ಬೆಂಗಳೂರು, 07-09-2025 – ಭಾರತದಲ್ಲಿ ಕಾರ್ನಿಯಾ ಅಂಧತ್ವವು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, 1.3 ದಶಲಕ್ಷಕ್ಕೂ ಅಧಿಕ ಜನರು ಎರಡೂ ಕಣ್ಣುಗಳಲ್ಲಿ ಅಂಧತ್ವದಿಂದ ಬಳಲುತ್ತಿದ್ದಾರೆ ಮತ್ತು 10 ದಶಲಕ್ಷಕ್ಕೂ ಹೆಚ್ಚು ಜನರು ಒಂದು ಕಣ್ಣಿನಲ್ಲಿ ತೀವ್ರ ದೃಷ್ಟಿ ದೋಷವನ್ನು ಹೊಂದಿದ್ದಾರೆ. ದುರದೃಷ್ಟವಶಾತ್, ಕಾರ್ನಿಯಾ ಟ್ರಾನ್ಸ್ಪ್ಲಾಂಟ್ಗಾಗಿ  ಕಾಯುತ್ತಿರುವ ರೋಗಿಗಳ ಸಂಖ್ಯೆ, ದಾನ ಮಾಡಿದ ಕಾರ್ನಿಯಾಗಳ ಲಭ್ಯತೆಗಿಂತ ಹೆಚ್ಚು.

ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ (ಆಗಸ್ಟ್ 25 – ಸೆಪ್ಟೆಂಬರ್ 8) ಭಾಗವಾಗಿ, ನಾರಾಯಣ ನೇತ್ರಾಲಯವು ವಿವಿಧ ಕಾರ್ಯಕ್ರಮಗಳು ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ, ಜನರನ್ನು ತಮ್ಮ ಕಣ್ಣುಗಳನ್ನು ದಾನ ಮಾಡಲು ಮತ್ತು ದೃಷ್ಟಿಯ ಉಡುಗೊರೆಯನ್ನು ನೀಡಲು ಪ್ರೋತ್ಸಾಹಿಸುತ್ತಿದೆ.

40ನೇ ನೇತ್ರದಾನ ಪಾಕ್ಷಿಕದ ಅಂಗವಾಗಿ, ನಾರಾಯಣ ನೇತ್ರಾಲಯವು ಭಾನುವಾರ, ಸೆಪ್ಟೆಂಬರ್ 7, 2025 ರಂದು ಬೆಳಿಗ್ಗೆ 7:15 ಕ್ಕೆ ಸೈಕ್ಲಾಥಾನ್ – “ರೈಡ್ ಫಾರ್ ಸೈಟ್” ಕಾರ್ಯಕ್ರಮವನ್ನು ಅದರ ವೈಟ್‌ಫೀಲ್ಡ್ ಶಾಖೆಯಿಂದ, ಸೀತಾರಾಮಪಾಳ್ಯ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಆಯೋಜಿಸಿತ್ತು.

ಕಾರ್ಯಕ್ರಮವನ್ನು ನಾರಾಯಣ ನೇತ್ರಾಲಯದ ನಿರ್ದೇಶಕರಾದ ಡಾ. ನರೇನ್ ಶೆಟ್ಟಿ ಮತ್ತು ನಾರಾಯಣ ನೇತ್ರಾಲಯದ ವೈಟ್‌ಫೀಲ್ಡ್ ಶಾಖೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಹರ್ಷ ನಾಗರಾಜ್ ಅವರು ಫ್ಲಾಗ್ ಆಫ್ ಮಾಡಿದರು.. ಈ ಸಂದರ್ಭದಲ್ಲಿ ಮಾತನಾಡಿದ ಡಾ. ನರೇನ್ ಶೆಟ್ಟಿ, ಕಾರ್ನಿಯಾ ಅಂಗಾಂಶದ ಬೇಡಿಕೆ ಮತ್ತು ಲಭ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು. 

ಅವರು, “ಕಾರ್ನಿಯಾಗಳ ಬೇಡಿಕೆ ವಾರ್ಷಿಕವಾಗಿ 2 ಲಕ್ಷಕ್ಕಿಂತ ಸ್ವಲ್ಪ ಹೆಚ್ಚಿದೆ, ಆದರೆ ಕೇವಲ ಸುಮಾರು 22,000 ಕಣ್ಣುಗಳನ್ನು ಮಾತ್ರ ದಾನ ಮಾಡಲಾಗುತ್ತದೆ. ಹೆಚ್ಚು ಜನರು ಮುಂದೆ ಬಂದು ತಮ್ಮ ಕಣ್ಣುಗಳನ್ನು ದಾನ ಮಾಡಿದರೆ, ನಾವು ಕಾರ್ನಿಯಾ ಅಂಧತ್ವದ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ನೀವು ಇನ್ನೊಬ್ಬ ವ್ಯಕ್ತಿಗೆ ನೀಡಬಹುದಾದ ಅತ್ಯಂತ ಅಮೂಲ್ಯವಾದ ಉಡುಗೊರೆ ನಿಮ್ಮ ಕಣ್ಣುಗಳು” ಎಂದು ಹೇಳಿದರು.

ಈ ಸಂದೇಶಕ್ಕೆ ಪೂರಕವಾಗಿ, ನಾರಾಯಣ ನೇತ್ರಾಲಯದ ಸಿ.ಇ.ಒ ಗ್ರೂಪ್ ಕ್ಯಾಪ್ಟನ್ ಎಸ್. ಕೆ. ಮಿತ್ತಲ್ ವಿ.ಎಸ್.ಎಂ ಅವರು, “ಕಾರ್ನಿಯಾ ಅಂಧತ್ವವನ್ನು ತಡೆಗಟ್ಟಬಹುದು ಮತ್ತು ಜನರು ತಮ್ಮ ಕಣ್ಣುಗಳನ್ನು ಸುಡುವ ಅಥವಾ ಹೂಳುವ ಬದಲು ದಾನ ಮಾಡಲು ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ಮೂಲ ಸಂದೇಶ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಉತ್ಸಾಹದಿಂದ ಭಾಗವಹಿಸಿದ್ದರು. 12 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು ಮತ್ತು ವೈದ್ಯರು ಸೇರಿದಂತೆ, ಫಿಟ್‌ನೆಸ್ ಚಟುವಟಿಕೆಯೊಂದಿಗೆ ತಮ್ಮ ಭಾನುವಾರ ಬೆಳಿಗ್ಗೆಯನ್ನು ಪ್ರಾರಂಭಿಸಲು ಬಯಸಿದ ಸೈಕ್ಲಿಂಗ್ ಉತ್ಸಾಹಿಗಳು ಮತ್ತು ನಾಗರಿಕರು, ಈ ಮಹತ್ತರ ಕಾರ್ಯದ ಬಗ್ಗೆ ಜಾಗೃತಿ ಮೂಡಿಸಲು ಒಟ್ಟಾಗಿ ಸೈಕಲ್ ತುಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾರತಹಳ್ಳಿಯ ನಿವಾಸಿಯೊಬ್ಬರು, ನಾರಾಯಣ ನೇತ್ರಾಲಯದ ಉಪಕ್ರಮವನ್ನು ಶ್ಲಾಘಿಸಿ, ಇದು ಫಿಟ್‌ನೆಸ್ ಮತ್ತು ಸಾಮಾಜಿಕ ಜವಾಬ್ದಾರಿ ಎರಡನ್ನೂ ಹೇಗೆ ಉತ್ತೇಜಿಸುತ್ತದೆ ಎಂಬುದನ್ನು ಪ್ರಶಂಸೆ ಮಾಡಿದರು.

 ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಸೈಕ್ಲೋಥೋನ್ ನಲ್ಲಿ ಭಾಗವಹಿಸಿ, ಈ ಮಹತ್ವದ ಕಾರ್ಯಕ್ಕೆ ಕೊಡುಗೆ ನೀಡಿದ್ದಕ್ಕಾಗಿ ಮೆಚ್ಚುಗೆಯ ಪ್ರಮಾಣಪತ್ರಗಳನ್ನು ನೀಡಲಾಯಿತು.

ಡಾ. ಹರ್ಷ ನಾಗರಾಜ್ ಅವರು ಎಲ್ಲಾ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿ, ಸಾರ್ವಜನಿಕರಿಗೆ ಮತ್ತೊಮ್ಮೆ ತಮ್ಮ ಕಣ್ಣುಗಳನ್ನು ದಾನ ಮಾಡಲು ಮತ್ತು ದೃಷ್ಟಿಯ ಉಡುಗೊರೆಯನ್ನು ನೀಡಲು ಮನವಿ ಮಾಡಿದರು.

ಪ್ರತಿಯೊಬ್ಬ ನಾಗರಿಕನು ತನ್ನ ಕಣ್ಣುಗಳನ್ನು ದಾನ ಮಾಡಿದರೆ ನಾಲ್ಕು ಅಥವಾ ಹೆಚ್ಚು ವ್ಯಕ್ತಿಗಳ ಜೀವನವನ್ನು ಪರಿವರ್ತಿಸಬಹುದು ಎಂಬ ಭರವಸೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ನೇತ್ರದಾನದ ಪ್ರತಿಜ್ಞೆ ಮಾಡಲು ಬಯಸುವವರು, ಕೇವಲ 8884018800 ಗೆ ಮಿಸ್ಡ್ ಕಾಲ್ ನೀಡಿ ನೇತ್ರದಾನದ ಪ್ರತಿಜ್ಞೆ ಮಾಡಿ.


Post a Comment

0Comments

Post a Comment (0)