ಹವಾಮಾನ ವೈಪರೀತ್ಯ ಮನುಕುಲದ ಸವಾಲಾಗಿದೆ - ಸಚಿವ ಈಶ್ವರ ಖಂಡ್ರೆ

varthajala
0

 ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ್ ಬಿ ಖಂಡ್ರೆ ಮಾತನಾಡಿ ಹವಾಮಾನ ವೈಪರೀತ್ಯ ಮನುಕುಲದ ಸವಾಲಾಗಿದೆ. ಜಾಗತಿಕ ತಾಪಮಾನ ಹೆಚ್ಚಾಗಿದೆ. ಗುಡ್ಡ ಕುಸಿತ, ಪ್ರವಾಹ,  ಪ್ರಕೃತಿ ವಿಕೋಪದಿಂದ ಮನುಕುಲ ನಾಶವಾಗುವ ಸಂಭವವಿದೆ. ಪ್ರಕೃತಿ ಪರಿಸರ ಸಂರಕ್ಷಣೆ ಆದ್ಯ ಕರ್ತವ್ಯ. ಅರಣ್ಯ ಸಂಪತ್ತನ್ನು ಸಂರಕ್ಷಿಸಲು ನೂರಾರು ಜನ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.

ಕುಖ್ಯಾತ ದಂತಚೋರನಾದ ವೀರಪ್ಪನ್‍ನ ಮೋಸದ ಬಲೆಗೆ ಸಿಲುಕಿ ಭಾರತೀಯ ಅರಣ್ಯ ಸೇವಾ ಅಧಿಕಾರಿಯಾದ ಪಿ ಶ್ರೀನಿವಾಸ್ ಇವರು ಹುತಾತ್ಮರಾಗಿದ್ದಾರೆ. 1974ರಲ್ಲಿ ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಯ ರೇನಿಹಳ್ಳಿ ಮತ್ತು ಹೆನ್ ವಾಲ್ಘಟಿಯಲ್ಲಿ ಅರಣ್ಯ ನಾಶವನ್ನು ವಿರೋಧಿಸಿ ಗೌರಾದೇವಿಯ ನೇತೃತ್ವದಲ್ಲಿ ಮಹಿಳೆಯರು ಮರ ಕಡಿಯುವುದನ್ನು ತಡೆಗಟ್ಟಲು ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಅಹಿಂಸಾತ್ಮಕವಾಗಿ ಹೋರಾಟ ನಡೆಸಿದ್ದಾರೆ ಎಂದು ತಿಳಿಸಿದರು.

ಪಶ್ಚಿಮ ಘಟ್ಟ ಜೀವಿಗಳ ವೈವಿದ್ಯ ತಾಣ: ಸಂಪದ್ಬರಿತವಾದ ಅಭಯಾರಣ್ಯವು ಪಶ್ಚಿಮ ಘಟ್ಟದಲ್ಲಿದೆ. ವಿವಿಧ ಪ್ರಾಣಿ, ಜೀವಿ ಸಂಕುಲವಿದ್ದು ಹಲವು ಜೀವಿಗಳ ವೈವಿದ್ಯತಾಣವಾಗಿದೆ. ಮಳೆಯನ್ನು ಬರಿಸುವ ಶಕ್ತಿ ಪಶ್ಚಿಮಘಟ್ಟಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪರಿಸರ, ಪ್ರಕೃತಿ, ವನ್ಯ ಜೀವಿಗಳ ಸಂರಕ್ಷಣೆಗೆ ಬದ್ದರಾಗೋಣ ಬೆಂಗಳೂರು ವೇಗಗತಿಯಲ್ಲಿ ಬೆಳೆಯುತ್ತಿದೆ. ಗಾರ್ಡನ್ ಸಿಟಿಯಿಂದ ಕಾಂಕ್ರಿಟ್ ಸಿಟಿಯಾಗಿದೆ. ಪುನಃ ಬೆಂಗಳೂರನ್ನು ಉದ್ಯಾನಗರಿಯಾಗಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ. ಯಲಹಂಕದ ಹತ್ತಿರ  ಉದ್ಯಾನವನದ  ಯೋಜನೆ ರೂಪಿಸಲಾಗಿದೆ. ನಾವು ನೀವು ಸೇರಿ ಪರಿಸರ, ಪ್ರಕೃತಿ, ವನ್ಯ ಜೀವಿಗಳ ಸಂರಕ್ಷಣೆಗೆ ಬದ್ದರಾಗೋಣ.
ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (ಅರಣ್ಯಪಡೆ ಮುಖ್ಯಸ್ಥರು) ಶ್ರೀಮತಿ ಮೀನಾಕ್ಷಿ ನೇಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)