ದೀಪಾವಳಿ ಮೇಳದ ಅಂಗವಾಗಿ “ದಿವ್ಯ ಕಲಾ ಪ್ರದರ್ಶನ-2025”

varthajala
0

 ಬೆಂಗಳೂರು, ಅಕ್ಟೋಬರ್ 13, (ಕರ್ನಾಟಕ ವಾರ್ತೆ): ದೀಪಾವಳಿ ಮೇಳದ ಅಂಗವಾಗಿ ವಿಕಲಚೇತನ/ದಿವ್ಯಾಂಗ ವಿದ್ಯಾರ್ಥಿಗಳು ತಯಾರಿಸಿದ ಪರಿಸರ ಸ್ನೇಹಿ ಕರಕುಶಲ ವಸ್ತುಗಳ “ದಿವ್ಯ ಕಲಾ ಪ್ರದರ್ಶನ-2025”ನ್ನು ಅಕ್ಟೋಬರ್ 15, 2025ರಂದು ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆÀ  ಭಾರತ ಸರ್ಕಾರದ ವಿಕಲಚೇತನರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ ಹಾಗೂ ಉದ್ಯೋಗ ಮಹಾ ನಿರ್ದೇಶನಾಲಯ ಕಾರ್ಮಿಕ ಮತ್ತು ಉದ್ಯೊಗ ಸಚಿವಾಲಯ, ಪೀಣ್ಯ, ಬೆಂಗಳೂರು ಕಚೇರಿಯಲ್ಲಿ ನಾನ್-ಫಾರಮಲ್ ಟ್ರೇಡ್‍ಗಳಲ್ಲಿ ತರಬೇತಿ ಪಡೆಯುತ್ತಿರುವ ವಿಕಲಚೇತನ/ದಿವ್ಯಾಂಗ ವಿದ್ಯಾರ್ಥಿಗಳು ತಮ್ಮ ಕೌಶಲ್ಯಪೂರಿತ ಕೈಯಲ್ಲಿ ಅರಳಿದ ವಿವಿಧ ಕರಕುಶಲ ವಸ್ತುಗಳು, ಅಲಂಕಾರಿಕ ಕಲಾಕೃತಿಗಳು, ಡ್ರೇಸ್, ಪೇಂಟಿಂಗ್ ಮುಂತಾದವುಗಳನ್ನು ಸಾರ್ವಜನಿಕ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.


ಈ ಪ್ರದರ್ಶನದ ಉದ್ಘಾಟನೆಯನ್ನು ಅಂಗವಿಕಲರ ಹಕ್ಕುಗಳ ಕಾಯ್ದೆ ಆಯುಕ್ತರಾದ ಸೂರ್ಯವಂಶೀ ದಾಸ ಅವರು ನೆರವೇರಿಸುವರು. ಕಾರ್ಯಕ್ರಮದಲ್ಲಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರು, ಮುಖ್ಯಸ್ಥರು, ಅಲಿಮ್ಕೋ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿರುವರು.

ದಿವ್ಯಾಂಗ ವಿದ್ಯಾರ್ಥಿಗಳ ಕೌಶಲ್ಯವನ್ನು ಪ್ರೋತ್ಸಾಹಿಸುವುದು ಹಾಗೂ ಪರಿಸರ ಸ್ನೇಹಿ ಕಲಾ ಪ್ರಕಾರಗಳನ್ನು ಪರಿಚಯಿಸುವುದು ಈ ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ. ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು,   ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವಿಕಲಚೇತನರನ್ನು ಪ್ರೋತ್ಸಾಹಿಸಬೇಕೆಂದು ವಿಕಲಚೇತನರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ ಉಪನಿರ್ದೇಶಕರು (ಪುನರ್ವಸತಿ) ಶಿವಶಾಂತವೀರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)