ಬೆಂಗಳೂರು, ಅಕ್ಟೋಬರ್ 14, (ಕರ್ನಾಟಕ ವಾರ್ತೆ): ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಗೆ ಸಂಬಂಧಿಸಿದ ಮಹಿಳೆಯರಿಂದ ಸಲ್ಲಿಕೆಯಾದ ಮತ್ತು ಸಲ್ಲಿಸಲ್ಪಡುವ ದೂರುಗಳ ವಿಚಾರಣೆ ನಡೆಸಿ ಪರಿಹಾರ ನೀಡುವ ಸಲುವಾಗಿ ರಾಷ್ಟ್ರೀಯ ಮಹಿಳಾ ಆಯೋಗದ ವತಿಯಿಂದ “ರಾಷ್ಟ್ರೀಯ ಮಹಿಳಾ ಆಯೋಗ ಆಪ್‍ಕೇ ದ್ವಾರ್ – ಮಹಿಳಾ ಜನ್ ಸುನ್ವಾಹಿ” ಕಾರ್ಯಕ್ರಮವನ್ನು 2025ನೇ ಅಕ್ಟೋಬರ್ 13 ಮತ್ತು 14 ರಂದು ಪ್ರತಿ ದಿನ ಅಪರಾಹ್ನ 12 ಗಂಟೆಯಿಂದ ಬೆಂಗಳೂರಿನ ಡಾ. ಎಂ.ಹೆಚ್. ಮರಿಗೌಡ ರಸ್ತೆಯಲ್ಲಿರುವ ಸುಧಾರಣಾ ಸಂಸ್ಥೆಗಳ ಸಂಕೀರ್ಣದ ಸಂಭ್ರಮ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಕ್ಟೋಬರ್ 13 ರಂದು ಮೊದಲ ದಿನ ಕಾರ್ಯಕ್ರಮವನ್ನು ಆಯೋಗದ ಅಧ್ಯಕ್ಷೆ ವಿಜಯಾ ರಾಹತ್‍ಕರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಕೆ ಯಾಗಿರುವ ಮಹಿಳೆಯರ ದೂರುಗಳ ಪರಿಹಾರಕ್ಕೆ ಆಯೋಗವೇ ರಾಜ್ಯಕ್ಕೆ ಆಗಮಿಸಿ, ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಆಯೋಗಕ್ಕೆ ಸಲ್ಲಿಕೆಯಾಗಿರುವ ಬೆಂಗಳೂರು ಮತ್ತು ತುಮಕೂರು ಜಿಲ್ಲೆಯ 262 ದೂರುಗಳನ್ನು 2 ದಿನಗಳಲ್ಲಿ ಪರಿಹರಿಸಲಾಗಿದೆ. ಮಹಿಳೆ ಯರು ದೂರದ ರಾಜಧಾನಿಗೆ ಬರಲು ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ ಬೆಂಗಳೂರಲ್ಲೇ ವಿಶೇಷ ಉಪಕ್ರಮವನ್ನು ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪೆÇಲೀಸ್ ಆಯುಕ್ತ ಸೀಮಂತ್ ಕುಮಾರ್‍ಸಿಂಗ್, ಮಹಿಳಾ ರಾಜ್ಯ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹಾಗೂ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಇದ್ದರು.