ಬೆಂಗಳೂರು, ಅಕ್ಟೋಬರ್ 23 (ಕರ್ನಾಟಕ ವಾರ್ತೆ) : ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ “ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ” ಅಡಿಯಲ್ಲಿ ಜೆ.ಎಸ್.ಎಸ್ ಕಲಾ ಕಾಲೇಜು, ರೋಟರಿ ಸಂಸ್ಥೆ, ಒಂದು ಕನ್ಸಲ್ಟೆನ್ಸಿ ಸೇರಿದಂತೆ 6 ಮಂದಿ ಸಾರ್ವಜನಿಕರು ವಿವಿಧ ಪ್ರಾಣಿ-ಪಕ್ಷಿಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.
ಬೆಂಗಳೂರಿನ ಕೆಎಎಸ್ ಅಧಿಕಾರಿ ಶ್ರೀಮತಿ ಕೆ.ಟಿ.ಶಾಂತಲಾ ಅವರು 10 ಸಾವಿರ ರೂ.ಗಳಿಗೆ ನವಿಲು ಮತ್ತು ಕಾಳಿಂಗ ಸರ್ಪವನ್ನು, ವಿದುರ್ ಕಡಿದಾಳ್ ಅವರು 20 ಸಾವಿರ ರೂ.ಗಳಿಗೆ ಹೂಲಾಕ್ ಗಿಬ್ಬನ್ ಅನ್ನು, ರಿಷಕ್.ಎಸ್ ಅವರು 50 ಸಾವಿರ ರೂ.ಗಳಿಗೆ ಕಪ್ಪು ಚಿರತೆಯನ್ನು, ನಾಗರಾಜ್ ಸಿ.ವಿ. ಅವರು 50 ಸಾವಿರ ರೂ.ಗಳಿಗೆÀ ಭಾರತೀಯ ಚಿರತೆಯನ್ನು, ಮುಂಬೈನ ನಿಜೇಶ್ ಶಾ ಅವರು 50 ಸಾವಿರ ರೂ.ಗಳಿಗೆ ಕಪ್ಪು ಚಿರತೆಯನ್ನು, ಮೈಸೂರಿನ ಜೆಎಸ್‍ಎಸ್ ಲಾ ಕಾಲೇಜಿನವರು 45 ಸಾವಿರ ರೂ.ಗಳಿಗೆ ಭಾರತೀಯ ನರಿ ಮತ್ತು ಸಾಂಬಾರ್ ಜಿಂಕೆಯನ್ನು, ರಶ್ಮಿ ಇಟಗಿ ಅವರು 50 ಸಾವಿರ ರೂ.ಗಳಿಗೆ ಕಪ್ಪು ಚಿರತೆಯನ್ನು ರೋಟರಿ ಮೈಸೂರು ಮಿಡ್‍ಟೌನ್ ಅವರು 25 ಸಾವಿರ ರೂ.ಗಳಿಗೆ ರಿಂಗ್ ಟೇಲ್ಡ್ ಲೆಮರ್‍ನ್ನು. ಚಿಕ್ಕಮಗಳೂರಿನ ವಿನ್ನರ್ಸ್ ಪ್ಯಾರಡೈಸ್ ಮತ್ತು ಚಂದನ ಕನ್ಸಲ್ಟೆನ್ಸಿ ಇವರು 75 ಸಾವಿರ ರೂ.ಗಳಿಗೆ ಆಫ್ರಿಕನ್ ಬೇಟೆ ಚಿರತೆಯನ್ನು ದತ್ತು ಸ್ವೀಕಾರ ಮಾಡಿದ್ದಾರೆ ಎಂದು ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.