ಕಾನೂನು ಆಯೋಗದ ಅಧ್ಯಕ್ಷರಿಗೆ ಗರ್ಭಿಣಿ ಸರ್ಕಾರಿ ನೌಕರರಿಗೆ ವೈದ್ಯಕೀಯ ತಪಾಸಣೆಗೆ ರಜಾ ಮಂಜೂರು ಕುರಿತು ಶ್ರೀಮತಿ ರೋಶನಿಗೌಡ ಮನವಿ

VK NEWS
0

ಬೆಂಗಳೂರು: ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಡಾ||ಅಶೋಕ್ ಹಿಂಚಗೇರಿರವರನ್ನು ಅಖಿಲ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘ ಅಧ್ಯಕ್ಷರಾದ ಶ್ರೀಮತಿ ರೋಶಿನಿಗೌಡರವರು,   ಗರ್ಭಿಣಿ ಸರ್ಕಾರಿ ನೌಕರರಿಗೆ ವೈದ್ಯಕೀಯ ತಪಾಸಣೆಗಾಗಿ ಒಂಬತ್ತು ದಿನಗಳ (ಮಾಸಿಕ ಒಂದರಂತೆ) ವೇತನ ಸಹಿತ ವಿಶೇಷ ರಜೆ ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ಮನವಿ ಪತ್ರ ಸಲ್ಲಿಸಿದರು.

ಡಾ ವೀಣಾ ಕೃಷ್ಣಮೂರ್ತಿ ರಾಜ್ಯ ಖಜಾಂಚಿ ಶ್ರೀಮತಿ ಗೀತಾಮಣಿ ಗೌರವಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ *ಶ್ರೀಮತಿ ರೋಶನಿಗೌಡರವರು* ಮಾತನಾಡಿ ಕರ್ನಾಟಕ ಸರ್ಕಾರವು ತಮ್ಮ ಶಿಪಾರಸ್ಸಿನ ಮೇರೆಗೆ ರಾಜ್ಯದ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ವಾರ್ಷಿಕ 12 ಋತುಚಕ್ರ ರಜೆಯನ್ನು ಮಂಜೂರು ಮಾಡಿದ್ದು, ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ. 

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಇಂತಹ ತೀರ್ಮಾನ ಮಾಡಿರುವ ಮೊದಲ ರಾಜ್ಯವಾಗಿದ್ದು, ಇದಕ್ಕಾಗಿ ರಾಜ್ಯದ ಸಮಸ್ತ ಮಹಿಳೆಯರ ಪರವಾಗಿ ಈ ಐತಿಹಾಸಿಕ ತೀರ್ಮಾನಕ್ಕೆ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ಮುಂದುವರಿದು, ಗರ್ಭಿಣಿ ಉದ್ಯೋಗಸ್ಥ ಮಹಿಳೆಯರಿಗೆ ರಜೆ ದೊರೆಯದ ಕಾರಣ ಹಲವಾರು ಬಾರಿ ವೈದ್ಯಕೀಯ ತಪಾಸಣೆಗೆ ಒಳಗಾಗದೇ ಹೆರಿಗೆ ಸಮಯದಲ್ಲಿ ಮಾರಣಾಂತಿಕ ಶಿಶು ಮತ್ತು ತಾಯಿಯ ಆರೋಗ್ಯಕ್ಕೆ ಹಾನಿಯಾಗುವ ಸಂಭವ ಇರುತ್ತದೆ. ಋತುಚಕ್ರ ರಜೆ ವ್ಯಾಪ್ತಿಗೆ ಬಾರದೆ ಗರ್ಭಿಣಿ ಮಹಿಳೆಯರಿಗೆ ಈ ಅವಧಿಯಲ್ಲಿ ವೈದ್ಯಕೀಯ ತಪಾಸಣೆಗಾಗಿ ಒಂಬತ್ತು ದಿನಗಳ (ಮಾಸಿಕ ಒಂದರಂತೆ) ವೇತನ ಸಹಿತ ವಿಶೇಷ ರಜೆ ಮಂಜೂರು ಮಾಡಲು ಘನ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಸಲ್ಲಿಸಲಾಯಿತು.

*ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾದ ಡಾ||ಅಶೋಕ್ ಹಿಂಚಗೇರಿ ರವರು ಮನವಿ ಪತ್ರ ಸ್ವೀಕರಿಸಿ ಗರ್ಭಿಣಿ ನೌಕರರಿಗೆ ನ್ಯಾಯಯುತ ಬೇಡಿಕೆ, ಸೌಲಭ್ಯಗಳು ಕುರಿತು ರಾಜ್ಯ ಸರ್ಕಾರಕ್ಕೆ  ಇದರ ಕುರಿತು ಪತ್ರ ಬರೆಯಲಾಗುವುದು ಎಂದು ಹೇಳಿದರು*

Post a Comment

0Comments

Post a Comment (0)