“ಹವಾಮಾನ ಕ್ರಮವರ್ಧನೆ: ಕೃಷಿ, ಜಲಸಂಪನ್ಮೂಲ, ತೋಟಗಾರಿಕೆ ಮತ್ತು ಜಾನುವಾರು ವಲಯಗಳಲ್ಲಿ ಉತ್ತಮ ಹವಾಮಾನ ಕ್ರಮಗಳ ಅಳವಡಿಕೆ” ಕುರಿತು ತರಬೇತಿ ಕಾರ್ಯಕ್ರಮ

varthajala
0

 ಬೆಂಗಳೂರು, ಅಕ್ಟೋಬರ್ 14, (ಕರ್ನಾಟಕ ವಾರ್ತೆ): ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅವರ ಅನುದಾನದಲ್ಲಿ “ಹವಾಮಾನ ಕ್ರಮವರ್ಧನೆ: ಕೃಷಿ, ಜಲಸಂಪನ್ಮೂಲ,  ತೋಟಗಾರಿಕೆ ಮತ್ತು ಜಾನುವಾರು ವಲಯಗಳಲ್ಲಿ ಉತ್ತಮ ಹವಾಮಾನ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಕುರಿತು”  ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು  ನ್ಯೂ ಕುಮಾರಕೃಪ ಅತಿಥಿ ಗೃಹದಲ್ಲಿ ಆಯೋಜಿಸಿದ್ದು, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಹನುಮಂತಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಹವಾಮಾನ ಬದಲಾವಣೆಯಿಂದ ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಇನ್ನಿತರೆ ಚಟುವಟಿಕೆಗಳಲ್ಲಿ ಆಗುವ ತೊಂದರೆಗಳು ಮತ್ತು ಅವುಗಳಿಂದ ಹೊಂದಾಣಿಕೆ ಹಾಗೂ ಉಪಶಮನ ಮಾಡುವ ಕ್ರಮಗಳ ಕುರಿತು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಮೌಲ್ಯಮಾಪನ, ಕಾರ್ಯಯೋಜನೆ, ಸಂಶೋಧನೆ ಹಾಗೂ ಹವಾಮಾನ ಬದಲಾವಣೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿ. ಬಿ.ಪಿ. ಅವರು ಮಾತನಾಡಿ, ಎಂಪ್ರಿ ಸಂಸ್ಥೆಯು ಹವಾಮಾನ ಬದಲಾವಣೆ ಕಾಯಕ್ರಮದಲ್ಲಿ ರಾಜ್ಯಾದ್ಯಂತ ನಡೆಸುತ್ತಿರುವ ಕೆಲಸಗಳನ್ನು ಶ್ಲಾಘಿಸುತ್ತ ಮುಂಬರುವ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ತಲುಪುವಂತೆ ಕ್ರಮಗಳನ್ನು ಕೈಗೊಳ್ಳಲು ಕೆಲಸ ಮಾಡಬೇಕಾದ ಅವಶ್ಯಕತೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳು ಹಾಗೂ ಸ್ವಾಗತವನ್ನು ಸಂಸ್ಥೆಯ ನಿರ್ದೇಶಕರಾದ ಟಿ. ಮಹೇಶ್ ಅವರು ನಡೆಸಿಕೊಟ್ಟರು ಹಾಗೂ ವಂದನಾರ್ಪಣೆಯನ್ನು ಸಂಸ್ಥೆಯ ನಿರ್ದೇಶಕರು (ಸಂಶೋಧನೆ) ಡಾ.ಪ್ರಮೋದ್ ಕಟ್ಟಿ ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಪಶುಸಂಗೋಪನಾ ಇಲಾಖೆಯ 30 ಅಧಿಕಾರಿಗಳು ರಾಜ್ಯದ ಎಲ್ಲಾ ವಿಭಾಗಗಳಿಂದ ಉಪಸ್ಥಿತರಿದ್ದರು.

Post a Comment

0Comments

Post a Comment (0)