ನವೆಂಬರ್ 25 ರಂದು ಕರಡು ಮತದಾರರ ಪಟ್ಟಿ ಪ್ರಕಟ

varthajala
0

 ಬೆಂಗಳೂರು, ನವೆಂಬರ್ 11 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಪರಿಷತ್ತಿನ ಕರ್ನಾಟಕ ಪಶ್ಚಿಮ, ಆಗ್ನೇಯ ಪದವೀಧರರು ಮತ್ತು ಕರ್ನಾಟಕ ಈಶಾನ್ಯ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 6 ಕೊನೆಯ ದಿನಾಂಕವಾಗಿತ್ತು. ಅದರಂತೆ ಅಂತಿಮ ದಿನಾಂಕದವರೆಗೆ ಜಿಲ್ಲಾವಾರು ಅರ್ಜಿಗಳು ಸ್ವೀಕೃತವಾಗಿವೆ. ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ನವೆಂಬರ್ 25 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.


ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಸ್ವೀಕೃತವಾಗಿರುವ ಅರ್ಜಿಗಳ ವಿವರ: ಧಾರವಾಡ – 26,324, ಗದಗ-17,911, ಹಾವೇರಿ-18,554, ಉತ್ತರಕನ್ನಡ-14,577,  ಒಟ್ಟು 77,366 ಅರ್ಜಿಗಳು ಸ್ವೀಕೃತವಾಗಿವೆ.

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಸ್ವೀಕೃತವಾಗಿರುವ ಅರ್ಜಿಗಳ ವಿವರÀ: ಚಿತ್ರದುರ್ಗ-37,976, ಚಿಕ್ಕಬಳ್ಳಾಪುರ – 23,469, ದಾವಣಗೆರೆ-24,876, ಕೋಲಾರ-27,406, ತುಮಕೂರು – 41,094, ಒಟ್ಟು 1,54,821 ಅರ್ಜಿಗಳು ಸ್ವೀಕೃತವಾಗಿವೆ.

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸ್ವೀಕೃತವಾಗಿರುವ ಅರ್ಜಿಗಳ ವಿವರ: ಬಳ್ಳಾರಿ-3,162, ಬೀದರ್-5,937, ಕಲಬುರಗಿ – 9,482, ಕೊಪ್ಪಳ-2,461, ರಾಯಚೂರು-5,963, ವಿಜಯನಗರ – 3,151, ಯಾದಗಿರಿ – 2,130, ಒಟ್ಟು 32,286 ಅರ್ಜಿಗಳು ಸ್ವೀಕೃತವಾಗಿವೆ.

ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಸ್ವೀಕೃತವಾಗಿರುವ ಅರ್ಜಿಗಳ ವಿವರ: ಬೆಂಗಳೂರು ನಗರ-7,476, ಬೆಂಗಳೂರು ಗ್ರಾಮಾಂತರ – 2,892, ಬಿಬಿಎಂಪಿ ಉತ್ತರ – 3,679, ಬಿಬಿಎಂಪಿ ದಕ್ಷಿಣ – 3456, ಬಿಬಿಎಂಪಿ ಕೇಂದ್ರ – 2,431, ರಾಮನಗರ-2,712, ಒಟ್ಟು 22,646 ಅರ್ಜಿಗಳು ಸ್ವೀಕೃತವಾಗಿವೆ ಎಂದು ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ ಚುನಾವಣಾ ಶಾಖೆಯ ಜಂಟಿ ಮುಖ್ಯ ಚುನಾವಣಾಧಿಕಾರಿ ಯೋಗೇಶ್ವರ ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)