ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ): ಇಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವೃತ್ತಿ ಸ್ಪರ್ಧೆ ಹಾಗೂ ವಾರ್ಷಿಕ ಕ್ರೀಡಾಕೂಟ – 2025 ನ್ನು ಭಾರತ ಹಾಕಿ ತಂಡದ ಮಾಜಿ ನಾಯಕರಾದ ಅರ್ಜುನ್ ಹಾಲಪ್ಪ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರ್ದೇಕರಾದ ಪ್ರಶಾಂತ್ ಠಾಕೂರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಡಿಜಿಪಿ ನಂಜುಂಡಸ್ವಾಮಿ ಮತ್ತು ಹೋಂಗಾಡ್ರ್ಸ್ ಡಿಸಿಜಿ ಶ್ರೀಮತಿ ರಶ್ಮಿ ಉಪಸ್ಥಿತರಿದ್ದರು.