ಬೆಂಗಳೂರು: ರೇಷನ್ ರೂಮ್ ಹಾಗೂ ಮಹಿಳಾ ನೇತೃತ್ವದ ‘ಶೀ ಫಾರ್ ಸೋಸೈಟಿ’ ಆಶ್ರಯದಲ್ಲಿ ಆಯೋಜಿಸಲಾದ “ನಮ್ಮ ಬೆಂಗಳೂರಿನ ಅತಿ ದೊಡ್ಡ ಕ್ರಿಸ್ಮಸ್ ಬೈಕ್ ರೈಡ್” ಕಾರ್ಯಕ್ರಮ ಹೆಚ್ ಎಂ ಟಿ ಆಟದ ಮೈದಾನ ದಿಂದ ಆರ್ ಟಿ ನಗರ ಮೆಕ್ರಿ ಸರ್ಕಲ್, ಜಯಮಹಲ್ ಪ್ಯಾಲೇಸ್ ರಸ್ತೆ ಯಿಂದ ಟಿವಿ ಟವರ್ ವರೆಗೂ ಬೈಕ್ ರೈಡ್ ಯಶಸ್ಸು ಕಂಡಿತು .
ಕ್ರಿಸ್ಮಸ್ ಅನ್ನು ಕೇವಲ ಹಬ್ಬವಾಗಿ ಮಾತ್ರವಲ್ಲ, ಸಮಾಜಮುಖಿ ಸೇವೆಯಾಗಿ ಆಚರಿಸುವ ಸಂದೇಶವನ್ನು ಈ ಬೈಕ್ ರೈಡ್ ಪರಿಣಾಮಕಾರಿಯಾಗಿ ಸಾರಿತು.
ರೇಷನ್ ರೂಮ್, ಆರ್.ಟಿ.ನಗರದಿಂದ ಅವರು ರ್ಯಾಲಿಗೆ ಅಧಿಕೃತವಾಗಿ ಚಾಲನೆ ನೀಡಿ ಶುಭ ಹಾರೈಸಿದರು. ‘ಶೀ ಫಾರ್ ಸೋಸೈಟಿ’ಮುಖ್ಯಸ್ಥೆ ಹರ್ಷಿನಿ ವೆಂಕಟೇಶ್, ರೇಷನ್ ರೂಂ ಸಿಇಒ ಮಂಜುನಾಥ್ SP ಮತ್ತಿತರರು ಉಪಸ್ಥಿತರಿದ್ದರು. ನವಚೇತನ ಟ್ರಸ್ಟ್ನ ವಿಶೇಷ ಸಾಮರ್ಥ್ಯದ ಮಕ್ಕಳ ಶಿಕ್ಷಣಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕ್ರಿಸ್ಮಸ್ ವಿಶೇಷ ಬೈಕ್ ರ್ಯಾಲಿಯಲ್ಲಿ 200ಕ್ಕೂ ಹೆಚ್ಚು ಸಾಂತಾ ವೇಷಧಾರಿ ಬೈಕರ್ಗಳು ಎಲ್ಲರನ್ನೊಳಗೊಳ್ಳುವಿಕೆ, ಸಹಾನುಭೂತಿ ಹಾಗೂ ಕೊಡುಗೆಯ ಸಂತೋಷ ಎಂಬ ಸಂದೇಶವನ್ನು ಸಾರಿದರು.
ಕ್ರಿಸ್ಮಸ್ ಅಲಂಕಾರಗಳು, ಘಂಟೆಗಳು, ಸಾಂತಾ ಥೀಮ್ ಆಭರಣಗಳಿಂದ ಅಲಂಕರಿಸಲಾದ ಬೈಕ್ಗಳೊಂದಿಗೆ ನಡೆದ ಈ ಬಣ್ಣಬಣ್ಣದ ರ್ಯಾಲಿ, ನಗರದ ರಸ್ತೆಗಳಲ್ಲಿ ಹಬ್ಬದ ಸಂಭ್ರಮ ಮೂಡಿಸಿತು.
ಸಾಮಾಜಿಕ ಜವಾಬ್ದಾರಿಯೊಂದಿಗೆ ಹಬ್ಬವನ್ನು ಆಚರಿಸುವ ಅಪೂರ್ವ ಮಾದರಿಯಾಗಿ ಈ ಕಾರ್ಯಕ್ರಮ ಗಮನ ಸೆಳೆಯಿತು.