ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪರೀಕ್ಷೋತ್ತರ ಪ್ರಕ್ರಿಯೆ 20 ದಿನದಲ್ಲಿ ಪೂರ್ಣ: ಸಚಿವ ಭೋಸರಾಜು

varthajala
0

 ಬೆಳಗಾವಿ / ಬೆಂಗಳೂರು: 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು ದಿ.3.5.2025 ರಿಂದ ದಿನಾಂಕ: 9.5.2025 ರವರೆಗೆ ಮುಖ್ಯ ಪರೀಕ್ಷೆ ನಡೆಸಿದ್ದು, ಪ್ರಸ್ತುತ ಮುಖ್ಯ ಪರೀಕ್ಷೆಯ ಪರೀಕ್ಷೋತ್ತರÀ ಕಾರ್ಯಗಳ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಇನ್ನು 20 ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಮುಖ್ಯ ಮಂತ್ರಿಗಳ ಪರವಾಗಿ ಸಣ್ಣ ನಿರಾವರಿ ಸಚಿವರಾದ ಎನ್.ಎಸ್.ಬೋಸರಾಜು ತಿಳಿಸಿದರು. ವಿಧಾನ ಪರಿಷತ್ ನಲ್ಲಿಂದು ಶಾಸಕ ನಿರಾಣಿ ಹನುಮಂತ ರುದ್ರಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಕೆಎಎಸ್ ಪೂರ್ವಭಾವಿ ಪರೀಕ್ಷೆ ಬರೆದು ಪಾಸಾದ ಪರೀಕ್ಷೆಯ ಅಭ್ಯರ್ಥಿಗಳ ಮುಖ್ಯ 

                          

ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ತಿದ್ದುಪಡಿ ನಿಯಮಗಳನ್ವಯ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

Post a Comment

0Comments

Post a Comment (0)