ಬೆಂಗಳೂರು : ವಿಶ್ವ ಹಿಂದೂ ಪರಿಷತ್ ವತಿಯಿಂದ ಹಿಂದೂ ಸಮಾಜದ ಸರ್ವಾಂಗೀಣ ಉನ್ನತಿಗಾಗಿ, ಸಂಸ್ಕೃತಿಯ ಉಳಿವಿಗಾಗಿ, ಜ್ಞಾನ-ಕರ್ಮ-ಭಕ್ತಿ ಹಾಗೂ ರಾಜ ಯೋಗಗಳ ಅರಿವಿಗಾಗಿ ಬೆಂಗಳೂರಿನ 108 ಧಾರ್ಮಿಕ ಕೇಂದ್ರಗಳಲ್ಲಿ "ಭಗವದ್ಗೀತಾ ಪಠಣ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಡಿಸೆಂಬರ್ 4, ಗುರುವಾರ ಮಧ್ಯಾಹ್ನ 3-30ಕ್ಕೆ ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ (ಮಂತ್ರಿ ಮಾಲ್ ಮೆಟ್ರೋ ಸ್ಟೇಷನ್ ಎದುರು) ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏರ್ಪಡಿಸಲಾಗಿದೆ. ಈ ವಿಶೇಷ ಲೋಕಕಲ್ಯಾಣ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ : ಶ್ರೀ ಸತೀಶ್-9945282078 / ಶ್ರೀಮತಿ ಜಗದಂಬಾ-8310973938
