ಮಲಿನಗೊಂಡಿರುವ ನದಿಗಳನ್ನು ಪುನರುಜ್ಜೀವನಗೊಳಿಸಲು ಕ್ರಿಯಾ ಯೋಜನೆ- ಸಚಿವ ಈಶ್ವರ ಬಿ ಖಂಡ್ರೆ

varthajala
0

 ಬೆಳಗಾವಿ / ಬೆಂಗಳೂರು: ನದಿಯ ಪಾತ್ರದಲ್ಲಿರುವ ನಗರಸಭೆ, ಪುರಸಭೆ, ಹಳ್ಳಿಗಳ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ಗೃಹ ತ್ಯಾಜ್ಯ ನೀರು ನೇರವಾಗಿ ಅಥವಾ ಪರೋಕ್ಷವಾಗಿ ಕರ್ನಾಟಕ ರಾಜ್ಯದ 12 ನದಿಗಳಿಗೆ ಸೇರುತ್ತಿದ್ದು, ಇದರಿಂದ ನದಿ ನೀರು ಮಾಲಿನ್ಯವಾಗುತ್ತಿರುವುದನ್ನು ಸರ್ಕಾರವು ಗಮನಿಸಿ, ಮಲಿನಗೊಂಡಿರುವ ನದಿ ನೀರಿನ ಬಳಕೆಯಿಂದ ಸಾರ್ವಜನಿಕರ ಆರೋಗ್ಯ ಹದಗೆಟ್ಟು ಜೀವಹಾನಿ ಉಂಟಾಗದಂತೆ ಮಲಿನಗೊಂಡಿರುವ ನದಿಗಳನ್ನು ಪುನರುಜ್ಜೀವನಗೊಳಿಸಲು ಸಮಯಾಧಾರಿತ ಕ್ರಿಯಾ ಯೋಜನೆಯನ್ನು ತಯಾರಿಸಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಂಜೂರಾತಿ ಪಡೆದು 2019-2020 ರಿಂದ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವರಾದ ಈಶ್ವರ್ ಬಿ.ಖಂಡ್ರೆ ಹೇಳಿದರು.ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು ರಾಜ್ಯದಲ್ಲಿ ಸುಮಾರು 12 ನದಿಗಳಿಗೆ ಒಳಚರಂಡಿ ನೀರು, ಕಾರ್ಖಾನೆ ನೀರು ಸೇರುತ್ತಿರುವ ಹಾಗೂ ಸರ್ಕಾರ ಇದರ ಬಗ್ಗೆ ತೆಗೆದುಕೊಂಡ ಮುಂಜಾಗ್ರತ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ (ನಿಯಂತ್ರಣ ಮತ್ತು ನಿವಾರಣಾ) ಕಾಯ್ದೆ -1974 ಅನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದ್ದು, ಕೈಗಾರಿಕೆಗಳಿಂದ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಯುಕ್ತ ನೀರನ್ನು ಸಂಸ್ಕರಿಸಿ, ಪುನರ್ಬಳಕೆ ಮಾಡಬೇಕೆಂದು ಸೂಚಿಸಿ, ಜಲ ಮಾಲಿನ್ಯ (ನಿಯಂತ್ರಣ ಮತ್ತು ನಿವಾರಣಾ) ಕಾಯ್ದೆ-1974 ಅಡಿಯಲ್ಲಿ ಸೆಕ್ಷನ್ 25 ಮತ್ತು 26 ಅಡಿಯಲ್ಲಿ ಸ್ಥಾಪನಾ ಅನುಮತಿ ಪತ್ರ ಮತ್ತು ಕಾರ್ಯಾಚರಣ ಸಮ್ಮತಿ ಪತ್ರಗಳನ್ನು ನೀಡುತ್ತಿದೆ. ಸಮ್ಮತಿ ಪತ್ರದಲ್ಲಿ ಇರುವ ಅನುಬಂಧಗಳ ಪ್ರಕಾರ ಎಲ್ಲಾ ಕೈಗಾರಿಕೆಗಳು ತ್ಯಾಜ್ಯ ನೀರನ್ನು ಸಂಸ್ಕರಿಸುವ ಸಲುವಾಗಿ ತ್ಯಾಜ್ಯ ನೀರಿನ ಸಂಸ್ಕರಣ ಘಟಕಗಳನ್ನು ಅಳವಡಿಸಿಕೊಂಡು ನಿಗದಿತ ಗುಣಮಾನಕಗಳಿಗೆ ಸಂಸ್ಕರಿಸಿ/ಶುದ್ಧೀಕರಿಸಿ ಮರುಬಳಕೆ ಮಾಡುವುದು ಕೈಗಾರಿಕೆಗಳ ಕರ್ತವ್ಯವಾಗಿರುತ್ತದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಚರಂಡಿಗಳ ಮುಖಾಂತರ ನದಿಗೆ ಸೇರುತ್ತಿರುವ ರೊಚ್ಚು ನೀರಿನ ಸಂಸ್ಕರಣೆಗಾಗಿ Wetland Treatment System ಅನ್ನು ಅಳವಡಿಸಿಕೊಳ್ಳಲು ಸಹ ಸೂಚಿಸಿದೆ. ಈ ನಿಟ್ಟಿನಲ್ಲಿ ನದಿಗಳ ಮಾಲಿನ್ಯಕ್ಕೆ ಮುಖ್ಯವಾಗಿ ಕಾರಣವಾಗಿರುವ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ರೊಚ್ಚು ನೀರನ್ನು ನದಿಗೆ ಬಿಡುತ್ತಿರುವುದನ್ನು ತಡೆಗಟ್ಟಿ, ಸಂಪೂರ್ಣವಾಗಿ ಸಂಸ್ಕರಿಸಿ ಪುನರ್ಬಳಕೆಯ ಕ್ರಿಯಾ ಯೋಜನೆಯನ್ನು ಅನುμÁ್ಠನಗೊಳಿಸಲಾಗುತ್ತಿದೆ ಎಂದು ಸದನದಲ್ಲಿ ತಿಳಿಸಿದರು.

Post a Comment

0Comments

Post a Comment (0)