ಬೆಂಗಳೂರು : ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀರಾಮ ಮಂದಿರದಲ್ಲಿ ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ 61ನೇ ಸಂಗೀತ ಸಂಭ್ರಮವನ್ನು ಜನವರಿ 28 ರಿಂದ ಫೆಬ್ರವರಿ 1ರ ವರೆಗೆ ಒಟ್ಟು 5 ದಿನಗಳ ಕಾಲ ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಜನವರಿ 28-ಸಂಜೆ 5-30ಕ್ಕೆ ಕಾರ್ಯಕ್ರಮದ ಉದ್ಘಾಟನೆ. ನಂತರ ಉಡುಪಿಯ ವಿ|| ಅರ್ಚನಾ ಮತ್ತು ಸಮನ್ವಿ ಇವರಿಂದ "ಯುಗಳ ಗಾಯನ" ವಿ|| ಸಿ.ವಿ. ಶೃತಿ (ಪಿಟೀಲು), ವಿ|| ಬಿ.ಎಸ್. ಪ್ರಶಾಂತ್ (ಮೃದಂಗ), ವಿ|| ಭಾಗ್ಯಲಕ್ಷ್ಮಿ ಎಂ. ಕೃಷ್ಣ (ಮೋರ್ಚಿಂಗ್).
ಜನವರಿ 29-ಸಂಜೆ 6-00ಕ್ಕೆ ವಿ|| ಡಿ. ಬಾಲಕೃಷ್ಣ ಮತ್ತು ವಿ|| ವಿ. ವಂಶೀಧರ್ ಇವರಿಂದ "ವೀಣಾ-ವೇಣು ವಾದನ" ವಿ|| ಎ. ರೇಣುಕಾ ಪ್ರಸಾದ್ (ಮೃದಂಗ), ವಿ|| ಎಸ್. ಉತ್ತಮ್ (ಘಟ).
ಜನವರಿ 30-ಸಂಜೆ 6-00ಕ್ಕೆ ವಿ|| ಜಿ.ಕೆ. ಮೋಹನ್ (ಗಾಯನ), ವಿ|| ಕೇಶವ ಮೋಹನ್ ಕುಮಾರ್ (ಪಿಟೀಲು), ವಿ|| ಅನಿರುದ್ಧ್ ಎಸ್. ಭಟ್ (ಮೃದಂಗ), ವಿ|| ಭಾರ್ಗವ ಹಾಲಂಬಿ (ಖಂಜಿರ).
ಜನವರಿ 31-ಸಂಜೆ 6-00ಕ್ಕೆ "ಯುಗಳ ಗಾಯನ" : ವಿ|| ಎಸ್. ಐಶ್ವರ್ಯ ಮತ್ತು ವಿ|| ಎಸ್. ಸೌಂದರ್ಯ (ಭಾರತರತ್ನ ಡಾ|| ಎಂ.ಎಸ್. ಸುಬ್ಬುಲಕ್ಷ್ಮಿ ಇವರ ಮರಿಮಕ್ಕಳು) ವಿ|| ವಿ. ನಳಿನಾ ಮೋಹನ್ (ಪಿಟೀಲು), ವಿ|| ಫಣೀಂದ್ರ ಭಾಸ್ಕರ್ (ಮೃದಂಗ), ವಿ|| ಸಚಿನ್ ದೇವಿಪ್ರಸಾದ್ (ಘಟ).
ಫೆಬ್ರವರಿ 1-ಬೆಳಗ್ಗೆ 11ಕ್ಕೆ ಶ್ರೀ ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ, ಸಂಜೆ 4-15ಕ್ಕೆ ವಿ|| ಹೆಚ್.ಎಸ್. ವೇಣುಗೋಪಾಲ್, ವಿ|| ಎಂ.ಎಸ್. ಪ್ರಮುಖ್, ವಿ|| ಅಪ್ರಮೇಯ ಶೇಷಾದ್ರಿ, ವಿ|| ಸುಹಾಸ್ ಮುರಳಿ, ಮತ್ತು ವಿ|| ಅಚ್ಯುತ್ ಎಂ. ಆತ್ರೇಯ ಇವರಿಂದ "ಪಂಚವೇಣುವಾದನ" ಡಾ|| ಆರ್. ರಘುರಾಮ್ (ಪಿಟೀಲು), ತ್ರಿಚಿ ಜಿ. ಅರವಿಂದ್ (ಮೃದಂಗ), ಜಿ.ಆರ್. ಹರೀಶ್ ಚಂದ್ರ (ಖಂಜಿರ)
ಪ್ರಶಸ್ತಿ ಪ್ರದಾನ ಸಮಾರಂಭ : ಸಂಜೆ 6-15ಕ್ಕೆ ಕಲಾಜ್ಯೋತಿ ವಿ|| ಸಿ. ರಾಮದಾಸ್ (ಹಾರ್ಮೋನಿಯಂ) "ಜೀವಮಾನ ಸಾಧನ ಪುರಸ್ಕಾರ", ವಿ|| ಹೆಚ್.ಎಸ್. ವೇಣುಗೋಪಾಲ್ (ಕೊಳಲು) "ಕಲಾಜ್ಯೋತಿ ಪ್ರಶಸ್ತಿ" ಮತ್ತು ವಿ|| ಬಿ.ಎಸ್. ಪ್ರಶಾಂತ್ (ಮೃದಂಗ) "ಕಲಾಜ್ಯೋತಿ ಪುರಸ್ಕಾರ" ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟಿನ ಪದಾಧಿಕಾರಿಗಳು ತಿಳಿಸಿದ್ದಾರೆ.
