ಬೆಂಗಳೂರು : ಬೆಂಗಳೂರು ನಗರದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಎಮ್ ಇ ಜಿ & ಸೆಂಟರ ವತಿಯಿಂದ ಶಾಲೆಯ ಅವರಣದಲ್ಲಿಂದು 77ನೇ ಗಣರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರೀಯ ವಿದ್ಯಾಲಯ ಸಂಘಟನೆ, ಪ್ರಾದೇಶಿಕ ಕಚೇರಿ ಬೆಂಗಳೂರು ಉಪ ಆಯುಕ್ತರಾದ ಶೇಖ್ ತಾಜುದ್ದೀನ್ ಧ್ವಜಾರೋಹಣ ನೆರವೇರಿಸಿದರು. ಎನ್‌ಸಿಸಿ ಕ್ಯಾಡೆಟ್‌ಗಳು ಶ್ರೀಮತಿ ಶಿವಾನಿ ಅವರ ನೇತೃತ್ವದಲ್ಲಿ ಹಾಗೂ ಶ್ರೀಮತಿ ದಿವ್ಯಾಶ್ರೀ ಅವರ ಮಾರ್ಗದರ್ಶನದಲ್ಲಿ ಗರ್ಲ್ ಪೈಪ್ ಬ್ಯಾಂಡ್ ತಂಡದಿಂದ ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಸ್ವಾಗತ ಭಾಷಣವನ್ನು ಪ್ರಾಂಶುಪಾಲರಾದ ಲೋಕೇಶ್ ಬಿಹಾರಿ ಶರ್ಮಾ ಅವರು ನೆರವೇರಿಸಿದರು. ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಗರ್ಲ್ ಪೈಪ್ ಬ್ಯಾಂಡ್ ಹಾಗೂ ನಾಲ್ಕು ಹೌಸ್‌ಗಳ ವಿದ್ಯಾರ್ಥಿಗಳಿಂದ ಭವ್ಯ ಪಥಸಂಚಲನ ನಡೆಯಿತು. ಮುಖ್ಯ ಅತಿಥಿಗಳು ಪಥಸಂಚಲನದ ವಂದನೆ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಲವಾಟಿಕಾ ಮಕ್ಕಳ ಕ್ರಿಯಾ ಗೀತೆ, 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಅವರ ಇಂಗ್ಲಿಷ್ ಭಾಷಣ, ತರಗತಿ I ಮತ್ತು IIರ ಮಕ್ಕಳ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಪ್ರದರ್ಶನ, ಯೋಗ ಪ್ರದರ್ಶನ, ದೇಶಭಕ್ತಿ ಗೀತೆಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾರ್ಥಿಗಳ ಮನಮೋಹಕ ನೃತ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿಶೇಷವಾಗಿ 10ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಅಕ್ಷಜ್ ಠಾಕೂರಿಯಾ ಅವರು ರಾಷ್ಟ್ರೀಯ, SಉಈI ಹಾಗೂ ಅಂತರರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗಳಿಸಿದ ಸಾಧನೆಗಾಗಿ ಗೌರವಿಸಲ್ಪಟ್ಟರು. 2024–25ನೇ ಸಾಲಿನಲ್ಲಿ 10 & 12 ನೇ ತರಗತಿಯಲ್ಲಿ ಶ್ರೇಷ್ಠ ಫಲಿತಾಂಶ ತಂದುಕೊಟ್ಟ ಶಿಕ್ಷಕರಿಗೂ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳ ಭಾಷಣದಲ್ಲಿ ಶೇಖ್ ತಾಜುದ್ದೀನ್ ಅವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಶ್ರೇಷ್ಠತೆ ಸಾಧಿಸಿ ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿಷಯಾಧಾರಿತ ಗುಂಪು ನೃತ್ಯ ನಡೆಯಿತು. ಕೆ. ಎಸ್. ಪಿ. ರೆಡ್ಡಿ ಅವರು ವಂದನಾರ್ಪಣೆ ಸಲ್ಲಿಸಿದರು. ನಂತರ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು. ಮಕ್ಕಳಿಗೆ ಸಿಹಿ ವಿತರಣೆ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.Post a Comment
0Comments