ಬೆಂಗಳೂರು : 2026 ರ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಗಳಾದ ಪೊಲೀಸ್ ಪ್ರಧಾನ ಕಚೇರಿಯ ಎಡಿಜಿಪಿ ಮತ್ತು ಜಿ&ಹೆಚ್.ಆರ್. ದೇವಜ್ಯೋತಿ ರೇ ಮತ್ತು ಬೆಂಗಳೂರು ನಗರ ಹಲಸೂರು ಉಪವಿಭಾಗದ ರಂಗಪ್ಪ ಟಿ ಅವರು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಬೆಳಗಾವಿ ಉತ್ತರ ವಲಯದ ಐಜಿಪಿ ಡಾ.ಚೇತನ್ ಸಿಂಗ್ ರಾಥೋರ್, ಮಂಗಳೂರು ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್, ಗೃಹ ರಕ್ಷಕದಳ ಹಾಗೂ ಪದನಿಮಿತ್ತ ಅಪರ ನಿರ್ದೇಶಕರು, ಪೌರರಕ್ಷಣೆ ಡಿಐಜಿಪಿ ಮತ್ತು ಅಪರ ಮಹಾಸಮಾದೇಷ್ಟರು ಶ್ರೀಮತಿ ಸವಿತಾ ಎಸ್, ಕಲಬುರಗಿ ಪಿಟಿಸಿ ಡಿಐಜಿಪಿ ಮತ್ತು ಪ್ರಾಂಶುಪಾಲರಾದ ಎಂ.ಪುಟ್ಟ ಮಾದಯ್ಯ, ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ-2 ಎನ್.ನವೀನ್ ಕುಮಾರ್, ಬೆಂಗಳೂರು ನಗರ ಡಿಸಿಪಿ ಅಪರಾಧ-2 ರಾಜಾ ಇಮಾಮ್ ಖಾಸಿಂ, ಮಂಗಳೂರು ಡಿಸಿಆರಿ ಪೊಲೀಸ್ ಅಧೀಕ್ಷಕರಾದ ಸಿ.ಎ.ಸೈಮನ್, ಕರ್ನಾಟಕ ಲೋಕಾಯುಕ್ತ ಬೀದರ್‍ನ ಡಿವೈಎಸ್‍ಪಿ ಹಣಮಂತರಾಯ ಎಸ್., ಬೆಂಗಳೂರು ನಗರ ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮಹಮದ್ ಎಂ.ಎ., ಬೆಂಗಳೂರು ನಗರ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಿ.ಬಿ.ಶಿವಸ್ವಾಮಿ, ಹಬ್ಬಳ್ಳಿ –ಧಾರವಾಡ ನಗರದ ವಿದ್ಯಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್, ಮಹಮದ್ ರಫೀಕ್.ಎಂ. ತಹಶೀಲ್ದಾರ್ ಬೆಳಗಾವಿ ಮೂಡಲಗಿ ವೃತ್ತದ ಸರ್ಕಲ್ ಇನ್ಸಪೆಕ್ಟರ್ ಆಫ್ ಪೊಲೀಸ್ ಶ್ರೀಶೈಲ್ ಕೆ. ಬ್ಯಾಕೋಡ್, ಬೆಂಗಳೂರು 9 ನೇ ಕೆಎಸ್‍ಆರ್‍ಪಿ ಪಡೆಯ ಸ್ಪೆ.ಆರ್.ಎಸ್.ಐ. ಕಾಶೀನಾಥ್ ಜಿ., ಮಲ್ಫೆ ಕರಾವಳಿ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀಮತಿ ವೈಲೆಟ್ ಫೆಮಿನ, ಶಿವಮೊಗ್ಗ ಡಿಎಸ್‍ಬಿ ಪಿಎಸ್‍ಐ ಶ್ರೀಮತಿ ಶಕುಂತಲ ಹೆಚ್.ಕೆ. ಬೆಂಗಳೂರು ನಗರ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯ ಎಎಸ್‍ಐ ಹರ್ಷ ನಾಗರಾಜ್, ಬೆಂಗಳೂರು ನಗರ ಹುಳಿಮಾವು ಪೊಲೀಸ್ ಠಾಣೆಯ ಎಎಸ್‍ಐ ಸಿದ್ದರಾಜು ಜಿ., ಬೆಂಗಳೂರು ಕೆಎಸ್‍ಆರ್‍ಪಿ ಮೂರನೇ ಪಡೆಯ ಸ್ಪೆ.ಆರ್.ಹೆಚ್.ಸಿ 39, ಹೆಚ್ ದೊಡ್ಡಈರಪ್ಪ ಮತ್ತು ಉತ್ತರ ಕನ್ನಡ ಶಿರಸಿಯ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯ ಸಿಹೆಚ್.ಸಿ. – 488 ಬಸವರಾಜ್ ಮ್ಯಾಗೇರಿ ಅವರು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.