ಹೆಚ್.ಐ.ವಿ/ಏಡ್ಸ್ ಸೊಂಕಿತ/ಭಾದಿತರು ಓಂಬಡ್ಸ್‍ಮನ್ ರವರೊಂದಿಗೆ ನೇರವಾಗಿ ಸಂವಾದ ದೂರವಾಣಿಗೆ ಕರೆ ಮಾಡಿ ದೂರು ದಾಖಲಿಸಿ ಪರಿಹಾರ ಕಂಡುಕಂಡುಕೊಳ್ಳಿ

varthajala
0

ಬೆಂಗಳೂರು : ಹೆಚ್.ಐ.ವಿ/ಏಡ್ಸ್ ಸೊಂಕಿತ/ಭಾದಿತರು ಓಂಬಡ್ಸ್‍ಮನ್ ರವರೊಂದಿಗೆ ನೇರವಾಗಿ ಸಂವಾದ ನಡೆಸಲು 2026ನೇ ಜನವರಿ 29 ರ ಗುರುವಾರ ಬೆಳಿಗ್ಗೆ 10.00 ಗಂಟೆಯಿಂದ 02.00 ಗಂಟೆವರೆಗೆ ಮತ್ತು 03.00 ಗಂಟೆಯಿಂದ 05.00 ಗಂಟೆಯ ವರೆಗೆ ನೇರ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್.ಐ.ವಿ ಭಾದಿತ/ ಸೊಂಕಿತರು ಕರೆ ಮಾಡಿ ಅವರ ದೂರು ದುಮ್ಮಾನಗಳ ಬಗ್ಗೆ ನೇರವಾಗಿ ಓಂಬಡ್ಸ್‍ಮನ್ ರವರೊಂದಿಗೆ ಸಂವಾದ ಮಾಡಲು ಇದೊಂದು ಸುವರ್ಣ ಅವಕಾಶ ಕಲ್ಪಿಸಲಾಗಿದ್ದು, ಬಾದಿತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು. 
ಹೆಚ್.ಐ.ವಿ/ಏಡ್ಸ್ ಸೊಂಕಿತರು ಮತ್ತು ಭಾದಿತರು, ಸರ್ಕಾರಿ /ಖಾಸಗಿ ಕಚೇರಿ ಮತ್ತು ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಕದೇ ಇರುವವರು, ತಮ್ಮ ಮನೆಯಲ್ಲಿ/ ನೆರೆಹೊರೆಯವರಿಂದ ತಾರತಮ್ಯಕ್ಕೆ ಒಳಗಾದವರು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ವಿಧ್ಯಾರ್ಥಿಗಳು ಹಾಗೂ ತಾರತಮ್ಯಕ್ಕೆ ಒಳಗಾದ ಸಾರ್ವಜನಿಕರು ಸಂವಾದ ನಡೆಸಲು ದೂರವಾಣಿ ಸಂಖ್ಯೆ 080-23295442 ಅಥವಾ ಮೊಬೈಲ್ ದೂರವಾಣಿ ಸಂಖ್ಯೆ 9449846954 ಕರೆ ಮಾಡಿ ತಮ್ಮ ದೂರು ದಾಖಲಿಸಿ ನ್ಯಾಯ ಪಡೆಯಬಹುದು.  
ಹೆಚ್.ಐ.ವಿ ಕಾಯ್ದೆ-2017 ರ ಪ್ರಕಾರ ಸಂವಾದಿತರ ಕರೆಗಳನ್ನು ಹಾಗೂ ಕರೆ ಮಾಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರವೇನ್ಷನ್ ಸೊಸೈಟಿಯ ಒಂಬುಡ್ಸ್ ಮನ್ ಶ್ರೀಮತಿ ಗಂಗೂಬಾಯಿ ರಮೇಶ ಮಾನಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)