ಕನ್ನಡ ಕುರೂಪಿ ಭಾಷೆ ಎಂದ ಗೂಗಲ್ ವಿರುದ್ಧ ಕೆಂಡ ಕಾರಿದ ನಾಡೋಜ ಡಾ. ಮನು ಬಳಿಗಾರ್

varthajala
0

ಗೂಗಲ್ ಸರ್ಚ್‍ಎಂಜಿನ್‍ನಲ್ಲಿ ಭಾರತದಅತ್ಯಂತಕುರೂಪಿ ಭಾಷೆಯಾವುದು ಎಂಬ ಪ್ರಶ್ನೆಗೆಕನ್ನಡ ಎಂಬ ಉತ್ತರ ಸಿಗುತ್ತಿದೆ.ಈ ವಿಚಾರ ಈಗಾಗಲೇ ವಾಟ್ಸ್‍ಆಪ್ ಸಂದೇಶಗಳಲ್ಲಿ ಓಡಾಡುತ್ತಿದೆ.ಇದನ್ನುಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷನಾಗಿ ನಾನು ತೀವ್ರವಾಗಿಖಂಡಿಸುತ್ತೇನೆ.


ಯಾವುದೇ ಭಾಷೆತಾಯಿಗೆ ಸಮಾನ. ಈ ವಿಚಾರದಲ್ಲಿಗೂಗಲ್ ಸಂಸ್ಥೆಯವರು ನಮ್ಮತಾಯಿಗೆ ಸಮಾನವಾದ ಮಾತೃಭಾಷೆಗೆಅವಮಾನ ಮಾಡಿದ್ದಾರೆ.ಅವರುತಕ್ಷಣಕ್ರಮತೆಗೆದುಕೊಂಡು ಈ ಮಾಹಿತಿಯನ್ನುತೆಗೆದು ಹಾಕಬೇಕು ಹಾಗೂ ಇಂಥ ಮಾಹಿತಿಯನ್ನು ಪ್ರಸಾರ ಮಾಡುತ್ತಿರುವುದಕ್ಕೆಕನ್ನಡಿಗರಕ್ಷಮೆ ಕೇಳಬೇಕು ಎಂದುಆಗ್ರಹಿಸುತ್ತೇನೆ.

ಇದುಒಂದುಕುಚೇಷ್ಟೆಯ ಹಾಗೆ ಕಾಣಿಸುತ್ತದೆ.ಗೂಗಲ್‍ನಂಥದೊಡ್ಡ ಸಂಸ್ಥೆ ಈ ರೀತಿಯ ಮಾಹಿತಿಯನ್ನು ಒಳಗೊಂಡಿರುವುದು ಕನ್ನಡಕ್ಕೆ ಮತ್ತುಕರ್ನಾಟಕಕ್ಕೆ ಮಾಡಿದದ್ರೋಹಆಗಿದೆ.

ಈ ಮಾಹಿತಿಗೊತ್ತಾದಕೂಡಲೇ ನಾನೂ ಗೂಗಲ್‍ನಲ್ಲಿ ಹುಡುಕಿದೆ.ನನಗೆ ಈಗ ಓಡಾಡುತ್ತಿರುವ ಮಾಹಿತಿ ಸಿಕ್ಕಿತು.ಅಂದರೆಅದನ್ನು ಈಗಲೂ ಗೂಗಲ್‍ತೆಗೆದು ಹಾಕಿಲ್ಲಎಂದುಅರ್ಥ.ಇದಕ್ಕಿಂತಉದ್ಧಟತನ ಬೇರೆಇರಲು ಸಾಧ್ಯವಿಲ್ಲ.

ಎರಡೂವರೆ ಸಾವಿರ ವರ್ಷಗಳ ಇತಿಹಾಸಇರುವಕನ್ನಡದ ಅಕ್ಷರಗಳು ಅತ್ಯಂತ ಮುದ್ದಾಗಿವೆ. ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತುಅದರ ವೈವಿಧ್ಯಕೂಡಯಾವುದೇ ಭಾಷೆಗೆ ಸಾಟಿಯಾಗುವಂತೆಇದೆ. ಇಂಥಒಂದು ಭಾಷೆಯನ್ನುಅತ್ಯಂತ ವಿಕಾರ ಭಾಷೆಅಥವಾಕುರೂಪಿ ಭಾಷೆಎಂದರೆಅದಕ್ಕಿಂತಆಘಾತಕಾರಿ ಸಂಗತಿ ಬೇರೆಇರಲಾರದು.ಯಾವ ಭಾಷೆಯೂಕುರೂಪವಾಗಿರಲು ಸಾಧ್ಯವಿಲ್ಲ. ಒಂದು ಭಾಷೆಕುರೂಪಎಂದು ಹೇಳುವವರು ಅಸ್ವಸ್ಥ ಮನಸ್ಸಿನವರು ಎಂಬುದು ನನ್ನಖಚಿತಅಭಿಪ್ರಾಯ.

ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಗಳು ಈ ಸಂಸ್ಥೆಯ ವಿರುದ್ಧ ಮಾಹಿತಿತಂತ್ರಜ್ಞಾನಕಾಯ್ದೆಅನುಸಾರಕ್ರಮ ತೆಗೆದುಕೊಳ್ಳಬೇಕು ಎಂದೂಇದೇ ಸಂದರ್ಭದಲ್ಲಿಆಗ್ರಹಿಸುತ್ತೇನೆ.


Post a Comment

0Comments

Post a Comment (0)