ಎಡಿಡಿ ಎಂಜಿನಿಯರಿಂಗ್ - ಅಬುಧಾಬಿಯ ಎಡಿಜಿಇ ಗ್ರೂಪ್ ಒಪ್ಪಂದ

varthajala
0

ಎಡಿಡಿ ಎಂಜಿನಿಯರಿಂಗ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ನ ಮಾತೃ ಸಂಸ್ಥೆ ಎಡಿಡಿ ಎಂಜಿನಿಯರಿಂಗ್ ಜಿಎಂಬಿಎಚ್ ಯುಎಇ ಮೂಲದ ರಕ್ಷಣಾ ಕ್ಷೇತ್ರದ ಉದ್ಯಮವಾದ ಎಡಿಜಿಇ ಗ್ರೂಪ್ ಪಿಜೆಜಿಇ ಜತೆಯಲ್ಲಿ ಪರಸ್ಪರ ಒಪ್ಪಂದಕ್ಕೆ ಸಹಿ ಮಾಡಿದೆ. ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿನ ನಿರ್ವಹಣೆ, ದುರಸ್ತಿ ಮತ್ತು ಓವರ್ ಹೌಲ್ (ಎಂಆರ್‍ಒ) ದ ಕಾರ್ಯಕ್ಷಮತೆಯನ್ನು ಸುಧಾರಣೆ ಮಾಡುವುದು ಮತ್ತು ಉತ್ಪಾದನೆಯನ್ನು ಹೆಚ್ಚಳ ಮಾಡುವ ನಿರ್ಣಾಯಕ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಸಂಬಂಧ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

2 ವರ್ಷಗಳವರೆಗೆ ಒಪ್ಪಂದ ಜಾರಿಯಲ್ಲಿರಲಿದ್ದು, ಎಡಿಡಿ ಎಂಜಿನಿಯರಿಂಗ್ ಪರವಾಗಿ ನೊರ್ಬರ್ಟ್ ಕ್ರೆಲ್ಲರ್, ವರ್ನರ್ ಗ್ರೆಕ್ಸಾ, ಅಲೆಕ್ಸಾಂಡರ್ ಲೊಕ್ಟೆವ್ ಹಾಗೂ ಇಡಿಜಿಇ ಪರವಾಗಿ ಮೊಹ್ಮದ್ ಅಲ್ ರಶೀದ್ ಮತ್ತು ಇತರರು ಒಪ್ಪಂದಕ್ಕೆ ಸಹಿ ಹಾಕಿದರು. ಎಡಿಜಿಇ ಒಂದು ಖಾಸಗಿ ಸಂಸ್ಥೆಯಾಗಿದ್ದು ಅಬು ಧಾಬಿಯಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ ಮತ್ತು ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದೆ.

ಎಡಿಡಿಗೆ ಭೂಮಿ ಮಂಜೂರು : ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಉತ್ಪಾದನಾ ಘಟಕ ಸ್ಥಾಪನೆಗೆ ತುಮಕೂರು ಮಶಿನ್ ಟೂಲ್ಸ್ ಪಾರ್ಕ್ ನಲ್ಲಿ ಕೆಐಎಡಿಬಿ ಭೂಮಿಯನ್ನು ಮಂಜೂರು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಯ ನಿರ್ದೇಶಕ ಗಿರೀಶ್ ಲಿಂಗಣ್ಣ ಅವರಿಗೆ ಕೆಐಎಡಿಬಿ ಅಧಿಕಾರಿಗಳು ಮಂಜೂರಾತಿ ಪತ್ರವನ್ನು ಹಸ್ತಾಂತರ ಮಾಡಿದರು. ಇದಲ್ಲದೇ, ಕಂಪನಿಯು ದೇವನಹಳ್ಳಿಯಲ್ಲಿನ ಏರೋಸ್ಪೇಸ್ ಪಾರ್ಕ್ ನಲ್ಲಿ ಭೂಮಿ ಮಂಜೂರಾತಿಗಾಗಿ ಕಾಯುತ್ತಿದೆ. ಸರ್ಕಾರದಿಂದ ಭೂಮಿಯನ್ನು ಪಡೆದುಕೊಳ್ಳಲು ಕಂಪನಿಯು ಕಳೆದ ಎರಡು ವರ್ಷಗಳಿಂದ ಹರಸಾಹಸಪಟ್ಟಿತ್ತು. ಮೊದಲಿಗೆ ನೆಲಮಂಗಳ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ನೀಡುವಂತೆ ಕೆಎಸ್‍ಎಸ್‍ಐಡಿಸಿಗೆ ಮನವಿ ಮಾಡಿತ್ತು. ಆದರೆ, ಕೆಎಸ್‍ಎಸ್‍ಐಡಿಸಿ ಈ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲೇ ಇಲ್ಲ. ಹಲವಾರು ಪ್ರಯತ್ನಗಳ ನಂತರ ಇದೊಂದು ರಾಷ್ಟ್ರೀಯ ಮಹತ್ವದ ಯೋಜನೆ ಆಗಿದೆ ಎಂಬುದನ್ನು ಪರಿಗಣಿಸಿದ ರಾಜ್ಯ ಸರ್ಕಾರದ ಅಧಿಕಾರಿಗಳು ಭೂಮಿಗಾಗಿ ಕೆಐಎಡಿಬಿಗೆ ಅರ್ಜಿ ಸಲ್ಲಿಸುವಂತೆ ಸಲಹೆ ಮಾಡಿದ್ದರು.

ಎಡಿಡಿ ಎಂಜಿನಿಯರಿಂಗ್ ಎಚ್‍ಎಎಲ್ ತಯಾರಿಸುವ ತೇಜಸ್ ಯುದ್ಧ ವಿಮಾನ ಮತ್ತು ಇದರ ಇನ್ನಿತರೆ ವರ್ಗಗಳಿಗೆ ಕಟ್ಟಿಂಗ್ ಟೂಲ್ ಸಲೂಶನ್ಸ್ ಅನ್ನು ಪೂರೈಕೆ ಮಾಡಲಿದೆ.

ಎಡಿಜಿಇ(ಎಡ್ಜ್) ಗ್ರೂಪ್ ಪಿಜೆಜಿಇ ಸಂಸ್ಥೆಯು 2019 ರಲ್ಲಿ ಆರಂಭವಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಈ ಸಂಸ್ಥೆಯ ಮಾಲೀಕತ್ವವನ್ನು ಎಮಿರಾಟಿ ಮೂಲದ ಉದ್ದಿಮೆಗಳು ಹೊಂದಿವೆ. ಸೇವಾವಲಯ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಈ ಸಂಸ್ಥೆಯು ಹೂಡಿಕೆ ಮಾಡುತ್ತದೆ. ಇದಕ್ಕೆ ರಾಜ್ಯ ಮಾಲೀಕತ್ವದ ಉದ್ದಿಮೆ (ಎಸ್‍ಒಇ) ಮಾನ್ಯತೆಯನ್ನು ನೀಡಲಾಗಿದೆ.

Post a Comment

0Comments

Post a Comment (0)