SRI SRIPADARAJARU | ಶ್ರೀ ಶ್ರೀಪಾದರಾಜರು

varthajala
0

ಬೆಂಗಳೂರು ಜಿಲ್ಲೆಯ ಚನ್ನಪಟ್ಟಣಕ್ಕೆ ತುಸು ಸಮೀಪದಲ್ಲಿಯೇ ಅಬ್ಬೂರು ಎಂಬ ಪುಣ್ಯಕ್ಷೇತ್ರವಿದೆ. ಇದು ಕಣ್ವಾನದಿಯ ತೀರದಲ್ಲಿದೆ. ಸುತ್ತಮುತ್ತಲೂ ಸುಂದರವಾದ ಸೃಷ್ಟಿಯ ಸೌಭಾಗ್ಯ  ತಾನೇ ತಾನಾಗಿ ವಿರಾಜಿಸುತ್ತಿದೆ. ಇಂದಿಗೂ ಅದು ಸುಪ್ರಸಿದ್ಧ ವಾಗಿದೆ. ಐನ್ನೂರು ವರ್ಷಗಳ ಹಿಂದೆ ಮಹಾತಪಸ್ವಿಗಳಾದ ಶ್ರೀ ಪುರುಷೋತ್ತಮತೀರ್ಥರ ಈ ಸ್ಥಳದಲ್ಲಿ ನೆಲೆಸಿದ್ದರಿಂದ ಆ ಮಹಾಮಹಿಮರ ಸಂದರ್ಶನಕ್ಕಾಗಿ ಯತಿಗಳೂ, ಸಾಧುಗಳೂ ದೇಶದ ನಾನಾ ಮೂಲೆಗಳಿಂದ ಬರುತ್ತಿದ್ದರು.

ಈ ಪುರುಷೋತ್ತಮತೀರ್ಥರ ಸಂದರ್ಶನಕ್ಕಾಗಿ ಒಮ್ಮೆ ಶ್ರೀರಂಗದ ಶ್ರೀ ಸ್ವರ್ಣವರ್ಣತೀರ್ಥರು ತಮ್ಮ ಪರಿವಾರ ಸಮೇತರಾಗಿ ಶ್ರೀಮಠಕ್ಕೆ ದಯ ಮಾಡಿಸಿದರು. ಶ್ರೀ ಪದ್ಮನಾಭತೀರ್ಥರ ಸಂಸ್ಥಾನಕ್ಕೆ ಸೇರಿದ ಶ್ರೀಪಾದಂಗಳವರು ತಮ್ಮ ತೀರ್ಥಕ್ಷೇತ್ರ ಪರ್ಯಟನದ ಸಲುವಾಗಿ ಶ್ರೀರಂಗಪಟ್ಟಣಕ್ಕೆ ಬಂದಿದ್ದರು. ಅಲ್ಲಿ ಕಾವೇರಿ ಸ್ನಾನ ಮತ್ತು ಶ್ರೀರಂಗನಾಥನ ದರ್ಶನಾದಿಗಳನ್ನು ಮುಗಿಸಿಕೊಂಡು ಶ್ರೀ ಪುರುಷೋತ್ತಮತೀರ್ಥರ ಸಂದರ್ಶನನಾರ್ಥವಾಗಿಯೇ ಹೊರಟು ಬಂದಿದ್ದರು ಹಲವಾರು ದಿನಗಳು ಪ್ರಯಾಣ ಮಾಡಿದ ಪರಿವಾರದವರು ಅಂದಿನ ಸಂಜೆಯ ವೇಳೆಗೆ ಸಾಕಷ್ಟು ಬಳಲಿದ್ದರು. ಆ ದಿನ ಸಾಯಂಕಾಲದ ಒಳಗೇ ಶ್ರೀಪುರುಷೋತ್ತಮ ತೀರ್ಥರಿದ್ದ ಅಬ್ಬೂರನ್ನು ತಲುಪಿ ಬಿಡಾರ ಮಾಡಬೇಕೆಂದು ಅವರ ಹೆಬ್ಬಯಕೆಯಾಗಿತ್ತು. ಬೆಳಗ್ಗೆಯಿಂದ ಎಷ್ಟು ದೂರ ಬಂದರೂ ದಾರಿ ಮುಗಿಯುವಂತೆ ಕಾಣಲಿಲ್ಲ ಪಶ್ಚಿಮ ದಿಕ್ಕಿನಲ್ಲಿ ಸೂರ್ಯನೂ ಮುಳುಗುವುದರಲ್ಲಿದ್ದನು ಆದ್ದರಿಂದ, ಮೇನೆಯಲ್ಲಿ ಕುಳಿತಿದ್ದ ಶ್ರೀ ಸ್ವರ್ಣವರ್ಣತೀರ್ಥರು ಹೊರಗಡೆ ತಲೆಚಾಚಿ ನೋಡಿದರು. ಸಮೀಪದಲ್ಲಿಯೇ ದನಗಳನ್ನು ಅಟ್ಟಿಕೊಂಡು ಹೋಗುತ್ತಿದ್ದ ಒಬ್ಬ ಬಾಲಕನನ್ನು ಹತ್ತಿರಕ್ಕೆ ಕರೆದು ಮಗೂ ಅಬ್ಬೂರು ಇಲ್ಲಿಂದ ಎಷ್ಟು ದೂರವಿದೆ? “ಎಂದು ಕೇಳಿದರು.

ಬಹಳ ಚುರುಕಾಗಿದ್ದ ಆ ಬಾಲಕನು “ಇದೇನು ತಾವು ಹೀಗೆ ಕೇಳುತ್ತೀರಿ! ಅತ್ತ ಸೂರ್ಯಮುಳುಗುತ್ತಿದ್ದಾನೆ. ಇತ್ತ ನಾನು ದನಗಳನ್ನು ಅಟ್ಟಿಕೊಂಡು ಮನೆಯ ಕಡೇಗೇ ಹೊರಟಿರುತ್ತೇನೆ. ಈ ಲಕ್ಷಣಗಳಿಂದ ಇಲ್ಲಿಂದ ಊರು ಇನ್ನೆಷ್ಟು ದೂರವಿರಬಹುದೆಂದು ನೀವೇ ಊಹಿಸಲಾರಿರಾ? ಎಂದನು.

ಶ್ರೀ ಸ್ವರ್ಣವರ್ಣತೀರ್ಥರು ಈ ಹುಡುಗನ ಕೆಚ್ಚನ್ನೂ ಕುಶಾಗ್ರಬುದ್ಧಿಯನ್ನೂ ಕಂಡು, ಮನಸ್ಸಿನಲ್ಲಿಯೇ ಶ್ಲಾಘಿಸಿ, ಕೋಪಗೊಳ್ಳದೆ ನಗುನಗುತ್ತಾ “ಅಪ್ಪಾ ಮಗೂ; ನೀನು ಹೇಳುವುದೆಲ್ಲಾ ಅರ್ಥವಾಯಿತು. ಕತ್ತಲೆ ಆವರಿಸಿಕೊಂಡು ಬರುತ್ತಿರುವುದರಿಂದ ನಿನ್ನನ್ನು ಈ ಪ್ರಶ್ನೆ ಕೇಳಿದೆ. ಇನ್ನೂ ದೂರವಿದ್ದಲ್ಲಿ, ಬಳಲಿರುವ ಈ ಪರಿವಾರದೊಂದಿಗೆ ಇಲ್ಲಿಯೇ ಇಂದು ಬಿಡಾರ ಮಾಡೋಣವೆಂದು ನಮ್ಮ ಇಚ್ಛೆ ಆದ್ದರಿಂದ ಖಚಿತವಾಗಿ ವಿಷಯವನ್ನು ತಿಳಿಯುವ ಆಸೆಯಿಂದ ನಿನ್ನನ್ನು ಪ್ರಶ್ನಿಸಿದೆ, ಅಷ್ಟೇ” ಎಂದರು.

ಮಹಾಜ್ಞಾನಿಗಳಾಗಿದ್ದ ಶ್ರೀ ಸ್ವರ್ಣತೀರ್ಥರಿಗೆ ಹುಡುಗನ ನಡೆನುಡಿಗಳನ್ನು ಕಂಡು ತುಂಬ ಆನಂದವಾಯಿತು. 

‘ಮಗೂ ನಿನ್ನ ಹೆಸರೇನು?” ಎಂದು ಕೇಳಿದರು. ಬಾಲಕನು “ನನ್ನ ಹೆಸರು ಲಕ್ಷಿö್ಮÃನಾರಾಯಣ” ಎಂದರು. ಯತಿಗಳಿಗೆ ಆ ಹೆಸರನ್ನು ಕೇಳಿದ ಕೂಡಲೇ ಮತ್ತಷ್ಟು ಆನಂಧವಾಯಿತು. ಅಲ್ದೆ, ಇನ್ನಷ್ಟು ಕುತೂಹಲವೂ ಕೆರಳಿತು.

“ಮಗೂ ನೀನೂ ಅಬ್ಬೂರಿಗೇ ಬರುವುದಾದರೆ, ನನ್ನ ಮೇನೆಯಲ್ಲಿಯೇ ಕೂಡಿಸಿಕೊಂಡು ಹೋಗುತ್ತೇನೆ ಬಾ” ಎಂದರು.

ಲಕ್ಷಿö್ಮÃನಾರಾಯಣನು “ಹರಿ! ಎಲ್ಲಿಯಾದರೂ ಉಂಟೆ? ತಮ್ಮನ್ನು ಕಂಡರೆ ಯಾರೋ ಯತಿಗಳಿರುವಂತಿದೆ. ನಾನಾದರೋ ಗೋವುಗಳನ್ನು ಕಾಯುವ ಬಾಲಕ, ನಿಮ್ಮ ಜೊತೆಯಲ್ಲಿ ನಾನು ಕುಳಿತುಕೊಳ್ಳಬಹುದೆ? ಇದನ್ನು ನಮ್ಮ ತಂದೆ ತಾಯಿಗಳು ತಿಳಿದರೆ ಏನೆಂದು ತಿಳಿದಾರು? ಎಂದು ಭಯಗ್ರಸ್ತವಾಗಿ ಹಿಂದಕ್ಕೆ ಸರಿದರು.

ಸ್ವರ್ಣವರ್ಣತೀರ್ಥರು “ಮಗೂ, ನನ್ನ ಜೊತೆಯಲ್ಲಿ ಬರಲು ನಿನಗೆ ಹೆದರಿಕೆ ಯಾಕೆ? ನಿಮ್ಮ ತಂದೆತಾಯಿಗಳು ಇದಕ್ಕೆ ಒಪ್ಪುವುದಿಲ್ಲವೆ?” ಎಂದು ಕೇಳಿದರು.

ಮುಗ್ಧನಾದ ಬಾಲಕನು ಪೂಜ್ಯರೇ, ಈಗಾಗಲೇ ನಮ್ಮ ದೊಡ್ಡಮ್ಮನ ಮಗನನ್ನು ನಮ್ಮ ಊರಿನ ಸ್ವಾಮಿಗಳು ಸನ್ಯಾಸಿಯನ್ನಾಗಿ ಮಾಡಿರುವರು, ಅವರ ತಂದೆತಾಯಿಗಳಿಗೆ ಅವನೊಬ್ಬನೇ ಮಗ. ನಾನು ಸಹ ನನ್ನ ತಂದೆತಾಯಿಗಳಿಗೆ ಒಬ್ಬನೇಮಗ, ನಾನು ಸನ್ಯಾಸಿಯಾದರೆ ನನ್ನ ವೃದ್ಧರಾದ ತಂದೆತಾಯಿಗಳನ್ನು ನೋಡಿಕೊಳ್ಳುವವರು ಯಾರು? ಈ ದನಕರುಗಳನ್ನು ಕಾಯುವವರು ಯಾರು? ಸಾಲದ್ದಕ್ಕೆ ನಾವು ತೀರ ಬಡವರು” ಎಂದು ತನ್ನ ಆತಂಕವನ್ನೆಲ್ಲ ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸಿದನು.

“ಅಪ್ಪಾ ಸುಮ್ಮನೇ ಹೆದರಬೇಡ. ನಾವು ನಿಮ್ಮ ಅಬ್ಬೂರಿನಲ್ಲಿರುವ ಶ್ರೀ ಪುರುಷೋತ್ತಮತೀರ್ಥರನ್ನು ಕಾಣಲೆಂದೇ ಬಂದಿರುವುದು.”

ಮಾರನೆಯ ದಿನ, ಶ್ರೀ ಪುರುಷೋತ್ತಮತೀರ್ಥರು ಮತ್ತು ಶ್ರೀ ಸ್ವರ್ಣವರ್ಣತೀರ್ಥರು ಪರಸ್ಪರವಾಗಿ ಸಂಭಾಷಣಾಮಗ್ನರಾಗಿರುವಲ್ಲಿ ಬಾಲಯತಿಗಳಾದ ಶ್ರೀ ಬ್ರಹ್ಮಣ್ಯತೀರ್ಥರು ಅಲ್ಲಿಯೇ ಅನತಿದೂರದಲ್ಲಿ ಕುಳಿತಿದ್ದರು. ಸ್ವರ್ಣವರ್ಣತೀರ್ಥರು ತಮ್ಮ ಮಾತುಕತೆಗಳನ್ನು ನಡೆಸುತ್ತಿರುವ ಆಗಿಂದಾಗ್ಗೆ ಅವರ ದೃಷ್ಟಿ ಬ್ರಹ್ಮಣ್ಯತೀರ್ಥರ ಕಡೆಗೆ ಸಹಜವಾಗಿಯೇ ಹರಿಯುತ್ತಿತ್ತು. ಆಗ ಮನಸ್ಸಿನಲ್ಲಿ ಬಾಲಕ ಲಕ್ಷಿö್ಮÃನಾರಾಯಣನು ಆಡಿದ ಮಾತುಗಳೆಲ್ಲ ನೆನಪಾಗುತ್ತಿದ್ದವು. ಅವರ ಸಂಸ್ಥಾನಕ್ಕೂ ಒಬ್ಬ ಉತ್ತರಾಧಿಕಾರಿಯ ಅಗತ್ಯವಿದ್ದುದರಿಂದ ಶ್ರೀ ಪುರುಷೋತ್ತಮ ತೀರ್ಥರೊಂದಿಗೆ ಮಾತನ್ನು ಮುಂದುವರಿಸುತ್ತ “ಶ್ರೀಗಳವರೆ, ನೀವೇ ಮಹಾ ಭಾಗ್ಯಶಾಲಿಗಳು, ನಿಮ್ಮ ಉತ್ತರಾಧಿಕಾರಿಯಾದ ಬಾಲಯತಿಗಳನ್ನು ಕಂಡರೆ, ಮಹಾತೇಜಸ್ವಿಗಳಾಗಿಯೂ ವಿದ್ಯಾವಂತರಾಗಿಯೂ ಕಾಣುತ್ತಾರೆ.” ಎಂದರು.

ಶ್ರೀ ಸ್ವರ್ಣವರ್ಣತೀರ್ಥರು ತಮ್ಮ ಮಾತನ್ನು ಮುಂದುವರಿಸಿ “ಇದೀಗ ನಮಗೆ ಹಗಲೂ ಇರುಳೂ ಒಂದೆ ಯೋಚನೆ. ನಮ್ಮ ಸಂಸ್ಥಾನಕ್ಕೆ ತಕ್ಕ ಉತ್ತರಾಧಿಕಾರಿಯೊಬ್ಬನನ್ನು ಒಂದೇ ಸಮನೆ ಹುಡುಕುತ್ತಿದ್ದೇವೆ. ಈವರೆಗೂ ಶ್ರೀಹರಿ ದಾರಿ ತೋರಿಸಿಲ್ಲ. ಆದರೆ ಇಂದು ನಿಮ್ಮ ಊರಿನ ಕಡೆಗೆ ಬರುವಾಗ ಒಬ್ಬ ತೇಜಸ್ವಿಯಾದ ಬಾಲಕನ ಸಂದರ್ಶನವಾಯಿತು. ಆ ಬಾಲಕನ ಮಾತುಕತೆಗಳನ್ನೂ ಕೇಳಿ ನಾವು ಅಪ್ರತಿಭರಾದೆವು. ಅಂಥ ಚುರುಕಾದ ಬಾಲಕನು ದನಕಾಯುವ ಸ್ಥಿತಿಯಲ್ಲಿರುವುದನ್ನು ಕಂಡು ಯಾಕೋ ಏನೋ ಮನಸ್ಸು ಬಹಳ ನೊಂದುಕೊAಡಿತು. ಆತನ ತಂದೆತಾಯಿಗಳು ತುಂಬ ಬಡವರೆಂದೂ ಹೇಳಿದ. ಆ ಬಾಲಕನ ಹೆಸರು ಲಕ್ಷಿö್ಮÃನಾರಾಯಣ ಎಂದೂ ತಿಳಿಯಿತು. ಆ ಬಾಲಕನನ್ನು ನೀವೇನಾದರೂ ಬಲ್ಲಿರಾ? ಎಂದರು.

ಶ್ರೀ ಪುರುಷೋತ್ತಮತೀರ್ಥರಿಗೆ ಶ್ರೀ ಸ್ವರ್ಣವರ್ಣತೀರ್ಥರ ಹೃದಯಾಭಿಲಾಷೆ ತಕ್ಷಣವೇ ವೇದ್ಯವಾಯಿತು.

“ಶ್ರಿಗಳವರೇ, ನೀವು ಪ್ರಸ್ತಾವಿಸಿದ ಬಾಲಕನನ್ನು ಅವನ ತಂದೆ ತಾಯಿಗಳನ್ನೂ ನಾವು ಬಲ್ಲೆವು ಆ ಹುಡುಗ, ನಮ್ಮ ಉತ್ತರಾಧಿಕಾರಿಗಳಾಗಿರುವ ಬ್ರಹ್ಮಣ್ಯತೀರ್ಥರ ಪೂರ್ವಾಶ್ರಮದ ಬಂಧುವೂ ಹೌದು.

ಶ್ರೀಸ್ವರ್ಣವರ್ಣತೀರ್ಥರು ತಮ್ಮ ಅಭಯವಚನದಂತೆ, ಲಕ್ಷಿö್ಮÃನಾರಾಯಣನನ್ನೂ ಅವನ ಮಾತಾಪಿತೃಗಳನ್ನೂ ಕೂಡಿಕೊಂಡು ಶ್ರೀರಂಗಕ್ಕೆ ಹಿಂತಿರುಗಿದರು. ತೀರ್ಥಕ್ಷೇತ್ರ ಪರ್ಯಟನಕ್ಕಾಗಿ ತೆರಳಿದ್ದಶ್ರೀ ಸ್ವರ್ಣವರ್ಣತೀರ್ಥರು ತಮ್ಮ ಪೀಠಕ್ಕೆ ಉತ್ತರಾಧಿಕಾರಿಯೊಬ್ಬನನ್ನು ಹುಡುಕಿಕೊಂಡು ಬಂದ ವಿಚಾರವನ್ನು ಕೇಳಿದ ಅವರ ಶಿಷ್ಯ ಸಮೂಹಕ್ಕೆ ತುಂಬ ಆನಂದವಾಯಿತು. ಶ್ರೀಗಳವರು ಕೂಡಲೇ ಆ ಬಾಲಕನಿಗೆ ಬ್ರಹ್ಮೋಪದೇಶವನ್ನು ಮಾಡಿದರು. ಅನತಿಕಾಲದಲ್ಲಿಯೇ ಬಾಲಕನು ತಕ್ಕಮಟ್ಟಿಗೆ ವಿದ್ಯಾವಂತನಾದನು. ಕುಶಾಗ್ರಮತಿಯಾಗಿದ್ದ ಲಕ್ಷಿö್ಮÃನಾರಾಯಣನಿಗೆ ಈ ಪ್ರಾರಂಭ ಕಾಲದ ವಿದ್ಯಾಭಾಸ ಹೆಚ್ಚು ಪ್ರಯಾಸವನ್ನುಂಟುಮಾಡಲಿಲ್ಲ. ಸ್ವಲ್ಪ ದಿನಗಳಾದ ಬಳಿಕ ಶ್ರೀ ಸ್ವರ್ಣವರ್ಣತೀರ್ಥರು. ಲಕ್ಷಿö್ಮÃನಾರಾಯಣನಿಗೆ ವಿಧ್ಯುಕ್ತವಾಗಿ ಸತ್ಯಾಸಾಶ್ರಮ ದೀಕ್ಷೆಯಿತ್ತು ಲಕ್ಷಿö್ಮÃನಾರಾಯಣತೀರ್ಥರೆಂಬ ಹೆಸರನ್ನು ಅನುಗ್ರಹಿಸಿದರು. ಮುಂದೆ ಇವರೇ ಶ್ರೀಪಾದರಾಜರೆಂದು ಪ್ರಖ್ಯಾತರಾದರು.

ಒಂದು ಮಠದ ಪೀಠವನ್ನು ಏರುವ ಬಾಲಯತಿಗೆ ಅವ್ಯಾಹತವಾಗಿ ಶಾಸ್ತಾçಭ್ಯಾಸವು ನಡೆಯಬೇಕಷ್ಟೇ ಅದಕ್ಕಾಗಿ ಶ್ರೀ ಸ್ವರ್ಣವರ್ಣ ತೀರ್ಥರು ಲಕ್ಷಿö್ಮÃನಾರಾಯಣತೀರ್ಥರನ್ನು ಅಂದು ಶ್ರೀ ಮಾಧ್ವಶಾಸ್ತçದಲ್ಲಿ ಪಾರಂಗತ್ಯವನ್ನು ಪಡೆದವರಲ್ಲಿ ಒಬ್ಬರೆನ್ನಿಸಿದ್ದ ಶ್ರೀ ವಿಭುದೇಂದ್ರತೀರ್ಥರಲ್ಲಿಗೆ ಕಳುಹಿಸಿಕೊಟ್ಟರು. ಬಾಲಯತಿಗಳು ಅತ್ಯಂತ ಪ್ರತಿಭಾಶಾಲಿಗಳಾಗಿದ್ದುದರಿಂದ, ತಮ್ಮ ಗುರುಗಳು ಕಳುಹಿಸಿಕೊಟ್ಟ ದ್ವೆöÊತ ಸಿದ್ಧಾಂತದ ಉದ್ಗçಂಥಗಳನ್ನೆಲ್ಲ ಅತ್ಯಂತ ಅಲ್ಪಾವಧಿಯಲ್ಲಿಯೇ ಕಲಿತರು. ಶ್ರೀ ವಿಭುದೇಂದ್ರರಿಗAತೂ ಈ ನಿಷ್ಟಾತಮತಿಯಾದ ಬಾಲಯತಿಯನ್ನು ಕಂಡು ತುಂಬ ಆನಂದವಾಯಿತು. ಲಕ್ಷಿö್ಮÃನಾರಾಯಣತೀರ್ಥರು ಟೀಕಾಚಾರ್ಯರ ಶ್ರೀಮನ್ಸಾö್ಯಯಸುಧಾಗ್ರಂಥದ ತಿರುಳನ್ನು ತಿಳಿಯ ಹೇಳುವ ವೈಖರಿಯನ್ನು ಕಂಡು ಮೈಮರೆಯುತ್ತಿದ್ದರು.

ಮಠಾಧಿಪತ್ಯವನ್ನು ವಹಿಸಿಕೊಂಡ ಶ್ರೀಪಾದರಾಜರು ದಿಗ್ವಿಜೆಯಾರ್ಥವಾಗಿ ಸಂಚಾರವನ್ನು ಕೈಗೊಂಡು, ಬೇರೆ ಬೇರೆ ಪ್ರದೇಶದಲ್ಲಿ ವಿದ್ವತ್ಸಭೆಗಳನ್ನು ನಡೆಸಿ, ದ್ವೆöÊತಸಿದ್ದಾಂತದ ಮೇಲ್ಮೆಯನ್ನು ಘೋಷಿಸಿದರು. ಕೋಲಾರ ಜಿಲ್ಲೆಯಲ್ಲಿರುವ ಮುಳಬಾಗಿಲಿಗೆ ಬಂದ ಅವರಿಗೆ ಆ ಸ್ಥಳ ಅತ್ಯಂತ ಪ್ರಶಸ್ತವಾಗಿ ತೋರಿಬಂದಿತು.

ಶ್ರೀಮನ್ಮಧ್ವಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾಗಿದ್ದ ಶ್ರೀಮದಕ್ಷೆÆÃಭ್ಯತೀರ್ಥರು ಅಂಗಾರ ಮಾತ್ರದಿಂದ ರೇಖಾರೂಪದಲ್ಲಿ ಪ್ರತಿಷ್ಠಿಸಿರುವ ಯೊಗಾನರಸಿಂಹ ದೇವರು ಮತ್ತು ನರಸಿಂಹ ತೀರ್ಥಗಳಿರುವ ಈ ನೆಲೆಯು ಶ್ರೀಪಾದರಾಜರಿಗೆ ಬಹಳ ಪವಿತ್ರವೆಂದು ತೋರಿಬಂದುದು ಆಶ್ಚರ್ಯವೇನಲ್ಲ. ಇದಲ್ಲದೆ, ಈ ಎಡೆಯಿಂದ ಅನತಿದೂರದಲ್ಲಿಯೇ ಶ್ರೀ ವೆಂಕಟೇಶನ ನಿವಾಸವಾದ ಶ್ರೀ ತಿರುಪ ಕ್ಷೇತ್ರವಿದೆ. ಅಂದಿನ ವಿಜಯನಗರ ರಾಜ್ಯಕ್ಕೆ ಒಳಪಟ್ಟಿದ್ದ ಈ ಪ್ರದೇಶವು ಆ ಸಾಮ್ರಾಜ್ಯದ ಮೂಡಣ ಬಾಗಿಲಿನಂತೆ ಇದ್ದುದರಿಂದ ಇದಕ್ಕೆ ಮೂಡಣವಾಗಿಲು ಎಂದು ಹೆಸರಿದ್ದು ಇದೇ ಕ್ರಮ ಕ್ರಮವಾಗಿ ಮುಳಬಾಗಿಲು ಎಂದು ಪರಿರ್ವತಿತವಾಯಿತೆಂದೂ ಹೇಳುವುದುಂಟು. ಈ ಎಡೆಯಲ್ಲಿ ಶ್ರೀಮದಕ್ಷೆÆÃಭ್ಯತೀರ್ಥರಿಗೂ, ಶ್ರೀ ವಿದ್ಯಾರಣ್ಯರಿಗೂ ತತ್ವಮಸಿ ಎಂಬ ವಾಕ್ಯದ ಬಗ್ಗೆ ವಾದವಿವಾದಗಳು ನಡೆದ ಕಡೆಗೆ ಶ್ರೀಅಕ್ಷೆÆÃಭ್ಯತೀರ್ಥರೇ ವಿಜಯಿಗಳಾದರೆಂದು ಕೇಳಿಬರುತ್ತದೆ. ಈರೀತಿ ಪ್ರಾಕೃತಿಕ, ಧಾರ್ಮಿಕ, ಸಾಂಸ್ಕೃತಿಕ ದೃಷ್ಟಿಗಳಿಂದ ಮಹತ್ವವನ್ನು ಗಳಿಸಿದ್ದ ಮುಳಬಾಗಿಲನ್ನು ಶ್ರೀಪಾದರಾಜರು ಅಂದಿನಿAದ ತಮ್ಮ ನೆಲೆವೀಡನ್ನಾಗಿ ಮಾಡಿಕೊಂಡರು.

ಶ್ರೀಪಾದರಾಜರ ಈ ಮಠವು ಕೇವಲ ಧಾರ್ಮಿಕ ಕ್ಷೇತ್ರವೆನ್ನಿಸದೆ, ಶ್ರೀಮದಾಚಾರ್ಯರ ಸಿದ್ದಾಂತವನ್ನು ಕಲಿಸುವ ಮಹಾಪೀಠ ವಾಗಿಯೂ ಪರಿಣಮಿಸಿತು. ಶ್ರೀಪಾದರಾಜರ ಸಾನ್ನಿಧ್ಯದಲ್ಲಿ ಕುಳಿತು ದ್ವೆöÊತಸಿದ್ಧಾಂತವನ್ನು ವ್ಯಾಸಂಗ ಮಾಡಲು ದೇಶದ ನಾನಾ ಕಡೆಗಳಿಂದ ಶಿಷ್ಯರು ಬರುವುದಕ್ಕೆ ಮೊದಲಾಯಿತು. ಈ ಹೊತ್ತಿಗೆ ಸರಿಯಾಗಿ ಅಬ್ಬೂರಿನ ಶ್ರೀ ಬ್ರಹ್ಮಣ್ಯತೀರ್ಥರು ತಮ್ಮ ಉತ್ತರಾಧಿಕಾರಿಯಾದ ಶ್ರೀ ವ್ಯಾಸತೀರ್ಥರಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟಿದ್ದರು. ಅವರು ಶ್ರೀ ವ್ಯಾಸತೀರ್ಥರನ್ನು ಶಾಸ್ತçವ್ಯಾಸಂಗ ಮಾಡಲು ಶ್ರೀಪಾದರಾಜರಲ್ಲಿಗೆ ಕಳುಹಿಸಿಕೊಟ್ಟರು.  ಶ್ರೀ ವ್ಯಾಸ ತೀರ್ಥ ಶ್ರೀಪಾದರಾಜರಲ್ಲಿ ವೇದಾಂತ ವಿದ್ಯಾ ವ್ಯಾಸಂಗವನ್ನು ಮಾಡಲು ತೊಡಗಿದ್ದು ಆ ಮಠದ ಇತಿಹಾಸದಲ್ಲಿ ಒಂದು ಸುವರ್ಣಕಾಲವೆಂದು ಭಾವಿಸಬಹುದು.

ಶ್ರೀ ಪುರುಷೋತ್ತಮತೀರ್ಥರಂತಹ ಮಹಾತಪಸ್ವಿಗಳ ನೇತೃತ್ವದಲ್ಲಿ ನಿಷ್ಟಾತರೆನ್ನಿಸಿದ ಶ್ರೀ ಬ್ರಹ್ಮತೀರ್ಥರು ಪೂರ್ವಾಶ್ರಮ ವಂಶಪರAಪರೆಯ ಬೇರೊಂದು ಕುಡಿಯಾಗಿ ಮೊಳೆತು, ಶ್ರೀ ಸ್ವರ್ಣವರ್ಣತೀರ್ಥರ ಆಶೀರ್ವಾದ ಪ್ರಸಾದದಿಂದ ಪ್ರಕಾಶಿಸುತ್ತಿದ್ದ ಶ್ರೀಪಾದರಾಜರು ಶ್ರೀ ವ್ಯಾಸತೀರ್ಥರ ವಿದ್ಯಾಗುರುಗಳಾದ ಬಳಿಕ ಅವರ ವಿದ್ಯಾವಾರಿಧಿಗೆ ಇತಿಮಿತಿಗಳುಂಟೆ!

ಶ್ರೀಪಾದರಾಜರು ಹೇಳಿದಂತೆಯೇ ಅವರು ಶಾ. ಶಾ. 1416ನೆಯ ಜೇಷ್ಠ ಶುದ್ಧ ಚತುರ್ದಶಿ ಮಂಗಳವಾರದAದು (14-4-1504) ಬೃಂದಾವನಸ್ಥರಾದರೆAದು ಶ್ರೀ ಮುಳಬಾಗಿಲು ಮಠದವರು ಪ್ರಕಟಿಸಿರುವ ಶ್ರೀ ಶ್ರೀಪಾದ ಚರಿತಾಮೃತಂ” ಮೂಲಕ ತಿಳಿದು ಬರುತ್ತದೆ. ಶ್ರೀಪಾದರಾಜರು ಒಟ್ಟು ತೊಂಬತ್ತೆAಟು ವರ್ಷಗಳ ಕಾಲ ಬಾಳಿ ಬದುಕಿದರು. ತಮ್ಮ ಐದನೆಯ ವರ್ಷದಿಂದ ಪಾರಮಾರ್ಥಿಕ ಜೀವನವನ್ನು ಅವ್ಯಾಹಿತವಾಗಿ ನಡೆಸಿಕೊಂಡು ಬಂದ ಧನ್ಯಜೀವಿಗಳು ಇವರು.  ಈ ತುಂಬು ಜೀವನದಲ್ಲಿ ಅವರು ಸಾಧಿಸಿದ ಮಹತ್ಕಾರ್ಯಗಳು ಅಪಾರವಾಗಿವೆ.

ಶ್ರೀಪಾದರಾಜರು ನೆಲಸಿದ್ದ ಮುಳಬಾಗಿಲು ಅವರ ವೃಂದಾವನ ಸಾನಿಧ್ಯದಿಂದ ಇಂದಿಗೂ ಅತ್ಯಂತ ಪವಿತ್ರ ಕ್ಷೇತ್ರವಾಗಿ. ಕನ್ನಡ ಹರಿದಾಸ ಸಾಹಿತ್ಯ ನಿರ್ಮಾಣಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟ ಯಶಸ್ಸು ಅವರಿಗೆ ಸಲ್ಲಬೇಕಾದದ್ದು ವೇದಾಂತ ಸಾಮ್ರಾಜ್ಯದಲ್ಲಿ ಶ್ರೀ ವ್ಯಾಸತೀರ್ಥರಂತಹ ಯತಿಶ್ರೇಷ್ಠರನ್ನೂ ಶಾಸ್ತçನಿಷ್ಣಾತರನ್ನೂ ಅವರು ರೂಪಿಸಿದವರು. ವಿಜಯನಗರದ ಅರಸರ ಏಳಿಗೆಗೆ ಕಾರಣರಾಗಿ, ಆ ಅರಸು ಮನೆತನದವರು ತಮ್ಮ ಮಠದ ಬಗ್ಗೆಯೂ, ಶ್ರೀ ವ್ಯಾಸರಾಜರ ಸಂಸ್ಥಾನದ ಬಗ್ಗೆಯೂ ಅಪಾರವಾದ ಭಕ್ತಿ ಗೌರವಗಳಿಂದ ನಡೆದುಕೊಳ್ಳುವಂತೆ ಪ್ರಭಾವ ಬೀರಿದವರು ಅವರು.


Post a Comment

0Comments

Post a Comment (0)