ಪ್ರೀತಿಯ ಮನೆ ನಿರ್ಮಿಸುವುದು ( ಸೃಷ್ಟಿಸುವುದು)

varthajala
0

ಕಲಿಕೆ ಎನ್ನುವುದು ನಿಮ್ಮ ಮಕ್ಕಳಿಗೆ ಜೀವನದಲ್ಲಿ ಶಿಸ್ತುಬದ್ದವಾದ ಜೀವನ ಮತ್ತು ಹಿರಿಯರಿಗೆ ಗೌರವ ಕೊಡುವುದನ್ನು   ಕಲಿಸುತ್ತದೆ.

Àನಿಮಗೆ ನಿಮ್ಮ ಮಕ್ಕಳು ಗೌರವವನ್ನು ತೋರಿಸಬೇಕಾದರೆ ಮೊದಲು ನೀವು ಅವರಿಗೆ ಗೌರವವನ್ನು ನೀಡಬೇಕು.

ಮೊದ್ದಲು ನೀವು ಮಕ್ಕಳ ಅಭಿಪ್ರಾಯಗಳನ್ನು ಕೇಳುವಂತರಾಗಭೇಕು ಮತ್ತು ಮಗುವಿನ ಕಾಳಜಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನೀವು    ಮಗುವನ್ನುÀ ಪ್ರಿಈತಿಯಿಂದ ಮತ್ತು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ನಂತರ ನೀವು ಮಗುವನ್ನು ಆಲಂಗಿಸಿಕೊಳಬೇಕು. ನೀವು ಮಗುವನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಅವಳು ಅಥವಾ ಅವನಿಗೆ ಹೇಳಬೇಕು. ನೀವು ನಿಮ್ಮ ಮಗುವನ್ನು ಅವಳು ಅಥವಾ ಅವನ ದಿನಚರಿಯನ್ನು (ದಿನವನ್ನು) ಕೇಳಬೇಕು ಮತ್ತು ಅದರಲ್ಲಿ ಮುಖ್ಯವಾದ ವಿಷಯವನ್ನು ಚರ್ಚಿಸಬೇಕು. ನೀವು ಮಗುವಿಗೆ ನಿಮ್ಮ ಪ್ರೀತಿ ಮತ್ತು ಕಾಳಜಿ ಯಾವಾಗಲೂ ಅವಳ ಅಥವಾ ಅವನ ಒಳಿತಿಗೆ ಇರುತ್ತದೆಯಂದು ಭರವಸೆ ಮೂಡುವ ಹಾಗೆ ನೋಡಿಕೊಳ್ಳಬೇಕು.

ಯಾವಾಗಲೂ ಬೆಚ್ಚಗಿನ ಮತ್ತು ಸಂತಸದ ಕ್ಷಣಗಳನ್ನು ಕಟ್ಟಿಕೊಡಬೇಕು. ಎಲ್ಲರ ಬಾಲ್ಯವು,ಎಲ್ಲ ರೀತಿಯಲ್ಲೂ ಸರಿಯಾಗಿದೆ ಎಂದು ಪ್ರಾಮಾಣಿಕವಾಗಿ ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಗುಣಾತ್ಮಕ (ಧನಾತ್ಮಕ) ಘಟನೆಗಳು ಮಕ್ಕಳಲ್ಲಿ ಸುಲಭವಾಗಿ ಮುಂಬರುವ ತಪ್ಪುಗಳು ಮತ್ತು ದುರ್ಬಲಗಳಿಗೆ ಕುಗ್ಗದ ಹಾಗೆ ತಲೆ ಎತ್ತಿ ನಡೆಯುವ ಹಾಗೆ ನೋಡಿಕೊಳ್ಳುವಂತೆ ಮಾಡುತ್ತದೆ

ಒಳ್ಳೆಯ ಗುಣಾತ್ಮಕ ನೆನÉಪುಗಳನ್ನು ನಾವು ನಿರ್ಮಿಸಬಹುದು. ಒಂದು ಸಲ,ನಿಮ್ಮ ಮಗು ವಿಸ್ತಾರವಾದ ನಿಮ್ಮ     ಕುಟುಂಬವನ್ನು ನೋಡಲಿ. ಯಾವಾಗಲೂ ನಿರಂತರವಾಗಿ ಕುಟುಂಬದ ತಾತ-ಅಜ್ಜಿ ಮತ್ತು ಸಂಬಂಧಿಕರ ಜೊತೆ ಇರಲಿ. ಒಮ್ಮೊಮ್ಮೆ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಯವೆ, ರಜಾದಿನಗಳನ್ನು ಖುಷಿಯಾಗಿ ಒಟ್ಟು ಕುಟುಂಬದ ಜೊತೆ ಆಚರಿಸಿಕೊಳ್ಳು ವಂತೆ ನೋಡಿಕೊಳ್ಳಿ. ನಿಮ್ಮ ಮಗುವನ್ನು ಎಲ್ಲರೊಂದಿಗೂ ಬೆರೆಯುವಂಥ ಆಚಾರವನ್ನು ಬೆಳೆಸುವುದು. ಉದಾಹರಣೆಗೆ, ಹುಟ್ಟುಹಬ್ಬದ ಊಟವನ್ನು ವಿಶೇಷವಾಗಿ ಕುಟುಂಬದವರಿಗೆ ತಟ್ಟೆಯಲ್ಲಿ ಊಟವನ್ನು ಬಡಿಸುವುದು. 

ಕುಟುಂಬದ ಒಗ್ಗಟ್ಟನ್ನು ಕಟ್ಟಲು ಕುಟುಂಬದ  ಜೊತೆ  ಊಟ ಮಾಡುವುದು ಒಂದು ಒಳ್ಳೆ ದಾರಿ. ತಂದೆ-ತಾಯಿ ಇಬ್ಬರು ಹೂರಗೆ ದುಡಿಯುವ ಹಾಗಿದ್ದರೆ 'ಫಾಸ್ಟ್ಫ್ರುಡ್' ಜೀವನಕ್ಕೆ ಒಗ್ಗಿರುತ್ತಾರೆ.

ಎಲ್ಲರೂ ಜೊತೆಗೆ ಕುಳಿತುಕೊಂಡು ಎಷ್ಟು ಸಾಧ್ಯವೋ ಒಂದು ಕುಟುಂಬದ ಹಾಗೆ ಸಂತೋಷವಾಗಿ ಊಟ ಮಾಡಲು ಪ್ರಯತ್ನಿಸುವುದು ಮುಖ್ಯವಾಗುತ್ತದೆ. ಇದರಿಂದ ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಏನು ನಡೆಯುತ್ತಿದೆಯೊ ಅದನ್ನು ಹಂಚಿಕೊಳ್ಳಲು ಒಂದು ಅವಕಾಶ ಸಿಗುತ್ತದೆ. 

ಪ್ರೀತಿಯ ಕ್ಷಣಗಳನ್ನು ನಿರ್ಮಿಸಿ, ಸಂತೋಷಪಡಿ. ಪ್ರತಿಯೊಬ್ಬರ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ. ಭಾವುಕತೆಯ  ಕ್ಷಣಗಳನ್ನು (ಸಮಯವನ್ನು) ಹಂಚಿಕೊಳ್ಳಿ. ಹೀಗೆ ನಿಮ್ಮ ಮಗುವಿಗೆ ನೀವು ತಂದೆ-ತಾಯಿಯಾಗಿ ಪ್ರೀತಿಯ ಮನೆಯನ್ನು ನೀಡಬಹುದು.

ಮನೆಯಲ್ಲಿ ಮೌಲ್ಯಗಳನ್ನು ಕಟ್ಟುವುದು ;

ಪ್ರತಿಯೊಬ್ಬ ತಂದೆ-ತಾಯಿಗಳು ತಮ್ಮ ಮಕ್ಕಳು ಪ್ರಾಮಾಣಿಕರು,ಸಂಭಾವಿತ ಮತು ಸ್ವತಂತ್ರವಾಗಿರಬೇಕೆಂದು ಬಯಸುತ್ತಾರೆ. ನಿಮ್ಮ ಮಗು ಅದು ಏನು ನೋಡುತ್ತದೆಯೊ ಅದನ್ನೇ ಪ್ರಾಮಾಣಿಕತೆ ಎಂದು ಕಲಿಯುತ್ತದೆ. ನಿಮ್ಮ ಮಗುವಿಗೆ ಸರಿಯಾದ ಮೌಲ್ಯಗಳು ಮತ್ತು ಮನೆಯಲ್ಲಿ ಒಳ್ಳೆಯ ನಡತೆಯನ್ನು ಕೊಟ್ಟು ಒಂದು ಮಾಡಲು ನೀವೇ ಸರಿಯಾದ ವ್ಯಕ್ತ್ತಿ ಆಗಿರುತ್ತೀರಿ. ಆದ್ದರಿಂದ ಇಲ್ಲಿ ಪ್ರತಿದಿನವು ನಿಮಗೆ ನಿಮ್ಮ ಮಗುವಿನ ವ್ಯಕ್ತಿತ್ವವನ್ನು ರೂಪಿಸಲು ಅವಕಾಶಗಳು ಸಿಗುತ್ತಿರುತ್ತವೆ.

ಜವಾಬ್ದಾರಿ ಮತ್ತು ಸ್ವಾತಂತ್ರ್ಯ ;- 

ಮೊದಲು ನಿಮ್ಮ ಮಗುವಿಗೆ ಮನೆಯ ಕೆಲಸ ಅಂದರೆ ತನ್ನ  ಕೋಣೆಯ  ಬೇಡವಾದ ವಸ್ತುವನ್ನು ತೆಗೆದು ಹಾಕುವುದು ಮತ್ತು ಸ್ವಚ್ಚ ಮಾಡುವುದನ್ನು  ಕಲಿಸಲು ಪ್ರಾರಂಭಿಸಬೇಕು. ಯಾವಾಗ ನಿಮ್ಮ ಮಗು ತನಗೆ ಕೊಟ್ಟಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ತನಗೆ ಸಂಬಂಧಿಸಿದ ವಸ್ತುಗಳನ್ನು ಸರಿಯಾಗಿ ನೋಡಿಕೊಳ್ಳತ್ತದೆಯೊ, ಆಗ ಅದಕ್ಕೆ ಜವಾಬ್ದಾರಿಯೆಂದರೇನು ಎಂದು ಅರ್ಥವಾಗುತ್ತದೆ.

ಶಿಸ್ತು;-

ನಿಮ್ಮ ಮಗುವಿಗೆ ಅವಳ ಅಥವಾ ಅವನ ಶಾಲೆಯ ಮನೆಗೆಲಸವನ್ನು ಮುಗಿಸಿದರೆ ಅದು ಏನು ನಿರೀಕ್ಷಿಸುತ್ತದೆಯೊ ಅದನ್ನು ಕೊಡಿಸುವುದಾಗಿ (ಮಾಡುವುದಾಗಿ) ನೀವು ಅವರಿಗೆ ತಿಳಿಸಿಕೊಡಿ. ಅದನ್ನು ಪೂರ್ತಿ ಮಾಡಿ.ಆಗ ನಿಮ್ಮ ಮಗು ಅದಕ್ಕೆ ಮಾಡಲು ಮನಸ್ಸಿಲ್ಲದಿದ್ದರೂ, ಮಗು ಶಿಸ್ತನ್ನು ರೂಢಿಸಿಕೊಳ್ಳುತ್ತದೆ.

ಹಂಚಿಕೊಳ್ಳುವುದು;-

ಕುಟುಂಬ ಊಟ ಮಾಡುವಾಗ ಮಾತನಾಡುವುದರಿಂದ ಅದು ಕುಟುಂಬವನ್ನು ಸಂಬಂಧಗಳನ್ನು ಹಂಚಿಕೊಳ್ಳುವುದು ಮತ್ತು ಸಧೃಡವಾಗಿಸುತ್ತದೆ. ಕಥೆ ಹೇಳುವುದು ದಿನನಿತ್ಯದ ವಿಚಾರಗಳನು ಹೇÉಳಿಕೊಳ್ಳುವುದು. ಇದು ನಮಗೆ ಮೌಲ್ಯಗಳ ಸಂಕೇತ, ಜವಾಬ್ದಾರಿ ಮತ್ತು ವ್ಯಕ್ತಿತ್ವವನ್ನು ನೀಡುತ್ತದೆ.

ಉದಾಹರಣೆ;-

ಪ್ರತಿದಿನ, ಪ್ರತಿಕ್ಷÀಣ ಜೀವನದಲ್ಲಿ ನೀವು ನಿಮ್ಮ ಮಗುವಿಗೆ ಗುಣಾತ್ಮಕ ಮೌಲ್ಯಗಳನ್ನು ಕಲಿಸಲು ನಿಮಗೆ ಅವಕಾಶಗಳು ನಿಗುತ್ತಿರುತ್ತವೆ. ಪ್ರಪಂಚದಲ್ಲಿ ಯಾರು ಏನೇ ಹೇಳಿದರೂ ಅದಕ್ಕೆ ಅದು ತಲೆಕೆಡಿಸಿಕೊಳ್ಳುವುದಿಲ್ಲ, ಕಲಿಯುವುದೂ ಇಲ್ಲ. ನೀವು ಏನು ಕಲಿಸುತ್ತಿರೊ,ಹೇಗೆ ನಡೆದುಕೊಳ್ಳುತ್ತಿರೊ ಅದನ್ನೇ ನೋಡಿತ್ತಿರುತ್ತದೆ ಮತ್ತೆ ಅದನ್ನೇ ಕಲಿಯುತ್ತದೆ.ನಿಮ್ಮ ಮಗು ಪ್ರಾÀ್ರಮಾಣಿಕತೆ ಮತ್ತು ದಕ್ಷತೆಯನ್ನು ಕಲಿಯಬೇಕೆಂದರೆ,ಮೊದಲು ನೀವು ಸತ್ಯವಂತರು ಮತ್ತು ಒಳ್ಳೆಯತನದಿಂದಿರಬೇಕು.

ನಿಮ್ಮ ಮಗುವಿಗೆ ಕಾರಣ ಕೊಡಿ;-

ನೀವು  ನಿಮ್ಮ ಮಗುವಿಗೆ ಏನು ಕಲಿಸಲು ಹೊರಟಿದ್ದಿರೊ ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕಾರಣ ಕೊಡುವುದು ಒಂದು ರೀತಿಯ ಕೀಯಾಗಿ ಸಹಾಯವಾಗುತ್ತದೆ. ಪ್ರತಿಯೊಂದು ಮಗುವು ತನ್ನ ಬೇಕು, ಅವಶ್ಯಕತೆಗಳನು ಯಾವ ರೀತಿ ಯಾರ ಮುಂದೆÀ ನಡೆದುಕೊಂಡರೆ ತನಗೆ ಉಪಯೋಗವಾಗುತ್ತದೆ ಎಂದು ಯೋಚಿಸುತ್ತದೆ. ಕೆಲವೊಮ್ಮೆ ಮಗು ಏತಕ್ಕೆ ಕೆಲವು ಆಯ್ಕೆಗಳು ಬೇರೆಯವರಿಗಿಂತ ಇದು ಉತ್ತಮ ಎಂದು ತಿಳಿದುಕೊಳ್ಳುವುದಕ್ಕೆ ಯೋಚಿಸುತ್ತದೆ. ಈ ರೀತಿಯ ಸಂಪರ್ಕಗಳಿಂದ ನಿಮ್ಮ ಮಗುವಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಯಾವ ಕಾರಣಗಳು ನಿಮ್ಮ ಮಗುವಿಗೆ ಮುಖ್ಯವಾದ ಮತ್ತು ಉತ್ತಮವಾಗಿ ಕೆಲಸ ಮಾಡಬಲ್ಲವೊ ಅಂಥವು ಹಾಗಾಗಿ ನಿಮ್ಮ ಮಗುವಿನ ಯಾವ ನಡುವಳಿಕೆ ಅವನಿಗೆ ಅಥವಾ ಅವಳಿಗೆ ಹಾನಿಯಾಗುತ್ತದೆಯೊ ಅದನ್ನು ತೋರಿಸಿ. ಈ ಮೊದಲೇ ನೀವು ಉಪಯೋಗಿಸಿದಂಥ ಬೇಕಾದಷ್ಟು ಕಾರಣಗಳು ಎಷ್ಟೊ ಬಾರಿ ಯಥಾಸ್ಥಿತಿ ನಿಮ್ಮ ಮಗು ಅರ್ಥ ಮಾಡಿಕೊಳ್ಳುವುದಕ್ಕೆ ಶುರುÀ ಮಾಡಿದ್ದರೆ ಸಹ,ನೀವು ತಾಳ್ಮೆಯಿಂದ ಮತ್ತು ನಿರಂತರವಾಗಿ ಹೇಳುತ್ತಾ ಬಂದರೆ, ಮಗು ಆದಷ್ಟು ಬೇಗನೆ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸುತ್ತದೆ.

ಮಗುವಿನ ಗಮನಿಸುವಿಕೆ ತುಂಬ ಉದ್ಧವಾಗಿರುವುದಿಲ್ಲ, ಅದು ತುಂಬಾ ಕಡಿಮೆ ಅದಕ್ಕೆ ನೀವು ಕೊಡುವ ಕಾರಣ ಆದಷ್ಟು ಕಡಿಮೆ ಇರಲಿ. ನಿಮ್ಮ ಮಗು ಪ್ರತಿಯೊಂದನ್ನು ಆದಷ್ಟು ವೇಗವಾಗಿ ಕಲಿಯುತ್ತದೆ. ಅದಕ್ಕೆ ಇಷ್ಟೆ ಇರಲಿ ಇಲ್ಲದಿರಲಿ. ಆವನಿಂದ ನೀವು ಕೊಡುವ ಕಾರಣ ಆದಷ್ಟು ನೈಜವಾಗಿ ಅವನಿಂದ ಅಥವಾ ಅವಳ ನಡತೆಯಿಂದ ಬಂದಿರಬಹುದಾಗಿ ಗೊತ್ತು ಮಾಡಿಕೊಳ್ಳಿ. ನಿಮ್ಮ ಮಗುವಿಗೆ ಗುಣಾತ್ಮಕ ಕೆಲಸಗಳನ್ನು ಮಾಡುವುದರಿಂದ, ಅದರ ಫಲಿತಾಂಶ ಒಳ್ಳೆಯದಾಗಿರುತ್ತದೆ ಎಂದು ಪ್ರೇರೇಪಿಸಬೇಕು. ಕೆಟ್ಟದ್ದು ಮಾಡಿದರೆ ,ಅದರ ಪಲಿತಾಂಶ ಕೂಡ ಕೆಟ್ಟದಾಗಿರುತ್ತದೆ ಎಂಬುದನ್ನು ತಿಳಿಸಿಕೊಡಬೇüಕು ಅದಕ್ಕೆ ನಿಮ್ಮ ಮಗುವಿಗೆ ಅವನು ಅಥವಾ ಅವಳಿಗೆ ಒಳ್ಳೆಯದನ್ನು ಮಾಡಿದರೆ ಏನು ಲಾಭ ಏನ್ನುವುದನ್ನು ವಿವರಿಸಬೇಕು.

ಒಂದು ಸಲ ನಿಮ್ಮ ಮಗು ಅವಳ ಅಥವಾ ಅವನ ನಡುವಳಿಕೆಯಲ್ಲಿ ಗುಣಾತ್ಮಕ ಅಂಶಗಳನ್ನು ಅರ್ಥ ಮಾಡಿಕೊಂಡು   ಅದನ್ನು ರೂಢಿಸಿಕೊಂಡು ಹೋದಲ್ಲಿ, ಯಾವಾಗಲೂ ಅವರ ಶÉ್ರಮವನ್ನು ಹೊಗಳಿ ಮತ್ತು ಪ್ರೋತ್ಸಾಹಿಸಿ.ಇದರಿಂದ ಅವರಿಗೆ ಭವಿಷ್ಯದಲ್ಲಿ ನೆರವಾಗುತ್ತದೆ ಉದಾಹರಣಿಗೆ ಯಾವಾಗ ಮಗು ತನ್ನ ಆಟಿಕೆಗಳನ್ನು ಅದರ ಜಾಗದಲ್ಲಿಇಡುತ್ತದೊ ಮತ್ತು ತಮ್ಮ ತಂಗಿಯರ ಜೊತೆ ಆಡಿದಾಗ ಆಗ ನೀವು ನನಗೆ ತುಂಬಾ ಖುಷಿಯಾಗುತ್ತಿದೆ ನೀನು ನಿನ್ನ ಆಟಿಕೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದಿ ಅಥವಾ ನೀವು ಇಬ್ಬರು ಹೀಗೆ ಜೊತೆಯಾಗಿ ಖುಷಿಯಿಂದ ಆಟ ಆಡುತ್ತಿದ್ದರೆ ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿ.

ನಿಮ್ಮ ಮಗುವಿನ ಶಿಕ್ಷಕ/ಕಿಯರನ್ನು ಬೆಂಬಲಿಸುವುದು:

ಶಿಕ್ಷಕ/ಕಿಯರಿಗೆ ಮಕ್ಕಳನ್ನು ಸುಶಿಕಿÀ್ಷತರನ್ನಾಗಿ ಮಾಡುವ ಜವಾಬ್ದಾರಿ ಇರುತ್ತದೆ. ಆದ್ದರಿಂದ ತಂದೆ-ತಾಯಿಗಳಿಗೆ ಶಿಕ್ಷಕ/ಕಿಯರ ಪ್ರಯತ್ನವನ್ನು ಬೆಂಬಲಿಸುವುದು ಮುಖ್ಯವಾಗುತ್ತದೆ. ಏನಾದರೂ ಮಕ್ಕಳ ನಡುವಳಿಕೆಯ ಬಗ್ಗೆ ನಿಮ್ಮನ್ನು ಕರೆದು ಮಾತಾಡಿಸಿದರೆ ಅದನ್ನು ಗಂಭಿರವಾಗಿ ಪರಿಗಣಿಸಿ. ನಿಮ್ಮ ಮಕ್ಕಳ ನಡುವಳಿಕೆಯಲ್ಲಿ ತಪ್ಪಾದ ನಡುವಳಿಕೆ, ಶಿಸ್ತು ಇರದಿದ್ದರೆ ತಕ್ಷಣ ನೋಡಿಕೊಳ್ಳಿ. ನಿಮ್ಮ ಮಗುವಿಗೆ ಶಾಲೆಯಲ್ಲಿ ಎಲ್ಲ ಶಿಕ್ಷಕ(ಕಿ)ಯೊಂದಿಗೆ ಒಂದೇ ವಿಧವಾದ ನಡುವಳಿಕೆಯನ್ನು ತೋರಿಸುವುದನ್ನು ನೀವು ನಿರೀಕ್ಷಿಸುತ್ತೀರೆಂದು ನೀವು ಅರ್ಥ ಮಾಡಿಸಿ. ಏನೇ ಆಗಲಿ ನೀವು ಶಿಕ್ಷಕ\ಕಿಯ ಮಾತು ಒಪ್ಪಿಕೊಳ್ಳಲು ಸಾಧ್ಯವಿಲ್ಲದಿದ್ದರೆ,ಅವರ ಜೊತೆ ಏಕಾಂತದಲ್ಲಿ ಚರ್ಚಿಸಿ. ಬೇಕಿರದ ವಿಷಯದಲ್ಲಿ ನಿಮ್ಮ ಮಗು ತೊಡಗಿಕೊಳ್ಳದಿರುವ ಹಾಗೆ ನೋಡಿಕೊಳ್ಳಿ. ನಿಮ್ಮ ಮಗು ಶಾಲೆಯಲ್ಲಿ ತುಂಬಾ ಹೊತ್ತು ಸಮಯ ಕಳೆಯುವುದರಿಂದ ನಿಮಗೆ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ ಒಪ್ಪಿಕೊಳ್ಳಲು ಕಷ್ಟವಾದರೂ ಆದರೆ ನಿಮ್ಮ ಮಗುವಿಗೆ ಏನಾದರೋ ಏಟಾದಲ್ಲಿ ಅಥವಾ ಕೆಟ್ಟದಾಗಿ ನಡೆಸಿಕೊಂಡಿದ್ದರೆ ಬೇರೆ ರೀತಿಯ ಹೆಜ್ಜೆಯನ್ನು ತೆಗೆದುಕೊಳ್ಳಿ. ನೆನಪಿರಲಿ ಶಾಲೆಗಳು (ವಿದ್ಯಾರ್ಥಿಗಳಿಗೆ ಆದಷ್ಟು ಒಳ್ಳೆಯ ವಾತಾವರಣವನ್ನು ನೀಡಲು ಪ್ರಯತ್ನಿಸುತ್ತವೆ ಮತ್ತು ಅದಕ್ಕೆ ನಿಮ್ಮ ಬೆಂಬಲವು ಬೇಕು ನಿಮ್ಮ ಮಕ್ಕಳಿಗೆ ಶಿಕ್ಷಕರು\ ಕಿಯರು) ಮನುಷ್ಯರು ಎಂಬುದನ್ನು ಅರ್ಥ ಮಾಡಿಸಿ ಉದಾಹರಣಿಗೆ ಯಾವುದೊ ಸಂದರ್ಭದಲ್ಲಿ ನಿಮ್ಮ ಮಗ ಅಥವಾ ಮಗಳ ತಪ್ಪಿಲ್ಲದಿದ್ದರೂ ಅವರಿಗೆ ಎಲ್ಲರ ಮುಂದೆ ಬೈದರೆ, ನೀವು ಆಗ ಈ ದಿನ ನಿನ್ನದಲ್ಲ ಇದು ಕೆಟ್ಟ ದಿನ ಅದಕ್ಕಾಗಿ ಹೀಗಾಯಿತು ಎಂದು ವಿವರಿಸಿ.

ಮಕ್ಕಳು ಸುಳ್ಳು ಹೇಳುವುದನ್ನು ತಪ್ಪಿಸಿ:

ಏಕೆ ನಿಮ್ಮ ಮಗು ಸುಳ್ಳು ಹೇಳುತ್ತದೆ? ಅವನು ಅಥವಾ ಅವಳಿಗೆ ನಿಮ್ಮನ್ನು ಕಂಡರೆ ಭಯವೆ? ಅಥವಾ ಸತ್ಯ ಹೇಳುವುದರಿಂದ ಶಿÀಕ್ಷೆ ಸಿಗುತ್ತದೆ ಎಂಬ ಭಯವೆ? ತಂದೆ ತಾಯಿಯಾಗಿ ನೀವು ನಿಮ್ಮ ಮಗುವಿಂದ ನಿಜವನ್ನು ನಿರೀಕ್ಷಿಸುತ್ತೀರಾ? ನಿಮ್ಮ ಮಗು ಸುಳ್ಳು  ಹೇಳುತ್ತಿರುವುದೆಂದು ನಿಮಗೆ ತಿಳಿದಾಗ ನಿಮಗೆ ತುಂಬಾ ನೋವು, ಬೇಸರವಾಗುತ್ತದೆ. ಆಗ ನೀವು ಕೋಪ ಮತ್ತು ಬೇಸರ ಪಟ್ಟುಕೊÀಳ್ಳಬೇಡಿ.ಆದಷ್ಟು ಸಮಾಧಾನದಿಂದ ಇರಿ ಮತ್ತು   ಸಮಸ್ಯೆಯನ್ನು ಎದುರಿಸಲು ಸಿದ್ದವಾಗಿ. ನಿಮ್ಮ ಮಗು  ಸುಳ್ಳು ಹೇಳುತ್ತಿರುವುದನ್ನು ಕಂಡುಹಿಡಿದಾಗ ಶಿಸ್ತಿನಿಂದ ಅವಳು ಅಥವಾ ಅವನಿಗೆ ಅದರ ಕೆಟ್ಟ ಪರಿಣಾಮವಾಗಿ ಟಿವಿ ನೋಡುವುದನ್ನು ನಿಲ್ಲಿಸುವುದು ಅಥವಾ ಅವನ ಇಷ್ಟದ ಆಟಿಕೆಯನ್ನು ಅವರಿಗೆ ಕೊಡದೆ ತೆಗೆದುಕೊಳ್ಳಿ. ನಂಬಿಕೆಯ ಮಹತ್ವವನ್ನು ವಿವರಿಸಿ ಮತ್ತು ನಿಮ್ಮ ಮಗುವಿಗೆ ಪ್ರಾಮಾಣಿಕವಾಗಿ ಇರುವಂತೆ ಅಭ್ಯಾಸರ್ಮಡಿಕೊಳ್ಳಲು ಅವಕಾಶ ಕೊಡಿ. ಯಾವಾಗ ನಿಮ್ಮ ಮಗು ಸತ್ಯವಾಗಿ ನೆಡೆದುಕೊಳ್ಳಲು ಶುರು ಮಾಡುತ್ತದೆಯೊ, ಆಗ ಅದಕ್ಕೆ ಒಳ್ಳೆಯ ಫಲಿತಾಂಶವಾಗಿ ಅವಳ\ನನ್ನು ಹೊರಗೆ ಊಟಕ್ಕೆ ಕರೆದುಕೊಂಡು ಹೋಗುವುದು

ಒಳ್ಳೆಯ ಸಿನಿಮಾ ತೋರಿಸಿ. ಇದರಿಂದ ಮಗುವಿಗೆ ತಾನು ಸತ್ಯ ಮತ್ತು ಪ್ರಾಮಾಣಿಕನಾಗಿದ್ದುದರಿಂದ, ನನಗೆ ಈ ಬಹುಮಾನ ಸಿಕ್ಕಿದೆಯಿಂದು ಅರ್ಥ ಮಾಡಿಕೊಳ್ಳುತ್ತದೆ. ನೆನಪಿರಲಿ, ನೀವು ಪ್ರಾಮಾಣಿಕರಾಗಿದ್ದರೆ, ನಿಮ್ಮ ಮಗು ಪ್ರಾಮಾಣಿಕ/ಕಿಯಾಗಿರುವುದನ್ನು ಕಲಿಯುತ್ತದೆ.

ಮನೆಗೆಲಸದ ವಿಷಯವನ್ನು ಸಂಭಾಳಿಸುವುದು (ಸರಿದೂಗಿನುವುದು)

ನೀವು ನಿಮ್ಮ ಮಕ್ಕಳ ಮನೆಗೆಲಸದಲ್ಲ ಆಸಕ್ತ್ಕಿ ತೋರಿಸಿದಾಗ ಅವರಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕಿ ಇನ್ನು ಹೆಚ್ಚು, ಆಗ ಅವನು/ಳು ಏನು ಮುಖ್ಯವಾದನ್ನು ಮಾಡಿದರೆ ನನ್ನ ತಂದೆ-ತಾಯಿಗೆ ಇಷ್ಟವಾಗುತ್ತದೆ ಎಂದು ಕಲಿಯುತ್ತಾರೆ. ಕೆಳಗಿನ ಕೆಲವು ಸಲಹೆಗಳು ನಿಮಗೆ ಸಹಾಯವಾÀಗಬಹುದು.

ಮೊದಲು ನಿಮ್ಮ ಮಕ್ಕಳ ಶಿಕ್ಷಕ(ಕಿ)ಯ ಬಗ್ಗೆ ತಿಳಿದುಕೊಳ್ಳಿ. ಮನೆಗೆಲಸದ ಬಗ್ಗೆ ತಿಳಿದುಕೊಳ್ಳಿ.ಶಾಲೆಯ ಸಮಾರಂಭಗಳು, ಮುಖÀ್ಯವಾಗಿ ತಂದೆ\ತಾಯಿ ಶಿಕ್ಷಕರ ಭೇಟಿಯ ದಿನಗಳ ಹಾಜರಾಗಿ.ತಂದೆಯಂದಿರು ಖಂಡಿತವಾಗಿ ಭಾಗವಹಿಸಬೇಕು ಮತ್ತು ಮಗುವಿಗೆ ಸಮಯವನ್ನು ನೀಡಭೇಕು. ನಿಮ್ಮ ಮಗುವಿಗೆ ಮನೆಗಲಸವನ್ನು ಮಾಡಲು ಸರಿಯಾದ ಸ್ಥಳವನ್ನು ಆಯ್ದುಕೊಂಡು ಖಚಿತಪಡಿಸಿಕೊಳ್ಳಿ.

ಸರಿಯಾದ ಓದಿನ ಸಮಯವನ್ನು ನಿಗದಿಪಡಿಸಿ ಕೆಲವು ಮಕ್ಕಳು ಮಧ್ಯಾಹ್ನ ಓದುತ್ತಾರೆ.ಆಮೇಲೆ ತಿಂಡಿ ತಿಂದು ಆಟವನ್ನು ಆಡುತ್ತಾರೆ. ಕೆಲವರು ಬೇರೆ ಸಮಯಕ್ಕೆ ಹೊಂದಿಕೊಳ್ಳುತ್ತಾರೆ. ಆದಷ್ಟು ಚಿತ್ತ ಬೇರೆ ಕಡೆ ಹರಿಸುವ ವಸ್ತುಗಳಿಂದ ದೂರವಿಡಿ. ಉದಾಹರಣೆಗೆ ಟಿ.ವಿ,ತುಂಬಾ ಅತಿಥಿಗಳು ಬರುವುದು, ಇತಾÀ್ಯದಿ.

ಆದಷ್ಟು ನಿಮ್ಮ ಮಗು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವಂತೆ ಆಗುವುದನ್ನು ಖಚಿತಪಡಿಸಿಕೊಳಿ. ನೀವು ಬೇಕಾದರೆ ಅವರಿಗೆ ಸಲಹೆ ಮತ್ತು ಸಹಾಯವನ್ನು ನೀಡಿ ಆದರೆ ನಿಮ್ಮ ಮಗವೇÉ ಮಾಡುವುದನ್ನು ಕಲಿಯಬೇಕು. ನೀವು ನಿಮ್ಮ ಮಗುವಿನ ಶಾಲೆಯ ಓದಿನಲ್ಲಿ ತೊಡಗಿಸಿಕೊಳ್ಳಿ.ಅವನ/ಳ ಅಸೈನ್‍ಮೆಂಟ್/ಕ್ವಿಜ್‍ಗಳು ಮತ್ತು ಕಿರುಪರೀಕ್ಷೆಗಳಲ್ಲಿ ತೊಡಗಿಸಿಕೊಳ್ಳಿ. ಮನೆಗೆಲಸ ಪೂರ್ತಿಯಾಗಿದೆಯಾ ಮತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಬರೆದಿದೆಯಾ, ತಪ್ಪಾಗಿದೆಯಾ ಇನ್ನೂ ಮುಂತಾದವುಗಳನ್ನು ಖಚಿತಪಡಿಸಿಕೊಳ್ಳಿ.

ನೀವು ದಿನಪತ್ರಿಕೆಗಳನ್ನು ಓದುವುದು, ಪತ್ರ ಬರೆಯುವುದು ಅಥವಾ ಪುÀ್ರಸ್ತಕಗಳನ್ನು ಓದುವುದನ್ನು ನಿಮ್ಮ ಮಗು ನೋಡಿದರೆ, ಅದು ಕೂಡ ನಿಮ್ಮನ್ನು (ಹಿಂಬಾಲಿಸುತ್ತದೆ) ಅದಕ್ಕೆ ನೀವು ಸಲಹೆಯನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಅವನ/ಳ ಪ್ರಯತ್ನವನ್ನು ಗುರುತಿಸಿ, ಅವರ ಕೆಲಸವನ್ನು ಹೊಗಳಿ  ಅವನ/ಳ ಮಾಡಿದಂಥsÀ ಚಿತ್ರಗಳನ್ನು/ಅಸೈನ್‍ಮೆಂಟ್‍ಗಳನ್ನು ರೆಫ್ರಿಜರೇಟರ್ ಮೇಲೆ ಅಂಟಿಸಿ ನಿಮ್ಮ ಮನೆಗೆ ಬರುವ ಸ್ನೇಹಿತರು ಮತ್ತು ಸಂಬಂಧಿಕರಿಗೆ ಅವನು/ಳು ಮಾಡಿದಂಥ ಸಾಧನೆಗಳನ್ನು ತಿಳಿಸಿ ನಿಮ್ಮ ಮಗುವಿನ ಶಾಲೆಯ ಮನೆಕೆಲಸ ಮತ್ತೆ ಮತ್ತೆ ಸಮಸ್ಯೆ ಕಂಡುಬಂದರೆÀ ತರಗತಿಯ ಶಿಷಕ/ಕಿಯ ಜೊತೆ ಮಾತನಾಡಿ ಮಗು ಶಾಲೆಯಲ್ಲಿ ಬೋರ್ಡನ್ನು ನೋಡಿದಾಗ ಕಷ್ಟ ಎನಿಸಿದರೆ ಅಥವಾ ಕಲಿಯಲು ತೀರ್ಮಾನಿಸಲಾಗದಿರುವುದು, ಗಮನ ಕೊಡದಿರುವುದು ಇದೆಲ್ಲ ಆದಾಗ ಅವರನ್ನು ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಅವರಿಗೇನಾದಲೂ ಕಲಿಕಾ ತೊಂದರೆ ಇದೆಯೇ ಎಂದು ತಿಳಿದುಕೊಳ್ಳಬೇಕು.

ಟಿವಿ ನೋಡುವ ಅಭ್ಯಾಸಕ್ಕೆ ಮೇಲ್ವಿಚಾರಣಿ;

ರಜೆಗಳಲ್ಲಿ ನಿಮ್ಮ ಮಗು ಚಟುವಟಿಕೆಯಿಂದ ಇಲ್ಲದಿರುವುದು ತುಂಬಾ ಹೊತ್ತಿನ ತನಕ ಬೇರೆ ಏನು ಕೆಲಸ ಮಾಡದೆ       ಟಿವಿಯನ್ನು ನೋಡುತ್ತಿರುತ್ತದೆ ಹಾಗಾಗಿ ನೀವು ನಿಮ್ಮ ಮಗುವಿನ ಟಿ.ವಿ ನೋಡುವ ಸಮಯವನ್ನು ಕಡಿಮೆ ಮಾಡಿದರೆ ಅದು ಆಗ ಯಾವುದನ್ನು  ನೋಡಬೇಕೊ, ನೋಡಬಾರದು ಎಂದು ಆಯ್ಕೆ ಮಾಡಿಕೊಳ್ಳುತ್ತದೆ. ಇದರಿಂದ ಅದು ಬೇರೆ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಸಮಯ ಸಿಗುತ್ತದೆ. 

ಟಿ.ವಿ ಸಮಯವನ್ನು ಕಡಿಮೆ ಮಾಡಲು ಕೆಲವು ಸಲಹೆಗಳು:- 

ಒಂದು ದಿನ ಪೂರ್ತಿ ಟಿವಿಯನ್ನು ಆಫ್ ಮಾಡಿ. ಇದು ಒಂದು ರೀತಿಯ ಪರೀಕ್ಷೆ .ಆಗ ನಿಮ್ಮ ಮಗುವಿಗೆ ಬೇರೆ. ಏನು ಮಾಡಲು ತೋಚದಾದರೆ,ನಿಮಗೆ ಸುಲಭವಾಗಿ ತಿಳಿಯುತ್ತದೆ, ನಿಮ್ಮ ಮಗು ಟಿ.ವಿಯ ಮೇಲೆ ಎಷ್ಟು ಅವಲಂಬಿತವಾಗಿದೆಯಂದು. ಅದಕ್ಕೆ ನೀವು ನಿಮ್ಮ ಮಗುವನ್ನು ಟಿ.ವಿಯ ಬದಲಾಗಿ ಬೇರೆ ರೀತಿಯ ಚಟುವಟಿಕೆಗಳಾದ ನಡೆಯುವುದು, ಈಜುವುದು ಅಥವಾ ಕೈತೋಟ ಮಾಡುವಂಥ ಚಟುವಟಿಕೆಗಳಲ್ಲಿ ತೊಡಗಿಸಿದರೆ ಉತ್ತಮವಾದಸಂ ಗತಿಗಳಾಗುತ್ತದೆ.

ನೀವು ಮಾದರಿಯಾಗಿ ಅದಕ್ಕೆ ಅಂಟಿಕೊಳ್ಳಬೇಡಿ ನೀವು ಹೆಚ್ಚು ಟಿ.ವಿ ನೋಡುವುದನ್ನು ನಿಯಂತ್ರಣದಲ್ಲಿಡಿ. ನೀವು ನೋಡಲೆಬೇಕೆಂದರೆ ಆದಷ್ಟು ಟಿ.ವಿ ಸಮಯವನ್ನು ಕಡಿಮೆ ಮಾಡಿ ತಾವುದೇ ಕಾರಣಕ್ಕೂ ನಿಮ್ಮ ಮಗುವನ್ನು ಅವರ ವಯಸ್ಸಿಗೆ ಮೀರಿದ ಕಾರ್ಯಕ್ರಮಗಳನ್ನು ನೋಡಲು ಬಿಡಬೇಡಿ. 

ನಿಮ್ಮ ಮಗುವಿಗೆ ಬೇರೆ ರೀತಿಯ ಆಯ್ಕೆಗಳನ್ನು ಕೊಡಿ ಸುಮ್ಮನೆ ಟಿವಿ ನೋಡಿಕೊಂಡು ಹಾಳು ಮಾಡುವ ಸಮಯವನ್ನು ಆದಷ್ಟು ಅವರಿಗೆ ಉಪಯೋಗವಾಗುವಂತೆ ಕಟ್ಟಿಕೊಡುವಂತೆ ಮಾಡಿ. 

ಟಿ.ವಿ ನೋಡುವುದರಿಂದ, ಮಗುವಿಗೆ ಓದುವುದು ಹೊರೆ ಎನಿಸಬಾರದು ನೀವು ಮಕ್ಕಳನ್ನು ಟಿ.ವಿ ನೋಡಲು ಬಿಟ್ಟರೆ 

ನೆನಪಿರಲಿ ನೀವು ಆದಷ್ಟು ನಿಮ್ಮ ಮಕ್ಕಳು ಟಿ.ವಿಯ ಮೇಲೆ ಅವಲಂಬಿತರಾಗಿರುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು ಇದರಿಂದ ನಿಮಗೆ ಅವರ ಜೊತೆ ಹೆಚ್ಚು ಸಮಯ ಕಳೆಯಬಹುದು ಮತ್ತು ಸಂತೋಷವಾಗಿ ಕೆಲಸ ಮಾಡುವುದು ಆಟ ಆಡುವುದು ಪಿಕ್‍ನಿಕ್ ಹೋಗುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕುಟುಂಬವಾಗಿ ಸಂಪರ್ಕದಲ್ಲಿರಬಹುದು.

ಒತ್ತಡವನ್ನು ಹತ್ತಿರÀದಿಂದ ನಿಭಾಯಿಸುವುದು.

ನಿಮ್ಮ ಮಗು ಮೊದಲ ಬಾರಿ ಅವನು\ಳು ತನ್ನ\ತಮ್ಮ ತಂಗಿಯರ ಜೊತೆ ಅಥವಾ ಬೇರೆ ಮಕ್ಕಳ ಜೊತೆ ಆಟವಾಡುವಾಗ ತೀರ ಹತ್ತಿರದಿಂದ ಒತ್ತಡ ಬೀರುತ್ತದೆ ಆಗ ನೀವು ಒತ್ತಡವನ್ನು ದೂರ ಮಾಡಲು ಸಾಧ್ಯವಾಗುವುದಿಲ್ಲ ಆದರೆ ಅದನ್ನು ಹೇಗೆ ನಿಭಾಯಿಸಬಹುದು ಎಂದು ಕಲಿಸಬಹುದು.

ಕೆಳಗೆ ಕೆಲವು ಸಲಹೆಗಳನ್ನು ನೋಡಿ.

ಒಳ್ಳೆಯ ಸಂಬಂಧಗಳನ್ನು ಕಟ್ಟಿಕೊಡಿ ನಿಮ್ಮ ಸಂಬಂಧಗಳನ್ನು ಗಟ್ಟಿಯಾಗಿಸಲು ನಿಮ್ಮ ಮಗುವಿಗೆ ಆದಷ್ಟು ಕೆಟ್ಟದನ್ನು ರೂಡಿಸಿಕೊಳ್ಳದಿರುವ ಹಾಗೆ ನೋಡಿಕೊಳ್ಳಿ ನಿಮ್ಮ ಮಗುವಿಗೆ ಬೇರೆಯವರು ಏನಾದರೂ ಮಾಡಲು ಹೇಳಿದಾಗ ಅದು ಮೊಡಬೇಕೇ\ಬೇಡವೆ ಎಂದು ಯೋಚನೆ ಮಾಡಲು ಕಲಿಸಿರಿ ಆಗ ಇದು ತಪ್ಪಾ\ಅವರು ಏಕೆ ನನಗೆ ಇದನ್ನು ಮಾಡಲು ಹೇಳಿದರು? ಇದರಿಂದ ನನ್ನ ನಡುವಳಿಕೆಯಲ್ಲಿ ಯಾವ ರೀತಿಯ ಪಲಿತಾಂಶ ಬರಬಹುದು ಎಂದು ನಿಮ್ಮ ಮಗು ಪ್ರಶ್ನೆ ಮಾಡಬೇಕು.

ಅವಳು ನಡೆದುಕೊಳ್ಳುವ ರೀತಿಯ ಮೇಲೆ ಫಲಿತಾಂಶವಿರುತ್ತದೆ ಎಂದು ಯೋಚನೆ ಮಾಡಬೇಕು. ಅವಳು ಏನಾದರು ಸರಿಯಿಲ್ಲ ಎನಿಸಿದರೆ ಖಂಡಿತವಾಗಿಯೊ ಏನೋ ತಪ್ಪಾಗಿದೆ.

ಕೆಲವು ಸಲ ನಿಮ್ಮ ಮಗುವಿಗೆ ಕೆಟ್ಟ ಪರಿಸ್ಥಿತಿಯಿಂದ ಆಚೆ ಬರಲು ನಿಮ್ಮ ಸಹಾಯ ಬೇಕಾಗುತ್ತದೆ. ನೀವು ಆಗ ಯಾವ ದಾರಿ ತೋರಿಸಿದರೆ ಅವಳು ಅಧಿüಕ ಒತ್ತಡದಿಂದ ಆಚೆ ಬರಬಹುದು.

Àಕೆಲವು ಸಮಯ ಸ್ನೇಹಿತರು ಪ್ರಶ್ನಿಸಲಾಗದನ್ನು ಮಾಡು ಎಂದಾಗ ತಕ್ಷಣ ನೀವು ಆಯಿತು ಅಥವಾ ಇಲ್ಲ ಎನ್ನುವುದನ್ನು ಆ

ಮಕ್ಕಳನ್ನು ಪ್ರೋತ್ಸಾಹಿಸಿ. ಅವಳು\ನು ಕಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳುವಾಗ ಏನು ತೊಂದರೆಯಾಗುತ್ತಿದೆಯಂದು ಕೇಳಿ ಅವನ\ಳ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿ ಇಲ್ಲ ಎಂದು ಹೇಳಲು ಪ್ರೋತ್ಸಾಹಿಸಬೇಡಿ.


ಹೀಗೆ ನಮ್ಮ ಮಗುವಿನ ಬದುಕನ್ನು ಧನಾತ್ಮಕವಾಗಿ ಹಾಗೂ ಗುಣಾತ್ಮಕವಾಗಿ ರೂಪಿಸುವುದು ಪೋಷಕರ ಕೈಯಲ್ಲಿ ಇದೆ.

 Author :  RADHIKA G N

                 EDUCATION CONSULTANT

                 MOBILE : 7019990492


Tags

Post a Comment

0Comments

Post a Comment (0)