ಬೆಂಗಳೂರು ವಿಶ್ವವಿದ್ಯಾಲಯ: ಬಿ.ಎ, ಎಲ್.ಎಲ್.ಬಿ. ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

varthajala
0

ಬೆಂಗಳೂರು, ಆಗಸ್ಟ್ 02 (ಕರ್ನಾಟಕ ವಾರ್ತೆ): ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಕಾನೂನು ಮಹಾವಿದ್ಯಾಲಯದಲ್ಲಿ 2021-22ನೇ ಶೈಕ್ಷಣಿಕ ಸಾಲಿನ ಐದು ವರ್ಷದ ಬಿ.ಎ, ಎಲ್.ಎಲ್.ಬಿ. (ಹಾನರ್ಸ್ ಕೋರ್ಸ್) ಪದವಿಯ ಮೊದಲ ಸೆಮಿಸ್ಟರ್ ಕೋರ್ಸ್‍ನ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ. (10+2) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ. 45, ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಶೇ. 40 ರಷ್ಟು ಹಾಗೂ ಒ.ಬಿ.ಸಿ. ಗೆ ಶೇ. 42 ರಷ್ಟು (ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ) ಅಂಕಗಳನ್ನು ಗಳಿಸಿರುವವರು ಮಾತ್ರ ಅರ್ಹರಾಗಿರುತ್ತಾರೆ. ಹಾಗೂ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 20 ವರ್ಷಗಳು ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ ಹಾಗೂ ಒ.ಬಿ.ಸಿ. ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ 22 ವರ್ಷಗಳು.  ಅರ್ಜಿ ಶುಲ್ಕ ಸಾಮಾನ್ಯ ಮತ್ತು ಸೆಲ್ಫ್ ಫೈನಾನ್ಸ್ ಸೀಟು ಎರಡಕ್ಕೂ ಸಾಮಾನ್ಯ ವರ್ಗ/ ಒ.ಬಿ.ಸಿ ವರ್ಗಗಳಿಗೆ ರೂ.850,  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1 ವರ್ಗಗಳಿಗೆ ರೂ.550/- ಗಳನ್ನು ನಿಗಧಿಪಡಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ದಿನಾಂಕ: 10-08-2021 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಇತರ ವಿವರಗಳನ್ನೊಳಗೊಂಡ ಕೈಪಿಡಿಯು ವಿಶ್ವವಿದ್ಯಾಲಯದ ಅಧಿಕೃತ ವೆಬ್‍ಸೈಟ್  www.bangaloreuniversity.ac.in     ಅಥವಾ  www.ulc.bangalore.com     ನಲ್ಲಿ ಲಭ್ಯವಿರುತ್ತದೆ. ಆನ್‍ಲೈನ್ ಮುಖಾಂತರ ಭರ್ತಿ ಮಾಡಿದ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಸಂಬಂಧಪಟ್ಟ ಎಲ್ಲಾ ದೃಢೀಕೃತ ದಾಖಲೆಗಳನ್ನು ದಿನಾಂಕ: 12-08-2021 ರೊಳಗೆ ಪ್ರಾಂಶುಪಾಲರು, ವಿಶ್ವವಿದ್ಯಾಲಯ ಕಾನೂನು ಕಾಲೇಜು, ಜ್ಞಾನಭಾರತಿ ಆವರಣ, ಬೆಂಗಳೂರು-560 056 ರವರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ಪ್ರಾಂಶುಪಾಲರು: 080- 23392384 / 22961174, ಕಛೇರಿ ಸಂಖ್ಯೆ: 080-22961172 ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Tags

Post a Comment

0Comments

Post a Comment (0)