ವಾಣಿಜ್ಯಕರಣಗೊಂಡ ವಿದ್ಯಾಭ್ಯಾಸ ....!

varthajala
0

ವಿದ್ಯಾನಾಮ ನರಸ್ಯರೂಪಮಧಿಕಂ | ಪ್ರಚ್ಛನ್ನಗುಪ್ತಂಧನ0

ವಿದ್ಯಾಭೋಗಕರಿಯಶಃ ಸುಖಕರಿ ವಿದ್ಯಾಗುರೂಣಾಂ ಗುರು

ವಿದ್ಯಾಬಂಧು ಜನೋವಿದೇಶಗಮನೇ ವಿದ್ಯಾಪರಾದೇವತಾ

ವಿದ್ಯಾರಾಜಸುಪೂಜ್ಯತೆ ನತುಧನಂ|  ವಿದ್ಯಾವಿಹೀನಂಪಶುಃ


ಹಿ0ದಿನ ಗುರುಕುಲಾಶ್ರಮದಲ್ಲಿ ಅಲ್ಲಿ ಸೇರಿದ್ದ ವಿದ್ಯಾರ್ಥಿಗಳು,  ವಟುಗಳು ಏಕಕಂಠದಿ0ದ ಗಜಸ್ತುತಿಯ ನಂತರ ಮೇಲಿನ ಶ್ಲೋಕವನ್ನು ಗುರುಗಳ ಸಮ್ಮುಖದಲ್ಲಿ ಪಠಿಸುತ್ತಿದ್ದರೆ ಅಷ್ಟಾಂಗ ದೇವತೆಗಳೊಡಗೂಡಿ ಶಾರದಾಂಬೆಯೇ ಆ ಮಕ್ಕಳ ಮುಂದೆ ಮಂಡಿಯೂರಿ ಶರಣಾಗಿ ಬಿಡುತ್ತಿದ್ದಳು. ಕಾರಣ, ಆ ಮಕ್ಕಳ ಕಲಿಕೆಯಲ್ಲಿದ್ದ ಶ್ರದ್ಧೆ, ಭಕ್ತಿ, ಕಾಲದ ಬೆಲೆ, ಗುರುವಿನ ಭೋಧನೆ ಅದನ್ನು ಪಾಲನೆ ಮಾಡುತ್ತಿದ್ದ ವಿದ್ಯಾರ್ಥಿ ವೃಂದದ ಆಸಕ್ತಿ ಇವೆಲ್ಲದರ ಒಟ್ಟಾರೆ ಫಲಿತಾಂಶವೇ 64 ವಿದ್ಯೆಗಳ ಒಡೆಯರ ಆರಂಭ, ಹಿಂದಿನ ಗುರುಕಲಾಶ್ರಮಗಳಲ್ಲಿ, ಗುರುವಿನ ಸೇವೆಯನ್ನು ಮಾಡುತ್ತ ಆಶ್ರಮವನ್ನೇ ಒಂದು ಬೃಹತ್ ಕಾಶಿ ವಿಶ್ವವಿದ್ಯಾಲಯವೆಂದು ಭಾವಿಸಿ ಸ್ವಯಂಸೇವಕರಾಗಿ, ಸ್ವಚ್ಛಂದಗೊಳಿಸಿಕೊAಡು ಕಾಡಿನಿಂದ ಕಟ್ಟಿಗೆಯನ್ನು ಅರಸಿ ತರುವಲ್ಲಿಂದ ಹಿಡಿದು ನದಿಗಳಿಂದ ನೀರು ಸಂಗ್ರಹ ಮೊದಲ್ಗೊಂಡು, ಕಾಯಿ, ಪಲ್ಯ, ಹಣ್ಣು ಹಂಪಲುಗಳನ್ನು ಕ್ರೋಢಿಕರಿಸುವುದರೊಟ್ಟಿಗೆ ಗುರುವಿನ ಸೇವೆ ಮಾಡುತ್ತ ಗುರುವಿನ ಪ್ರೀತಿಗೆ ಪಾತ್ರರಾಗಿ ಅಷ್ಟಶಿಕ್ಷೆಗಳನ್ನು ನಗುನಗುತ್ತಲೇ ಸ್ವೀಕರಿಸಿ ಅಷ್ಟೆöಶ್ವರ್ಯ ಸಾರುವ 64 ವಿದ್ಯೆಗಳನ್ನು ಕಠಿಣ ತಾಲೀಮು ಮಾಡಿ ವಿದ್ಯಾಬುದ್ಧಿ ಜೀವಿಗಳಾಗಿ ಹೊರಬರುತ್ತಿದ್ದರು.

ಇಂತಹ ಶಿಷ್ಯಕೋಟಿ ದೇಶ ಅಲ್ಲದೆ ಈಶನ ಸೇವೆಯನ್ನು ಅನನ್ಯ ಭಕ್ತಿಭಾವಯುಕ್ತಿ, ಶಕ್ತಿಗಳಿಂದ ತಾವು ಕಲಿತಿರುವ 64 ವಿದ್ಯೆಗಳನ್ನು ಬಳಸಿ ಬಲಿಷ್ಠವಾದ ರಾಜ್ಯ ಭ್ರಷ್ಟರಹಿತ ಸಮಾಜ ನಿರ್ಮಾಣದಲ್ಲಿ ತಲ್ಲೀನರಾಗಿ ಕಾಯಕದಲ್ಲೇ ಕೈಲಾಸ ನಿರ್ಮಾಣ ಮಾಡಿ ದೇಶಸೇವೆಯೇ ಈಶ ಸೇವೆಯೆಂದು ಭಾವಿಸಿ, ಸರ್ವೇಜನಾ ಸುಖಿನೋ ಭವಂತು ಎಂದು ಅರಿತು ಗುರುವಿನ ಆಜ್ಞೆಯನ್ನು ಚಾಚೂ ತಪ್ಪದೆ, ತಮ್ಮ ಬಾಳಿನಲ್ಲಿ ಬದುಕಿನಲ್ಲಿ, ಕೆಲಸದಲ್ಲಿ ಕೈವಲ್ಯದಲ್ಲಿ ಅಳವಡಿಸಿಕೊಂಡು ಸುಪ್ತ ಸಮಾಜದ ಶಾಂತ ಸಮಾಜದ ಸುಸಂಸ್ಕೃತ ಭಾರತವನ್ನು, ನ್ಯಾಯಧರ್ಮ ಪ್ರೀತಿ, ನೀತಿ ಸಮಾಜ ಭಾರತವನ್ನು, ಬಲಿಷ್ಟವಾಗಿ ನಿರ್ಮಾಣ ಮಾಡಿ ನಮಗೆ ಬಿಟ್ಟು ಹೋದರು. ಇವರೆಲ್ಲಾ ಗುರುವಿನ ಗುಲಾಮರಾಗಿ ತಮ್ಮ ಇಹಲೋಕ ಪಾಲನೆಯನ್ನೂ ಪಾಲಿಸಿ ಪರಲೋಕ ವಾಸಿಗಳಾಗಿ ಬಿಡುತ್ತಿದ್ದರು. ಆದರೆ ಇವರ ವಿದ್ಯಾರ್ಜನೆ ಅವಧಿಯಲ್ಲಿ ಆಶ್ರಮದ ಪಾಸಲೆಯಲ್ಲಿ ಮರದ ನೆರಳಿನಲ್ಲಿ ಮರಳ ರಾಶಿಯ ಮೇಲೆ ಆಕೃತಿಗಳ ತಿದ್ದಿ ತೀಡಿ, ಕಲಿತ ವಿದ್ಯೆಯನ್ನು ಪ್ರೌಢಾವಸ್ಥೆಗೆ ಬಂದಾಗ ತಮ್ಮ ವಿದ್ವತ್ತನ್ನು, ತಮ್ಮ ಪಾಂಡಿತ್ಯದ ಸಾರ, ಸಾರಾಂಶವನ್ನು ತಾಳೆಗರಿಗಳ ಮೇಲೆ ಬರೆದು ಮುಂದಿನ ಪೀಳಿಗೆಗೆ ಕಾಯ್ದಿರಿಸುತ್ತಿದ್ದರು.

ಕಾಲ ಬದಲಾಯಿತು. ಋತು ಚಕ್ರಗಳ ತಿರುಗಲಾರಂಭಿಸಿದವು. ಮಾನವನ ಬುದ್ಧಿ ವಿಕಸನವಾಯಿತು, ಗುರುಕುಲ ಶಾಲೆಗಳು ಕಣ್ಮರೆಯಾದವು. ಆಡಳಿತ ಚುಕ್ಕಾಣಿ ಸಾಮಾನ್ಯ ಮನುಷ್ಯನ ಕೈಗೆ ಬಂದಿತು. ವಿದ್ಯೆ ಕಲಿಸುವ ಉಪಾಧ್ಯಾಯರು ವೃತ್ತಿ ತರಬೇತಿ ಪಡೆದು ಬಂದು ಸರತಿ ಸಾಲಲ್ಲಿ ನಿಂತರು. ಕಪ್ಪು ಹಲಿಗೆ ಗೋಡೆಗೆ ನೇತಾಡಿದವು. ಬಿಳಿ ಸೀಮೆಸುಣ್ಣ ಉಪಾಧ್ಯಾಯರ ಬೆರಳತುದಿಗೆ ಬಂದವು. ಅರವತ್ನಾಲ್ಕು ವಿದ್ಯೆಗಳ ಪಠ್ಯ-ಪಕ್ಕಕ್ಕೆ ಜರುಗಿದವು. ಆಧುನಿಕತೆಗೆ ತಕ್ಕಂತೆ 6 ವಿಷಯಗಳು ಪಠ್ಯದಲ್ಲಿ ಸೇರಿಕೊಂಡವು. ಇದನ್ನು ಬೋದಿಸಲು ಒಂದೊAದು ಪಠ್ಯಕ್ಕೆ ಒಬ್ಬೊಬ್ಬರಂತೆ ಉಪಾಧ್ಯಾಯರನ್ನು ನೇಮಿಸಲಾಯ್ತು. ಭಾಷೆಗನುಸಾರವಾಗಿ ವಿದ್ಯಾಪಠ್ಯಗಳನ್ನು ವಿಂಗಡಿಸಲಾಯ್ತು. ದಿನಕ್ಕೆ 6 ಗಂಟೆಯAತೆ ಭೋದನೆ ಸಮಯ ನಿಗಧಿ ಪಡಿಸಲಾಯ್ತು. ಒಂದು ವಿಷಯಕ್ಕೆ 45 ರಿಂದ 60 ನಿಮಿಷದ ಸಮಯವೆಂದು ತೀರ್ಮಾನಿಸಲಾಯ್ತು. ಆಧುನಿಕ ವಿದ್ಯಾಭೋದನೆಗೆ ಮನಮಾಡಲಾಯ್ತು. ಶಿಕ್ಷಣಕ್ಕೆ ತಕ್ಕ ಶಿಕ್ಷೆಯೂ ಜಾರಿಯಲ್ಲಿತ್ತು. ಉಪಾಧ್ಯಾಯರೂ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆಯೇ ಇನ್ನು ಹೆಚ್ಚಿನದಾಗಿ ಆತ್ಮವಾತ್ಸಲ್ಯ ಪ್ರೀತಿಯಿಂದ ಕಾಣುತ್ತಿದ್ದರು. ತಪ್ಪು ಮಾಡಿದಾಗ ಬೆತ್ತದಿಂದ ಬೆದರಿಸುತ್ತಿದ್ದರು. ಭಯದಿಂದ ಶಿಷ್ಯರೂ ತಲೆಬಾಗಿ ಕುಚೇಷ್ಠೆಯಿಂದ ದೂರ ಸರಿದು ವಿದ್ಯಾ ಅಧೀನದಲ್ಲಿ ತಲ್ಲೀನರಾಗಿ ಬಿಡುತ್ತಿದ್ದರು. ಪಾಲಕ, ಪೋಷಕರೂ, ಕೂಡ ಉಪಾಧ್ಯಾಯರಲ್ಲಿ ತುಂಬಾಭಿಮಾನ ಗೌರವದಿಂದ ನಡೆದುಕೊಳ್ಳುತ್ತಿದ್ದರು. ರಾಜ್ಯಾಡಳಿತವೂ ಕೂಡ ವಿದ್ಯೆಗೆ ತಕ್ಕ ಸುಪರ್ದಿಯನ್ನು ನಿಯಮಗಳನ್ನು, ನಿಯತ್ತಾಗಿ ಪಾಲಿಸಿಕೊಂಡು ಜಾರಿ ಮಾಡಿಕೊಂಡು ಬರುತ್ತಿದ್ದರು.

ಕಾಲ ನಂತರ, ವಿದ್ಯೆಗೆ ಒಂದು ಇಲಾಖೆ ಆರಂಭವಾಯಿತು. ಈ ಇಲಾಖೆಗೆ ಓರ್ವ ಮಂತ್ರಿಯನ್ನು ನೇಮಕ ಮಾಡಲಾಯ್ತು. ಇದಕ್ಕೆ ಹತ್ತಾರು ಆಡಳಿತಾತ್ಮಕ ಅಧಿಕಾರಿಗಳನ್ನು ನೇಮಕ ಮಾಡಲಾಯ್ತು. ಅಂದರೆ ಆರಂಭದಲ್ಲಿ ಇದು ಅತ್ಯದ್ಭುತವಾಗಿ ಕಾರ್ಯಪಾಲನೆ ಮಾಡಲು ಆರಂಭಿಸಿತು. ಒಳ್ಳೇ ಪ್ರತಿ ಫಲವೂ ದೊರೆಯಿತು. ಡಿ.ವಿ.ಜಿ. ಕುವೆಂಪು, ಪು.ತಿ.ನ. ಆದ್ಯನರಸಿಂಹಾಚಾರ್ಯ, ವಿ.ಕೃ.ಗೋಕಾಕ್, ಮುಂತಾದ ಮಹನೀಯರು ಸರ್.ಎಂ.ವಿಶ್ವೇಶ್ವರಯ್ಯ ಸರ್ ಸಿ.ವಿ. ರಾಮನ್ ರಾಜರಾಮಣ್ಣ ಮುಂತಾದ ಆಧುನಿಕ ವೈಜ್ಞಾನಿಕ ಪುಣ್ಯರನ್ನು ಈ ನಾಡು ಈ ರಾಷ್ಟç ಕಂಡಿತು.

ಇAದು? ಆಧುನಿಕತೆ ಅತಿಯಾಯಿತು. ವಿದ್ಯೆ ಕಲಿತ ಮಂದಿ ಬುದ್ಧಿಮಾಂದ್ಯರಾಗುತ್ತ ಬೆಳೆದರು. ಮಾತೃಭಾಷಾ ಶಿಕ್ಷಣಕ್ಕೆ ನೇಣು ಹಗ್ಗ ಹುಡುಕ ತೊಡಗಿದರು. ಆಂಗ್ಲಭಾಷೆಯನ್ನು ಹೆತ್ತಾಡಿಸಿದ ಅಪ್ಪನಂತೆ ತಲೆ ಮೇಲಿಟ್ಟು ಪೂಜಿಸಲು ಆರಂಭಿಸಿದರು. ವಿದ್ಯೆ ಮಾರಾಟದ ವಸ್ತುವಾಯಿತು. ವಿದ್ಯಾವಂತ ವಿದ್ಯಾಮಾರಾಟದ ದಲ್ಲಾಳಿಯಾದ ಆಧುನಿಕ ವಿದ್ಯೆ ಕಲಿತ ವಿದ್ಯಾರ್ಥಿ ದರೋಡೆಗಿಳಿದ. ಸುಲಭ ಸಂಪಾದನೆಯ ಯಾದಿಗೆ ಗಾಡಿಗಳ ಪಯಣ ಆರಂಭಿಸಿದ. ವಿದ್ಯಾಮಂತ್ರಿ ಬುದ್ದಿಗೇಡಿಯಾದ ಅಧಿಕಾರಿಗಳು ಬಾಲಂಗೋಚಿ ಗಳಾದರು. ಮಾತೃಭಾಷಾ ಶಾಲೆಗಳನ್ನು ಅಲ್ಪಸಂಖ್ಯಾತರ0ತೆ ಕಾಣಲು ಪ್ರಾರಂಭಿಸಿದರು. (20 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳನ್ನು)ದ ಪ್ರಕಾರ ಮುಚ್ಚಲು ಆರಂಭಿಸಿದರು. ಬಡವರ ಮಕ್ಕಳ ವಿದ್ಯೆ ಗೋಧಿಹಿಟ್ಟಿನ ರಾಶಿಯಲ್ಲಿ ಮುಚ್ಚಲು ಆರಂಭಿಸಿದವು. ಶ್ರೀಮಂತರ ಮಕ್ಕಳು 1ಕ್ಕೆ ನೂರಾಗಲಿ ಕೊಟ್ಟು ಗಲಿಬಿಲಿ ಪದವಿ ಪಡೆದು ಫಲಾಯನ ಮಾಡಲು ಆರಂಭಿಸಿದರು. ರಾಜ್ಯರಾಷ್ಟçಗಳನ್ನು ಅರಾಜಕತೆಯಲ್ಲಿ ಅಲೆದಾಡಲು ಬಿಟ್ಟ  ರಾಜಕಾರಣಿಗಳು ಲಂಚ, ವಂಚನೆ, ಪ್ರಕೃತಿ ಸಂಪತ್ತು ಲೂಟಿ, ಗೋಮಾಳ ಗುಳುಂ, ಸರ್ಕಾರಿ ಕೆರೆ ಕುಂಟೆಗಳಿಗೆ ಲಗಾಮು ಹಾಕುತ್ತಾ ತಮ್ಮ ವಂಶದ ಹತ್ತಾರು ತಲೆಮಾರುಗಳು ತಿನ್ನುವಷ್ಟು ಕಪ್ಪು ಹಣ ಸಂಗ್ರಹಣೆಯಲ್ಲಿ ತಲ್ಲೀನರಾದರು. ಬಡವ ಭಗವಂತನ ಧ್ಯಾನ ಮಾಡುತ್ತಿದ್ದರೆ ಈ ಕುಳಗಳು ಬಡವರ ಮಕ್ಕಳಿಗೆ ಬಿಸಿ ಊಟ ಹಾಕುತ್ತೇವೆಂದು ತುಟಿಗೆ ತುಪ್ಪ ಸವರುತ್ತಾ ಸಾಗಿದರು. 

Tags

Post a Comment

0Comments

Post a Comment (0)