20 ತಿಂಗಳುಗಳ ನಂತರ ಪ್ರಾಥಮಿಕ ಶಾಲೆ ಮಾರ್ಗಸೂಚಿಗಳೊಂದಿಗೆ ಆರಂಭ

varthajala
0

ರಾಜ್ಯದಲ್ಲಿ 1ರಿಂದ 5ನೇ ತರಗತಿ ವರೆಗಿನ ಶಾಲೆಗಳು 20 ತಿಂಗಳುಗಳ ಬಳಿಕ ಆರಂಭಗೊಳ್ಳುತ್ತಿವೆ. ಈಗಾಗಲೇ ವಿಶ್ವವಿದ್ಯಾಲಯ, ಕಾಲೇಜು, ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಕೋವಿಡ್ ಲಸಿಕೆ ಬಂದರೂ ಕೊರೊನಾ ಆತಂಕ ಇನ್ನೂ ಕಡಿಮೆ ಆಗಿಲ್ಲ. ಕೊರೊನಾ ಹಿನ್ನೆಲೆ ಸರ್ಕಾರ ಸಹ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ಆರಂಭಿಸುವುದಾಗಿ ಹೇಳಿದೆ. ಹಾಗಾಗಿ ಭಾನುವಾರವೇ ಶಾಲೆಗಳನ್ನು ಶುಚಿಗೊಳಿಸಲಾಗಿತ್ತು. ಬೇಗ ಮಕ್ಕಳನ್ನು ಶಾಲೆಗೆ ವಾಪಸ್ ಕರೆಸಿಕೊಳ್ಳಬೇಕು. ಆನ್‌ಲೈನ್ ತರಗತಿ ನಿಲ್ಲಿಸಿ, ಬೌತಿಕ ತರಗತಿಗಳನ್ನು ಶುರು ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಇಂದಿನಿAದ 1ರಿಂದ 5ನೇ ತರಗತಿಯವರೆಗೆ ಶಾಲೆ ಆರಂಭವಾಗುತ್ತಿದೆ.



2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಸಚಿವರು ಮತ್ತು ಇಲಾಖೆಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. 20 ತಿಂಗಳುಗಳ ನಂತರ ಪ್ರಾಥಮಿಕ ಶಾಲೆ ಆರಂಭ: ಮಾರ್ಗಸೂಚಿಗಳು ಇಲ್ಲಿದೆ ಆರಂಭದಲ್ಲೇ ಮಕ್ಕಳಿಗೆ ಪೂರ್ಣಾವಧಿ ತರಗತಿಗಳು ಇರುವುದಿಲ್ಲ. ಈಗಾಗಲೇ ಕೊರೊನಾ ಹಾಗೂ ಇನ್ನಿತರ ವಿಚಾರಗಳಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಹೀಗಾಗಿ ಏಕಾಏಕಿಯಾಗಿ ಪೂರ್ಣಾವಧಿ ತರಗತಿಗಳು ಮಾಡದೆ ಮಧ್ಯಾಹ್ನದವರೆಗೆ ಮಾತ್ರ ಕ್ಲಾಸ್ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಮನಸ್ಥಿತಿ ಅರಿತುಕೊಂಡು ತಜ್ಞರ ಅಭಿಪ್ರಾಯ ಪಡೆದು ತರಗತಿ ಅವಧಿ ವಿಸ್ತರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ. 

ಜೊತೆಗೆ ಇಂದಿನಿAದ ಬಿಸಿಯೂಟ ಕಾರ್ಯಕ್ರಮಕ್ಕೂ ಶಿಕ್ಷಣ ಇಲಾಖೆ ಚಾಲನೆ ನೀಡಲಾಗುತ್ತದೆ. ಬಾಂಬ್ ತಯಾರಿಕೆ ವೃತ್ತಿ ಹಾಗೂ ಜೀವನಾಧಾರವಾದರೆ!! ಶಾಲೆ ಆರಂಭಿಸಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು 

* ಶೇ 50ರಷ್ಟು (ಅರ್ಧದಷ್ಟು) ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ 

* ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ಒಪನ್ 

* ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಸ್ವಚ್ಚತಾ ಕಾರ್ಯ, ಸ್ಯಾನಿಟೈಸ್‌ಗೆ ಅವಕಾಶ 

* ಮಕ್ಕಳಿಗೆ ಒಂದು ದಿನ ತರಗತಿ ಒಂದು ದಿನ ರಜೆ 

* ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ 

* ಅನುಮತಿ ಪತ್ರದಲ್ಲಿ ವಿದ್ಯಾರ್ಥಿಯ ಕೋವಿಡ್ ಸೋಂಕು ಇಲ್ಲದೆ ಇರೋದನ್ನ ಪೋಷಕರು ಧೃಢಿಕರಿಸಬೇಕು 

* ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು 

* ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ * ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ತರಗತಿಗೂ ಅವಕಾಶ 

* 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು 

* ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ 

* ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.30 ರವರೆಗೆ ಕ್ಲಾಸ್ 

* ನವೆಂಬರ್ ಎರಡರಿಂದ ಶನಿವಾರ ಬೆಳಗ್ಗೆ 8 ರಿಂದ 11.40 ರ ವರೆಗೆ ತರಗತಿ 

* ಯಾವುದೇ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತೆರೆಯಲು ಅವಕಾಶ ಇಲ್ಲ 

* ಅ.25ರಿಂದ ನವೆಂಬರ್ 2ರವರೆಗೂ ಅರ್ಧ ದಿನ ಮಾತ್ರ ತರಗತಿ 

* ನವೆಂಬರ್ 2ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಸೂಚನೆ * ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ.

Tags

Post a Comment

0Comments

Post a Comment (0)