ಸಿಡಿಸೈಮರ್ (CDSIMER) ವೈದ್ಯರ ಕಿರುಚಿತ್ರಕ್ಕೆ ಕೇಂದ್ರ ಔಷಧ ನಿಯಂತ್ರಣ ಮಂಡಳಿ ಪ್ರಶಸ್ತಿ

varthajala
0


DrShivamurthy_-_Pharmacology.jpg 


ಇತ್ತೀಚೆಗೆ ರಾಷ್ಟ್ರೀಯ ಔಷಧ ಅಡ್ಡಪರಿಣಾಮಗಳ ಜನಜಾಗೃತಿ ಸಪ್ತಾಹವನ್ನು ರಾಷ್ಟ್ರೀಯ ನಿರ್ವಹಣಾ ಕೇಂದ್ರ ಇಂಡಿಯನ್ ಫಾರ್ಮಕೋಪಿಯ ಕಮಿಷನ್ (ಎನ್.ಸಿ.ಸಿ-ಐ.ಪಿ.ಸಿ), ಭಾರತ ಸರ್ಕಾರ, ಘಾಜಿಯಾಬಾದ್, ಉತ್ತರ ಪ್ರದೇಶ, ಇವರು ಸೆಪ್ಟಂಬರ್ ೧೭ ರಿಂದ ೨೩ ರ ರವರೆಗೆ ಆಚರಿಸಲಾಯಿತು. ಇದರ ಅಂಗವಾಗಿ ನಡೆದ ಕಿರುಚಿತ್ರ ಸ್ಪರ್ಧೆಯಲ್ಲಿ ಡಾ. ಚಂದ್ರಮ್ಮ ದಯಾನಂದ ಸಾಗರ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ದಯಾನಂದ ಸಾಗರ್ ಯುನಿವರ್ಸಿಟಿ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಔಷಧಶಾಸ್ತ್ರ ತಜ್ಞ ವೈದ್ಯರಾದ ಡಾ.ಶಿವಮೂರ್ತಿ ಎನ್ ಇವರಿಗೆ ಪ್ರಥಮ ಸ್ಥಾನ ಲಭಿಸಿದೆ. ಡಾ.ಶಿವಮೂರ್ತಿ ಎನ್ ಅವರು ಬರೆದು ನಿರ್ದೇಶನ ಮಾಡಿದ ಕಾರ್ಟೂನ್ ಕಿರುಚಿತ್ರ, ಔಷಧಗಳ ಹೆಸರುಗಳ (ಬ್ರಾಂಡ್ ಗಳ) ನಕಲು ಮಾಡುವ ದಂಧೆಯ ಕುರಿತಾಗಿದ್ದು, ಅದರಿಂದ ಔಷಧಿಗಳ ಅದಲುಬದಲಾಗಿ ರೋಗಿಗಳ ಚಿಕಿತ್ಸೆ ಮಾಡುವಾಗ ಆಗುವ ಅಡ್ಡ ಪರಿಣಾಮಗಳು, ಚಿಕಿತ್ಸೆಯಲ್ಲಾಗುವ ವಿಫಲಗಳು ಮತ್ತು ಕುರಿತಾದ ಅವಾಂತರಗಳು, ಇವುಗಳ ಕುರಿತದ್ದಾಗಿದೆ. ಈ ಚಿತ್ರ "ಬ್ರಾಂಡಬ್ಯುಸ್" (BRANDABUSE – END THE MENACE) ಎಂಬ ಶೀರ್ಷಿಕೆಯನ್ನು ಹೊಂದಿದೆ. ಔಷಧಗಳ ಬ್ರಾಂಡ್ ಗಳು ಒಂದಕ್ಕೊಂದು ಹೋಲುವಂತಿದ್ದರೆ, ಅದನ್ನು ಔಷಧತಜ್ಞರು, ವೈದ್ಯರು, ಆರೋಗ್ಯಸಿಬ್ಬಂಧಿ, ಮತ್ತು ಸಾರ್ವಜನಿಕರು ಕೇಂದ್ರ ಔಷಧ ನಿಯಂತ್ರಣ ಮಂಡಳಿ (National Coordination Center-Indian Pharmacopoea Commission (NCC-IPC) www.ipc.gov.in) ಆಆಆಣ್ಣೂ ಇಲ್ಲಿಗೆ ಈ ಮೇಲ್ (pvpi.ipc@gov.in) ಮೂಲಕ ತಿಳಿಸಬೇಕು ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಸಹಕರಿಸಬೇಕು ಎಂದು ತಿಳಿಸುವ ಕಿರುಚಿತ್ರವಾಗಿದೆ. ಈ ಚಿತ್ರ ಯುಟ್ಯೂಬ್ ನಲ್ಲಿ ಲಭ್ಯವಿದ್ದು https://youtu.be/Q_U3D8oM_mU ಲಿಂಕ್ ನಲ್ಲಿ ವೀಕ್ಷಿಸಬಹುದಾಗಿದೆ. 

Tags

Post a Comment

0Comments

Post a Comment (0)