ಶ್ರೀಮತಿ ರಾಧಿಕಾ ಜಿ. ಎನ್. ಅವರ “ಕನ್ನಡ ಅಕ್ಷರಮಾಲೆ” ಪುಸ್ತಕವು ಕನ್ನಡ ಅಕ್ಷರಮಾಲೆಯ ಅರಿವು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿಯಾದ ಸಂಪನ್ಮೂಲವಾಗಿದೆ. ಈ ಪುಸ್ತಕದಲ್ಲಿ ಅಕ್ಷರಮಾಲೆಯ ಆರಂಭಿಕ ಪರಿಚಯದಿಂದ ಹಿಡಿದು, ಹೋಲಿಕೆಯ ಅಕ್ಷರಗಳು, ಒತ್ತಕ್ಷರಗಳು, ಗುಣಿತಾಕ್ಷರಗಳು, ಕಾಗುಣಿತದ ಬರಹಗಳು ಸೇರಿದಂತೆ ಕನ್ನಡ ಅಕ್ಷರಗಳ ವೈವಿಧ್ಯಮಯ ಭಾಗಗಳನ್ನು ಸುಲಭವಾಗಿ ತಿಳಿಸಲಾಗಿದೆ. ಅಷ್ಟು ಮಾತ್ರವಲ್ಲದೆ, ಕನ್ನಡ ಅಂಕಿಗಳು ಮತ್ತು ಮಗ್ಗಿ ಅಭ್ಯಾಸಕ್ಕೂ ಅವಕಾಶ ನೀಡುತ್ತದೆ, ಹೀಗೆ ಮಕ್ಕಳು ಹಸ್ತಲಿಖಿತ ಅಭ್ಯಾಸದ ಮೂಲಕ ಅಕ್ಷರಗಳನ್ನು ಸುಲಭವಾಗಿ ಕಲಿಯುತ್ತಾರೆ.
ಇದಲ್ಲದೆ, ಶಿಶು ಗೀತೆಗಳು, ನೀತಿ ಕಥೆಗಳು, ಪ್ರಾಣಿ ಮತ್ತು ಪಕ್ಷಿಗಳ ಕುರಿತು ಮಾಹಿತಿ, ಸ್ವಾತಂತ್ರ್ಯ ಹೋರಾಟಗಾರರ ಕುರಿತು ಚಿತ್ರಗಳು ಮತ್ತು ಉದಾಹರಣೆಗಳು ಪುಸ್ತಕವನ್ನು ಹಿಗ್ಗಿಸುವಂತೆ ಮಾಡುತ್ತವೆ. ಈ ಎಲ್ಲ ವಿಷಯಗಳು ಮಕ್ಕಳಲ್ಲಿ ಸಾಮಾನ್ಯ ಜ್ಞಾನವನ್ನು ಹಸಿರಾಗಿಸುವುದಲ್ಲದೆ, ಓದು, ಬರವಣಿಗೆ, ನೈತಿಕತೆಯ ಮೇಲಿನ ಅರಿವು ಮತ್ತು ಸೃಜನಾತ್ಮಕತೆಯ ಅಭ್ಯಾಸಕ್ಕೂ ಸಹಾಯಕವಾಗಿವೆ.
ಒಟ್ಟಾರೆ, ಪುಸ್ತಕವು ಶೈಕ್ಷಣಿಕ ದೃಷ್ಟಿಯಿಂದ ಮೌಲ್ಯಯುತವಾಗಿಯೇ ಅಲ್ಲದೆ, ಓದುಗರ ಮನರಂಜನೆಗೂ ಕಾರಣವಾಗುತ್ತದೆ. ಬರಹ ಸರಳ, ಚಿತ್ರಣ ಆಕರ್ಷಕ ಮತ್ತು ಅಭ್ಯಾಸ ಭಾಗಗಳು ಸ್ಪಷ್ಟವಾದುದರಿಂದ, ಪ್ರಾಥಮಿಕ ಹಂತದ ಮಕ್ಕಳಿಗೆ ಅಥವಾ ಕನ್ನಡ ಅಕ್ಷರ ಕಲಿಕೆಯಲ್ಲಿ ಹೊಸಬರಿಗೆ ಈ ಪುಸ್ತಕ ಅತ್ಯಂತ ಸೂಕ್ತವಾಗಿದೆ.
ಈ ಪುಸ್ತಕವು ಬ್ರಾಹ್ಮಿ ಅಕಾಡೆಮಿಕ್ ಟ್ರಸ್ಟ್ ಇಂದ ಪ್ರಕಾಶನವಾಗಿದೆ.ಪ್ರತಿಗಳಿಗಾಗಿ ರಾಧಿಕಾ ಜಿ.ಎನ್. ರವರನ್ನು 9900322338 ನಂಬರ್ ನಲ್ಲಿ ಸಂಪರ್ಕಿಸಿ.
-ಮಹಾಲಕ್ಷ್ಮಿ ಆರ್ (ಎಂಎಸ್ಸಿ,ಎನ್ಟಿಟಿ)
ಪ್ರಿ ಸ್ಕೂಲ್ ಟೀಚರ್ & ಎನ್ಟಿಟಿ ಟ್ರೈನರ್