ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯರಿಗೆ ಸ್ವಾಗತ

varthajala
0

ಬಳ್ಳಾರಿ ನ 04. ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ:     02-11-2021 ಮಂಗಳವಾರದAದು ನಡೆದ ದ್ವಿತಿಯ ಪಿಯುಸಿ ವಿದ್ಯಾರ್ಥಿನಿಯರಿಂದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಶಾರದ ಮತ್ತು ಪ್ರಣತಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರುಚಿತ ಪ್ರಸ್ತಾವಿಕ ನುಡಿಗಳನ್ನಾಡಿದರು ಸನ್ಮತಿ ಸ್ವಾಗತ ಕೋರಿದರು. 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಕವಿತಾ ಸಾಗರ್ ಸಹಾಯಕ ಪ್ರಾಧ್ಯಾಪಕರು ಸಸ್ಯಶಾಸ್ತç ವಿಭಾಗ ವಿಜಯ ನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರು ಮಾತನಾಡುತ್ತಾ, ನಾನು ಕೂಡ ಈ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಎಂಬ ಹೆಮ್ಮೆಯೊಂದಿಗೆ ನೀವು ಉತ್ತಮ ಕಾಲೇಜನ್ನೇ ಆಯ್ಕೆಮಾಡಿಕೊಂಡಿದ್ದೀರಿ. “ಕಠಿಣ ಪರಿಶ್ರಮ ವಿಧೇಯತೆ ಸಮಯ ಪ್ರಜ್ಞೆ ಮತ್ತು ಶಿಸ್ತು” ಇವುಗಳನ್ನು ಮೈಗೂಡಿಸಿಕೊಳ್ಳುವುದರಿಂದ ಖಂಡಿತ ಯಶಸ್ಸು ಸಾಧ್ಯವೆಂದರು ಹೊಸಶಿಕ್ಷಣ ನೀತಿಯಂತೂ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಸ್ವಯಂ ಉದ್ಯೋಗ ಮಾಡುವ ಕೌಶಲ್ಯ ಬೆಳೆಸುವುದೇ ಇದರ ಉದ್ದೇಶವೆಂದು ತಿಳಿಸಿದರು.

ಶ್ರೀಮತಿ ಕುಪ್ಪಗಲ್ ಗಿರಿಜಾ ಆಡಳಿತ ಮಂಡಳಿ ಅಧ್ಯಕ್ಷರು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಪದವಿ ಮಹಾವಿದ್ಯಾಲಯ ಇವರು ಮಾತನಾಡುತ್ತಾ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಸಮಾಜ ಮೆಚ್ಚುವಂತಹ ಸಾಧನೆ ಮಾಡಿ ಸಂಸ್ಥೆಗೂ ತಂದೆ ತಾಯಿಯರಿಗೂ ಕೀರ್ತಿ ತನ್ನಿ ಎಂದು ಹಾರೈಸಿದರು. ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಎಸ್.ವೈ.ತಿಮ್ಮಾರೆಡ್ಡಿ ಮಾತನಾಡುತ್ತಾ ನಿಮಗೆಲ್ಲಾ ಬೆನ್ನೆಲುಬಾಗಿ ಉಪನ್ಯಾಸಕರಿದ್ದಾರೆ. ಈ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗೂ ಅವಕಾಶವಿದೆ ಗುರಿ ತಲುಪಲು ಯಾವುದೇ ಅಡ್ಡದಾರಿ ಇಲ್ಲ ನಿರಂತರ ಪರಿಶ್ರಮವೇ ಮುಖ್ಯ ಎಂದರು.

ಡಾ|| ಬಿ.ಗೋವಿಂದರಾಜು ಪ್ರಾಚಾರ್ಯರು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಪದವಿ ಪೂರ್ವ ಕಾಲೇಜು, ಬಳ್ಳಾರಿ. ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರತಿ ನಿತ್ಯದ ಕಠಿಣ ಪರಿಶ್ರಮ ದೊಡ್ಡ ಸಾಧನೆಗೆ ನಾಂದಿಯಾಗುತ್ತದೆ. ಹೀಗಾಗಿ ನಿರಂತರ ಅಧ್ಯಯನವೇ ಸಾಧನೆಗೆ ಹಾಗೂ ಯಶಸ್ಸಿಗೆ ದಾರಿ ಎಂದರು ಇದೇ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಶ್ರಾವ್ಯನಾಯ್ಡು ಇವರು ಫ್ರಾನ್ಸಿ ದೇಶಕ್ಕೆ ಹೆಚ್ಚಿನ ಅಧ್ಯಯನ ಮಾಡಲು ತೆರಳುತ್ತಿರಯವ ಯುವ ಪ್ರತಿಭಾ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವೆಂದರು. ಉಪನ್ಯಾಸಕಿಯರಾದ ಶ್ರೀಮತಿ ಗಾಯತ್ರಿ.ಬಿ ಮತ್ತು ಶ್ರೀಮತಿ ಸುನೀತ.ಟಿ ಹಾಗೂ ವೈ.ಗುರುಬಸಮ್ಮ ಅತಿಥಿಗಳನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡಿದ್ದ ಶ್ರೀ ಜಿ.ಎಂ.ಶರಣಬಸವ ಕನ್ನಡ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಹಾಗೆಯೇ ಅಕ್ಷಿತ ಎಂಬ ವಿದ್ಯಾರ್ಥಿನಿಯು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ವ್ಯಕ್ತಿಯ ಸ್ಪರ್ಷದಿಂದ ಆ ವ್ಯಕ್ತಿ ಯಾರೆಂದು ಹಾಗೂ ವಾಸನೆಯಿಂದ ಯಾವ ಬಣ್ಣದ ಬಟ್ಟೆ ಧರಿಸಿದ್ದಾರೆಂದು ಗುರುತು ಹಿಡಿಯುತ್ತಾಳೆ ಅಲ್ಲದೆ ವಿಸಿಟಿಮಂಗ್ ಕಾರ್ಡ್ನಲ್ಲಿರುವ ಬಣ್ಣಗಳನ್ನು ಸಹ ಹೇಳುತ್ತಾಳೆ. ಕ್ಯೂಬ್ ಬಣ್ಣಗಳನ್ನು ಕ್ಷಣಾರ್ಧದಲ್ಲಿ ಸರಿಜೋಡಿಸುವ ಅಪ್ರತಿಮ ಪ್ರತಿಭೆ ನಮ್ಮ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವುದು ಹೆಮ್ಮೆಯ ವಿಷಯ ಈಶ್ವರಿ ಪಾಟೀಲ್‌ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾರದ ಮತ್ತು ಪ್ರಣತಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರುಚಿತ ಪ್ರಸ್ತಾವಿಕ ನುಡಿಗಳನ್ನಾಡಿದರು ಸನ್ಮತಿ ಸ್ವಾಗತಿಸಿದರೆ. ಗೋದಾವರಿ ಶರ್ಮ ವಂದಿಸಿದರು. ಸಾಂಸ್ಕೃತಿ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


Tags

Post a Comment

0Comments

Post a Comment (0)