12-14ವರ್ಷದವರಿಗೆ ಕೊರೊನಾ ಲಸಿಕೆ: ಆರೋಗ್ಯ ತಜ್ಞ ಎನ್.ಕೆ.ಅರೋರಾ

varthajala
0


15-18 ವರ್ಷದವರು ಅಂದಾಜು 7.4 ಕೋಟಿ ಇದ್ದಾರೆ. ಅದರಲ್ಲಾಗಲೇ 3.45 ಕೋಟಿ ಜನರು ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದಾರೆ. 28 ದಿನಗಳಾದ ಬಳಿಕ ಅವರಿಗೆ ಎರಡನೇ ಡೋಸ್ ಕೊಡಲಾಗುತ್ತದೆ ಎಂದು ಎನ್.ಕೆ.ಅರೋರಾ ಮಾಹಿತಿ ನೀಡಿದ್ದಾರೆ.

ಮಾರ್ಚ್ನಿಂದ 12-14ವರ್ಷದವರಿಗೆ ಕೊರೊನಾ ಲಸಿಕೆ ನೀಡಿಕೆ; ಆರೋಗ್ಯ ತಜ್ಞ ಎನ್.ಕೆ.ಅರೋರಾ ಮಾಹಿತಿ

ಭಾರತದಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮತ್ತು 15-18 ವರ್ಷದವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಮಧ್ಯೆ  ಆರೋಗ್ಯ ತಜ್ಞ ಡಾ. ಎನ್.ಕೆ.ಅರೋರಾ ಇನ್ನೊಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.  ರಾಷ್ಟಿçಯ ತಾಂತ್ರಿಕ ಸಲಹಾ ಸಮಿತಿಯ ಕೊವಿಡ್ 19 ಕಾರ್ಯಕಾರಿ ಗುಂಪಿನ ಪ್ರತಿರಕ್ಷಣಾ ವಿಭಾಗದ ಅಧ್ಯಕ್ಷರೂ ಆಗಿರುವ ಎನ್. ಕೆ.ಅರೋರಾ, ಮಾರ್ಚ್ ತಿಂಗಳಿನಿAದ ದೇಶದಲ್ಲಿ 12-14ವರ್ಷದವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನ ಶುರು ಮಾಡುತ್ತೇವೆ ಎಂದು ಹೇಳಿದ್ದಾರೆ. ಭಾರತದಲ್ಲಿ 15-18ವರ್ಷದವರಿಗೆ ಜನವರಿ 3ರಿಂದ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ವಯಸ್ಸಿನವರಿಗೆ ಈಗಾಗಲೇ 3 ಕೋಟಿ ಗೂ ಅಧಿಕ ಡೋಸ್ ನೀಡಲಾಗಿದೆ.



ಪ್ರಸ್ತುತ ದೇಶದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ನೀಡಲು ಎರಡು ಕೊವಿಡ್? 19 ಲಸಿಕೆಗಳಿಗೆ ಅನುಮತಿ ಸಿಕ್ಕಿದೆ. ಅದು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಮತ್ತು ಇನ್ನೊಂದು ಜೈಡೆಸ್ ಕ್ಯಾಡಿಲಾದ    ಹಾಗಿದ್ದಾಗ್ಯೂ ದೇಶದಲ್ಲಿ ಸದ್ಯದ ಮಟ್ಟಿಗೆ ಕೊವ್ಯಾಕ್ಸಿನ್ ಲಸಿಕೆಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ನೀಡಲಾಗುತ್ತಿದೆ. ಹಾಗೇ ಇನ್ನೊಂದೆಡೆ ಆರೋಗ್ಯ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಬೂಸ್ಟರ್ ಡೋಸ್‌ಗಳನ್ನೂ ಕೊಡಲಾಗುತ್ತಿದೆ.

ಇದೀಗ ಮಾರ್ಚ್ನಿಂದ 12 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಹೇಳಿರುವ ಎನ್.ಕೆ.ಅರೋರಾ,  15-18 ವರ್ಷದವರು ಅಂದಾಜು 7.4 ಕೋಟಿ ಇದ್ದಾರೆ. ಅದರಲ್ಲಾಗಲೇ 3.45 ಕೋಟಿ ಜನರು ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದಾರೆ. 28 ದಿನಗಳಾದ ಬಳಿಕ ಅವರಿಗೆ ಎರಡನೇ ಡೋಸ್ ಕೊಡಲಾಗುತ್ತದೆ. ಈ ವಯಸ್ಸಿನವರು ಲಸಿಕೆ ಅಭಿಯಾನದಲ್ಲಿ ತುಂಬ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಜನವರಿ ಅಂತ್ಯದ ಹೊತ್ತಿಗೆ 15-18 ವಯಸ್ಸಿನ ಎಲ್ಲರಿಗೂ ಮೊದಲ ಡೋಸ್ ಕೊಟ್ಟು ಮುಗಿಯಲಿದೆ. ಹಾಗೇ, ಫೆಬ್ರವರಿ ಅಂತ್ಯದ ಹೊತ್ತಿಗೆ ಈ ವಯಸ್ಸಿನ ವರ್ಗದವರಿಗೆ ಎರಡನೇ ಡೋಸ್ ಕೂಡ ಮುಗಿಯಲಿದೆ. ಅದಾದ ಬಳಿಕ 12-14ವಯಸ್ಸಿನವರಿಗೆ ಮಾರ್ಚ್ನಲ್ಲಿ ಲಸಿಕೆ ನೀಡಲು ಶುರು ಮಾಡಬಹುದುಎ ಎಂದು ಅವರು ಮಾಹಿತಿ ನೀಡಿದ್ದಾರೆ.  ಅಂದಹಾಗೆ, ಈ ವಯಸ್ಸಿನವರೂ ಕೂಡ ದೇಶದಲ್ಲಿ ಸುಮಾರು 7.5 ಕೋಟಿ ಮಂದಿ ಇದ್ದಾರೆ ಎಂದೂ ತಿಳಿಸಿದ್ದಾರೆ.

ಭಾರತದಲ್ಲಿ ಒಟ್ಟಾರೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಿ ಈಗಾಗಲೇ ಒಂದು ವರ್ಷ ಕಳೆದಿದೆ.  2021ರ ಜನವರಿ 16ರಂದು ಮೊದಲು ಕೊರೊನಾ ಲಸಿಕೆ ಅಭಿಯಾನ ಶುರುವಾದಾಗ ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಗೆ ಮೊದಲು ಲಸಿಕೆ ನೀಡಲಾಗಿದೆ. ಅದಾದ ಬಳಿಕ 60 ವರ್ಷ ಮೇಲ್ಪಟ್ಟವರಿಗೆ, ನಂತರ 45 ವರ್ಷ ಮೇಲ್ಪಟ್ಟವರಿಗೆ ಕೊಡಲಾಯಿತು. ನಂತರ 18ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು ಎಂಬ ಆದೇಶ ಬಂತು. ಡಿಸೆಂಬರ್ 25ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 15-18 ವಯಸ್ಸನವರಿಗೆ 2022ರ ಜನವರಿ 3ರಿಂದ ಕೊರೊನಾ ಲಸಿಕೆ ನೀಡಲಾಗುವುದು ಎಂದು ಹೇಳಿದ್ದರು. ಅದರಂತೆ ಜನವರಿ 3ರಿಂದ ಹೊಸ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಇನ್ನೊಂದೆಡೆ ಆರೋಗ್ಯ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮೂರನೇ ಡೋಸ್ ಲಸಿಕೆ ನೀಡಲಾಗುತ್ತಿದೆ.

Post a Comment

0Comments

Post a Comment (0)