ಶಾಲಾ ಮಕ್ಕಳಿಗೆ 4.65 ಲಕ್ಷ ಮೊತ್ತದ ವಸ್ತುಗಳು ದೇಣಿಗೆ ನೀಡಿದ ಹೆಮ್ಮೆಯ ಸಂಸ್ಥೆ...!

varthajala
0

ಬಳ್ಳಾರಿ ಜ 07. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಯಾಪುರ. ಬಳ್ಳಾರಿ ಪೂರ್ವ ತಾ.ಜಿ. ಈ ಶಾಲೆಗೆ ಬೆಂಗಳೂರಿನ McAfee Software India Private Limited & Reaching Hand  ಸಂಸ್ಥೆಯ  ಬಿ.ಕೆ. ಖಂಡಪ್ಪ Program Manager  ಇವರು ನಮ್ಮ ಶಾಲೆಯ ಶೌಚಾಲಯವನ್ನು ದಿನಾಂಕ :-6-1-2022 ರಂದು ಉದ್ಘಾಟಿಸಿದರು.

ಸದರಿ ಕಾರ್ಯಕ್ರಮದಲ್ಲಿ ಬಡ್ತಿ ಮುಖ್ಯ ಗುರುಗಳಾದ  R.ಮೃತ್ಯುಂಜಯ ಹಾಗೂ ಶಾಲೆಯ ಸ್ಥಳ ದಾನಿಗಳಾದ ಶ್ರೀಮತಿ ಶಕುಂತಲ ರೆಡ್ಡಿ ಹಾಗೂ ಶಾಲೆಯ ಶಿಕ್ಷಕ ವೃಂದ ಮತ್ತು ಗ್ರಾಮಸ್ಥರು ಸೇರಿ ಶೌಚಾಲಯವನ್ನು ಉದ್ಘಾಟಿಸಿದರು.ಸದರಿ ಸಂಸ್ಥೆಯವರು ರೂ.2,24,000 ಮೊತ್ತದ 2  ವಿಶೇಷ ಹೆಣ್ಣುಮಕ್ಕಳ ಶೌಚಾಲಯವನ್ನು ಮತ್ತು 1,35,000 ರೂ,ಮೊತ್ತದ 30 ಡೆಸ್ಕ್ಗಳನ್ನು ಮತ್ತು 69,300 ರೂ,ಮೊತ್ತದ ಶಾಲಾ ಬ್ಯಾಗ್ ಗಳನ್ನು ಮತ್ತು 37,500 ರೂ,ಮೊತ್ತದ ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್ ಗಳನ್ನು ಒಟ್ಟಾರೆಯಾಗಿ ರೂ,4,65,800 ಮೊತ್ತದ ಹಣವನ್ನು ನಮ್ಮ ಶಾಲಾ ಮಕ್ಕಳಿಗೆ ವಸ್ತು ರೂಪದಲ್ಲಿ  ದಾನ ಮಾಡಿದ್ದಾರೆ.  

ಇವರಿಗೆ ಶಾಲೆಯ ಪರವಾಗಿ ಮತ್ತು ಗ್ರಾಮದ ಪರವಾಗಿ ಹಾಗೂ ಇಲಾಖೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.


Tags

Post a Comment

0Comments

Post a Comment (0)