ಬೆಂಗಳೂರು : ಹತ್ತನೇ ವಯಸ್ಸಿಗೆ ಜೂನಿಯರ್ ಪರೀಕ್ಷೆಯಲ್ಲಿ ಪಾಸಾದರೆ ವಿಶ್ವವಿದ್ಯಾಲಯದಿಂದ ಸರ್ಟಿಫಿಕೇಟ್ ನೀಡಲಾಗುತ್ತೆ ಎಂದು ರಾಜ್ಯ ಸರಕಾರದ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವ ವಿದ್ಯಾಲಯದ ಕುಲಸಚಿವ ಡಾ, ಎಂ.ಜಿ.ಮಂಜುನಾಥ್ ಹೇಳಿದರು.
ಅವರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟ್ಯ ಸನ್ನಿದಿ ಭರತನಾಟ್ಯ ಕಲಾಶಾಲೆಯು ಆಯೋಜಿಸಿದ್ದ ನಾಟ್ಯ ಸಂಭ್ರಮ -2026 ಕೃಷ್ಣಾರ್ಪಣಮ್ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಶ್ರೀಕೃಷ್ಣನ ಕುರಿತಾದ 21ಕೃತಿಗಳಿಗೆ 201ವಿದ್ಯಾರ್ಥಿಗಳಿಂದ ನೃತ್ಯ ನಮನ ಮಾಡಿಸಿರುವ ನೃತ್ಯ ಗುರು ಮೋನಿಷಾ ಅವರು ಮತ್ತು ಅವರ ತಂಡದವರು ಅಭಿನಂದನಾರ್ಹರು ಎಂದರು, ಭರತನಾಟ್ಯವು ನಮ್ಮ ಕನ್ನಡದ ಕಲೆಯೇ ಹಾಗಿದ್ದು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪುರಾತನವಾಗಿದ್ದು ಅದಕ್ಕೆ ನಮ್ಮ ಪುರಾತನ ದೇವಾಲಯಗಳಲ್ಲಿ ಕೆತ್ತಿರುವ ಶಿಲ್ಪಾಕಲೆಗಳೆ ಸಾಕ್ಷಿಯಾಗಿದೇ ಎಂದು ಅವರು ಹೇಳಿದರು.
ಸಮಾರಂಭ ವನ್ನು ತುಳಸಿಗಿಡಕ್ಕೆ ನೀರೇರೆದು ಶ್ರೀಕೃಷ್ಣನಿಗೆ ಪುಷ್ಪಾರ್ಚನೆ ಮಾಡಿ ಉದ್ಘಾಟನೆ ಮಾಡಿದ ಖ್ಯಾತ ಶಿಕ್ಷಣ ತಜ್ಞೆ ಡಾ, ಗೀತಾ ರಾಮಾನುಜಾಮ್ ಮಾತನಾಡಿ ಶ್ರೀಕೃಷ್ಣನ ಜೀವನ ಇಂದಿನ ಮನುಕುಲಕ್ಕೆ ಆದರ್ಶಪ್ರಾಯವಾಗಿದೆ ಎಂದರು,
ನಾಟ್ಯವು ನಮ್ಮ ಪ್ರಾಚೀನರು ನಮಗೆ ನೀಡಿದ ಅದ್ಭುತ ಕಲೆಯಾಗಿದೆ, ಅಪಾದ ಮಸ್ತಕವು ವ್ಯಾಯಾಮಕ್ಕೆ ಒಳಪಡುವ ಕಲೆ ಇದಾಗಿದ್ದು ಗುರು ಮೋನಿಷಾ ಮತ್ತು ಅವರ ಇಡೀ ಕುಟುಂಬ ಅಭಿನಂದನಾರ್ಹರು, ಇವರಿಗೆ ಮಕ್ಕಳನ್ನು ಕಳುಹಿಸಿದ ಪೋಷಕರ ಪ್ರೋತ್ಸಾಹ ಜಗಮೆಚ್ಚುವಂತದ್ದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಎನ್. ಎಸ್. ಸುಧೀಂದ್ರ ರಾವ್ ವಹಿಸಿ ನೃತ್ಯ ದಲ್ಲಿ ಪಾಲ್ಗೊಂಡ ಮಕ್ಕಳಿಗೆ ಹಾಗೂ ಅಥಿತಿಗಳಿಗೆ ಗೌರವಿಸಿ ಸನ್ಮಾನಿಸಿದರು, ನಟ್ಟುವಾoಗದಲ್ಲಿ ಗುರು ಮೋನಿಷಾ ನವೀನ್, ಗಾಯನದಲ್ಲಿ ಭಾರತಿ ವೇಣುಗೋಪಾಲ್, ಕೊಳಲಿನಲ್ಲಿ ವರುಣ್ ಭಗೀರಥ, ಮೃದಂಗದಲ್ಲಿ ಎಂ. ಕೆ. ವೇಣುಗೋಪಾಲ್, ರಿತಮ್ ಪ್ಯಾಡ್ ನಲ್ಲಿ ವೆಂಕಟೇಶ್ ಸಾಗರ್ ಅವರು ಮಕ್ಕಳ ನೃತ್ಯಾಭಿನಯಕ್ಕೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಗ್ರೇನ್ ಮೆರ್ಚೆಂಟ್ ಕೋ -ಬ್ಯಾಂಕ್ ನಿರ್ದೇಶಕರಾದ ಮಾಲಿನಿ ವಾಸುದೇವ್, ಹಿರಿಯ ಪತ್ರಕರ್ತ ಲೇಪಾಕ್ಷಿ ಸಂತೋಷ್ ರಾವ್, ದೂರದರ್ಶನ ಚಂದನ ವಾಹಿನಿಯ ಉಪ ನಿರ್ದೇಶಕ ಕೆ. ಸತೀಶ್, ಸಹಕಾರ ಇಲಾಖೆಯ ಪಿ ಆರ್ ಓ ಶಂಕರ್ ಎಸ್. ಎನ್, ನಾಟ್ಯ ಗುರು ದರ್ಶಿನಿ ಮಂಜುನಾಥ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳು ಕೀ ಬೋರ್ಡ್ ನುಡಿಸುವುದರೊಂದಿಗೆ ಆರಂಭವಾಯಿತು, ನೃತ್ಯದಲ್ಲಿ ಯೋಗವನ್ನು ಸಹ ಅಳವಡಿಸಿಕೊಳ್ಳಬಹುದು ಎಂಬುದನ್ನು ಮಕ್ಕಳು ಮಾಡಿ ತೋರಿಸಿದ್ದು ವಿಶೇಷ ವಾಗಿತ್ತು, ಕಾರ್ಯಕ್ರಮದ ನಿರೂಪಣೆಯನ್ನು ಮಂಗಳ ಬಾಲಚಂದ್ರ ಸವಿಸ್ತಾರವಾಗಿ ಮಾಡಿದರು. ಈ ಕಾರ್ಯಕ್ರಮದ ಯಶಸ್ವಿಗೆ ಹೇಮಾವತಿ ಹನುಮಯ್ಯ, ಮಾನುಷ, ಯಶಸ್ವಿನಿ, ರಮ್ಯಾಪ್ರಕಾಶ್, ವಂದನಾ, ಪ್ರಣತಿ, ಲತಾ, ಸುಮಾ, ರಾಧಾ ಹಾಗು ಭಾಗ್ಯಲಕ್ಷ್ಮಿ ಅವರು ಹಾಗು ಹಿರಿಯ ವಿದ್ಯಾರ್ಥಿಗಳು ನೇರವಾದರು.