ಗ್ರಾಮೀಣ ಕಾಲೇಜುಗಳ ಉಳಿವಿಗೆ ಸಹಕರಿಸಿ : ಡಾ.ಎಸ್.ಬಿ.ಅಪ್ಪಾಜಿಗೌಡ

varthajala
0

ಮಧುಗಿರಿ: ಎಲ್ಲ ಜನರ ಏಳಿಗೆಗಾಗಿ ಸರ್ಕಾರ ಶಾಲಾ ಕಾಲೇಜುಗಳನ್ನು ನಡೆಸುತ್ತಿದ್ದು, ಸರ್ಕಾರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಸ್ಥಳೀಯ ಭಾಗದ ದಾನಿಗಳ ಸಹಕಾರದಿಂದ ಗ್ರಾಮೀಣ ಭಾಗದ ಕಾಲೇಜುಗಳಿಗೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಿರುವುದು ಹಾಗೂ ಅವುಗಳ ಉಳಿವಿಗೆ ಸಹಕರಿಸಿದ ದಾನಿಗಳ ನೆರವಿನಿಂದ ಸರ್ಕಾರಿ ಕಾಲೇಜುಗಳು ಮತ್ತಷ್ಟು ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಲಿದೆ ಎಂದು ಕಾಲೇಜು ಶಿಕ್ಷಣ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ.ಎಸ್.ಬಿ.ಅಪ್ಪಾಜಿಗೌಡ ಕರೆ ನೀಡಿದರು. 

ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ದಾನಿಗಳಿಂದ ಪುಸ್ತಕ ಕೊಡುಗೆ ಹಾಗೂ ದಾನಿಗಳಿಗೆ ಏರ್ಪಡಿಸಿದ್ದ ಪುರಸ್ಕಾರ ಕಾರ್ಯಕ್ರಮದಲ್ಲಿ ಆನ್ಲೈನ್ ಗೂಗಲ್ ಮೀಟ್‍ನಲ್ಲಿ ಭಾಗವಹಿಸಿ ಮಾತನಾಡುತ್ತಾ ಸರ್ಕಾರದ ನೆರವಿಗೆ ಕಾಯದೇ ದಾನಿಗಳ ನೆರವಿನಿಂದ ಕಾಲೇಜು ಕಟ್ಟುವ ಕೆಲಸ ಸ್ವಾಗತಾರ್ಹ. ಕಾಲೇಜಿಗೆ ಅಗತ್ಯವಾದ ಎರಡು ಕಬ್ಬಿಣದ ಸುರಕ್ಷತಾ ಬಾಗಿಲುಗಳನ್ನು ಮಾಡಿಸಿಕೊಟ್ಟ ಹೊಸಕೆರೆ ರಂಗಪ್ಪ ಮತ್ತು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಪ್ರಶಾಂತ್ ಮತ್ತು ರವಿಕಿರಣ್ ರವರನ್ನು ಅಭಿನಂದಿಸಿ, ಎಲ್ಲ ದಾನಗಳಿಗಿಂತ ವಿದ್ಯಾದಾನ ಸರ್ವಶ್ರೇಷ್ಟ, ಸರ್ಕಾರಿ ಕಾಲೇಜುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕವಾಗಿ ಹಿಂದುಳಿದವರು ಬರುತ್ತಿದ್ದು ಸರ್ಕಾರ ಇಂದು ಲ್ಯಾಪ್‍ಟಾಪ್, ಟ್ಯಾಬ್ಲೆಟ್ ಪಿ.ಸಿ., ವಿವಿಧ ವಿದ್ಯಾರ್ಥಿ ವೇತನಗಳನ್ನು ನೀಡಿ, ಎಲ್ಲ ವರ್ಗಗಳನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದೆ. ಆದುದರಿಂದ ಎಲ್ಲರೂ ಉನ್ನತ ಶಿಕ್ಷಣ ಪಡೆದು ಸತ್ಪ್ರಜೆಗಳಾಗಿ ಎಂದು ಕರೆ ನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿಗೆ ಎರಡು ಕಬ್ಬಿಣದ ಸುರಕ್ಷತಾ ಬಾಗಿಲುಗಳನ್ನು ದಾನ ನೀಡಿದ ಹೊಸಕೆರೆ ರಂಗಪ್ಪ ಮಾತನಾಡಿ ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ, ಬಾಲ್ಯಾವಸ್ಥೆಯಿಂದ ಶಿಸ್ತಿನ ಜೀವನ ಪಾಲಿಸಿಕೊಂಡು ವಿದ್ಯೆಯನ್ನು ಕಲಿಯಬೇಕು. ಕಲಿತ ವಿದ್ಯೆಯಿಂದ ಎಂತಹ ಕಷ್ಟ ಬಂದರೂ ಜಯಶಾಲಿಯಾಗಲು ಸಾಧ್ಯ. ಬೇಡುವ ನಾಲಗೆಯಲ್ಲಿ ನಿಯತ್ತಿದ್ದರೆ ಕೊಡುವ ದಾನಿಗಳಿಗೇನೂ ಕೊರತೆಯಿಲ್ಲ. ಕೊಟ್ಟ ದಾನ ಪ್ರಯೋಜನವಾದರೆ ಮತ್ತಷ್ಟು ದಾನ ನೀಡಲು ಪ್ರೇರಣೆ ದೊರೆಯುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗಾಗಿ ನೆರವು ನೀಡಲು ಸದಾ ಸಿದ್ದ, ಕಾಲೇಜಿನಲ್ಲಿ ಗ್ರಾಮೀಣ ಕಲೆಗಳ ಅನಾವರಣಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಿದರೆ ಅಗತ್ಯ ನೆರವು ನೀಡುವ ಭರವಸೆ ನೀಡಿದರು. 

ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡುಗೆ ನೀಡಿದ ನಿವೃತ್ತ ಪ್ರಾಂಶುಪಾಲರಾದ ಎಂ.ಎಸ್.ತಮ್ಮಯ್ಯ ನವರ ಮಕ್ಕಳಾದ ಟಿ.ಪ್ರಶಾಂತ್ ಮಾತನಾಡಿ ತಮ್ಮ ತಂದೆಯವರಾದ ದಿವಗಂತ ಎಂ.ಎಸ್.ತಮ್ಮಯ್ಯ ರವರು ಮಿಡಿಗೇಶಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿ ರ್ಕಾರ್ಯನಿರ್ವಹಸಿದ್ದು, ಕಾಲೇಜಿನ ಅಭಿವೃದ್ದಿಗೆ ಶ್ರಮಿಸಿದ್ದರು. ಅವರ ನೆನಪಿನಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗಾಗಿ ಅಗತ್ಯ ಪಠ್ಯಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಿರುವುದಾಗಿ ತಿಳಿಸಿದರು. ತಮ್ಮ ತಂದೆಯವರು ರಚಿಸಿದ ಆಂಗ್ಲಭಾಷಾ ವ್ಯಾಕರಣದ ಪುಸ್ತಕಗಳನ್ನು ಉಚಿತವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡುವುದಾಗಿ ಶ್ರೀಮತಿ ಸುಗುಣ ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ ಉನ್ನತ ಶಿಕ್ಷಣದ ಹೆಬ್ಬಾಗಿಲಾದ ಪದವಿ ಕಾಲೇಜುಗಳನ್ನು ಸರ್ಕಾರ ಗ್ರಾಮೀಣಭಾಗದಲ್ಲಿ ಸ್ಥಾಪಿಸಿ ಎಲ್ಲವರ್ಗದವರಿಗೆ ಶಿಕ್ಷಣ ನೀಡಲು ನೆರವಾಗುತ್ತಿದೆ. ಮಿಡಿಗೇಶಿ ಕಾಲೇಜಿಗೆ ಎರಡು ಎಕರೆ ಜಮೀನನ್ನು ಶ್ರೀ ಮೈಲಾರಪ್ಪ ದಾನ ನೀಡಿದ್ದು, ಜನಪ್ರತಿನಿಧಿಗಳ ಸಹಕಾರದಿಂದ ಕಟ್ಟಡ ನಿರ್ಮಾಣವಾಗಿ ತರಗತಿಗಳು ನಡೆಯುತ್ತಿವೆ. ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ಸವಲತ್ತುಗಳನ್ನು ಪಡೆದು ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನ ಸಾರ್ಥಕಗೊಳಿಸಿಕೊಂಡು ಪ್ರಜ್ವಲಿಸುವ ವ್ಯಕ್ತಿತ್ವ ಮೈಗೂಡಿಸಿಕೊಳ್ಳ್ಳಬೇಕು. ಸರ್ಕಾರದ ನೆರವು ಮತ್ತು ದಾನಿಗಳ ಸಹಕಾರದಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಉತ್ತಮ ಫಲಿತಾಂಶದಿಂದ ಕಾಲೇಜು ಶೈಕ್ಷಣಿಕ ರಂಗದಲ್ಲಿ ಮಂಚೂಣಿಯಲ್ಲಿದೆ ಎಂದರು. ಕಾಲೇಜಿಗೆ ಅವಶ್ಯವಾದ ನೆರವನ್ನು ನೀಡಿದ ಎಲ್ಲರನ್ನೂ ಸ್ಮರಿಸಲಾಯಿತು. 

ಇದೇ ಸಂಧರ್ಭದಲ್ಲಿ ಕಾಲೇಜಿಗೆ ಎರಡು ಕಬ್ಬಿಣದ ಸುರಕ್ಷತಾ ಬಾಗಿಲುಗಳು ಮಾಡಿಸಿಕೊಟ್ಟ ಹೊಸಕೆರೆ ರಂಗಪ್ಪ ಮತ್ತು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ನಿವೃತ್ತ ಪ್ರಾಂಶುಪಾಲರಾದ ಎಂ.ಎಸ್.ತಮ್ಮಯ್ಯನವರ ಮಕ್ಕಳಾದ ಟಿ.ಪ್ರಶಾಂತ್ ಮತ್ತು ಟಿ.ಸುಗುಣ ರವರನ್ನು ಸನ್ಮಾನಿಸಲಾಯಿತು.  ಮುಖಂಡರಾದ ಸಿದ್ದೇಶ್. ಸಹಾಯಕ ಪ್ರಾಧ್ಯಾಪಕರಾದ ಎಸ್.ಎಂ.ಸತೀಶ್ ಮುನಿರಾಜ  ಮುನೀಂದ್ರಕುಮಾರ್, ಸತೀಶ್ ಕುಮಾರ್, ಪವಿತ್ರ,ಪ್ರಿಯಭಾಷಿಣಿ, ಸಿಂಧು, ಮಹವiದರಹಮತುಲ್ಲಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಧನಂಜಯ ದೇವರಾಜನಾಯಕ್ ವಂದಿಸಿದರು.

Post a Comment

0Comments

Post a Comment (0)