ಎಮ್ ಬಿ ಎಸ್ ಎಲ್ ಪ್ರೌಢಶಾಲೆಯಲ್ಲಿ ವ್ಯಕ್ತಿತ್ವ ವಿಕಾಸನ ಕಾರ್ಯಾಗಾರ

varthajala
0

ಬಳ್ಳಾರಿ ಜ 04.ಬಳ್ಳಾರಿಯ ಗಾಂಧಿನಗರದ ಎಮ್ ಬಿ ಎಸ್ ಎಲ್ ಪ್ರೌಢಶಾಲೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹುಸೇನ್ ಸಾಬ್ ಅವರಿಂದ 8, 9 ಮತ್ತು 10ನೇತರಗತಿಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸನ ಮತ್ತು ರಸ್ತೆ ಸಂಚಾರ ನಿಯಮಗಳ ಪಾಲನೆ ಬಗ್ಗೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಅವರು ವಹಿಸಿದ್ದರು.ಶಾಲಾ ಮಕ್ಳು ಮುಖ್ಯವಾಗಿ, ಗುರಿ ಮತ್ತು ನಿರ್ಣಯಗಳನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಳ್ಳುವುದು. ಮತ್ತು ಭಯ, ಭಕ್ತಿಯನ್ನ ಮೈಗೂಡಿಸಿಕೊಳ್ಳಬೇಕು ಹಾಗೂ ಮುಖ್ಯವಾಗಿ, ಆಕರ್ಷಣೆ  ಆವೇಷ, ಆತಂಕಗಳಿಗೆ ಒಳಗಾಗಬಾರದು. ಇವುಗಳನ್ನ ವಿದ್ಯಾರ್ಥಿ ದಿಸೆಯಲ್ಲಿ ಮೈಗೂಡಿಸಿಗೊಂಡರೆ. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಮಕ್ಕಳಿಗೆ ಉತ್ತೇಜಿಸಿದ ನಿವೃತ್ತ ಸಂಚಾರಿ ಪೊಲೀಸ್ ಅಧಿಕಾರಿ ಹುಸೇನ್ ಭಾಷಾ, ಶಾಲಾ ಮಕ್ಕಳಿಗೆ ಸಂಚಾರಿ ನಿಯಮಗಳು ಮತ್ತು ವಾಹನ ಚಾಲನೆಗೆ ಬೇಕಾದ ವಯಸ್ಸು ಮತ್ತು ಹೆಲ್ಮೆಟ್ ಧರಿಸುವುದರಿಂದ ಆಗುವ ಅನುಕೂಲ ಮತ್ತು ರಕ್ಷಣೆ ಹಾಗೂ. ಧಂಡಗಳ ಬಗ್ಗೆ ವಿವರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ, ಎಮ್ ಬಿ ಎಸ್ ಎಲ್ ಪ್ರೌಢಶಾಲೆಯ ಶಿಕ್ಷಕರು, ಶಿಕ್ಷಕಿಯರು ಹಾಗು ಶಾಲಾ ಸಿಬ್ಬಂದಿ ಮತ್ತು ಶಾಲೆಯ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.


Tags

Post a Comment

0Comments

Post a Comment (0)