ಶಾಲಾ ಮಕ್ಕಳಿಗೆ ಸಸ್ಯಾಹಾರಿ ಪದಾರ್ಥ ನೀಡಲು ಆಗ್ರಹ

varthajala
0

ಶಾಲಾ ಮಕ್ಕಳಿಗೆ ಸಸ್ಯಾಹಾರಿ ಪದಾರ್ಥ ನೀಡಲು ಆಗ್ರಹ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.10 ರಂದು ಡಿಸಿ ಕಚೇರಿ ಬಳಿ ಧರಣಿ: ದಯಾನಂದ ಸ್ವಾಮೀಜಿ

ಬಳ್ಳಾರಿ ಜ 04: ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹಾಗು ಅಂಗನವಾಡಿ ಮಕ್ಕಳಿಗೆ ಮೊಟ್ಟೆ ತಿನ್ನಿಸುವುದರ ಬದಲಾಗಿ ಮೊಟ್ಟೆಗಿಂತಲೂ ಹೆಚ್ಚು ಪೌಷ್ಟಿಕಾಂಶಗಳುಳ್ಳ ಸರ್ವ ಸಮ್ಮತ ಸತ್ವಯುತ ಸ್ವಾಧಿಷ್ಠ ಏಕರೂಪದ ಆರೋಗ್ಯದಾಯಕವಾದ ಶುದ್ಧ ಸಸ್ಯಾಹಾರಿ ಪದಾರ್ಥ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟದಿಂದ ಜ.10 ರಂದು ಬೆಳ್ಳಿಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ಸತ್ಯಾಗ್ರಹ, ಧ್ಯಾನ ಮತ್ತು ಸಾರ್ವಜನಿಕ ಸಭೆ ನಡೆಸಲಾಗುವುದು ಎಂದು ಒಕ್ಕೂಟದ ಪ್ರಧಾನ ಸಂಚಾಲಕ ದಯಾನಂದ ಸ್ವಾಮೀಜಿ ಹೇಳಿದರು. 

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನ ದೇಗುಲಗಳೂ, ಪವಿತ್ರ ವಿದ್ಯಾಮಂದಿರಗಳೂ ಆದ ಸರಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಿಸುವುದನ್ನು ತಕ್ಷಣ ನಿಲ್ಲಿಸಬೇಕು. ಶಾಲೆ ಮತ್ತು ಅಂಗನವಾಡಿಗಳಲ್ಲಿ ಪಾವಿತ್ರತೆಯನ್ನು ದಿವ್ಯತೆಯನ್ನು ಕಾಯ್ದುಕೊಳ್ಳಬೇಕು. ಮೊಟ್ಟೆಗೆ ಬದಲಾಗಿ ಮೊಟ್ಟೆಗಿಂತಲೂ ಅಧಿಕ ಪೌಷ್ಟಿಕಾಂಶಗಳುಳ್ಳ ಆರೋಗ್ಯದಾಯಕವಾದ ಶುದ್ದ ಸಸ್ಯಾಹಾರಿ ಪದಾರ್ಥವನ್ನು ನೀಡಬೇಕು. ಇಲ್ಲವೆ ಸಸ್ಯಾಹಾರಿಗಳಿಗಾಗಿ ಪ್ರತ್ಯೇಕ ಸಸ್ಯಾಹಾರಿ ಶಾಲೆಗಳನ್ನು ಮತ್ತು ಅಂಗನವಾಡಿಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.ಸಸ್ಯಾಹಾರಿ ಪದಾರ್ಥಗಳನ್ನು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಮಕ್ಕಳಿಗಷ್ಟೇ ಅಲ್ಲದೆ ಕರ್ನಾಟಕದ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೂ ಮತ್ತು ಅಂಗನವಾಡಿ ಮಕ್ಕಳಿಗೂ ಕೊಡಬೇಕು. ರಾಜ್ಯದ ಹಾಗು ದೇಶದ ನುರಿತ ಹಿರಿಯ ಆರೋಗ್ಯ ಮತ್ತು ಆಹಾರ ತಜ್ಞರೊಡನೆ ಸುದೀರ್ಘವಾಗಿ ಸಮಾಲೋಚನೆ ಮಾಡಿ ಸಸ್ಯಾಹಾರಿ ಮತ್ತು ಮಾಂಸಹಾರಿ ಮಕ್ಕಳೆಲ್ಲರಿಗೂ ಏಕರೂಪದ ಶುದ್ದ ಸಸ್ಯಾಹಾರಿ ಪದಾರ್ಥವನ್ನೇ ನಿಗದಿಪಡಿಸಿ ವಿತರಿಸಬೇಕು. ಇದರಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಆಸ್ಪದೆ ಇಲ್ಲದಂತೆ ಸರಕಾರ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತ ಸಮೂಹ ಬೆಳೆಯುವ ಬೆಲ್ಲ, ಶೇಂಗಾಬೀಜ ರೀತಿಯ ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು, ಹಣ್ಣು-ಹಾಲು ಇತ್ಯಾದಿಗಳನ್ನು ರೈತರಿಂದಲೇ ನೇರವಾಗಿ ಖರೀದಿಸಿ ಮಕ್ಕಳಿಗೆ ಕೊಡುವುದರಿಂದ ಲಕ್ಷಾಂತರ ರೈತರ ಬವಣೆ ಸ್ವಲ್ಪ ಮಟ್ಟಿಗಾದರೂ ನಿವಾರಣೆಯಾಗಲಿದೆ. ಶಾಲೆಗಳಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ, ಉತ್ತಮ ಗುಣಮಟ್ಟದ ಪರಿಣಾಮಕಾರಿ ಶಿಕ್ಷಣ ದೊರಕುವಂತಾಗಬೇಕು. ಅದಕ್ಕೆ ಬೇಕಾಗಿರುವ ಕೊಠಡಿ, ಉಪಕರಣಗಳು, ಪ್ರಯೋಗಾಲಯ, ಶಿಕ್ಷಕರು ಮುಂತಾದ ಮೂಲಭೂತ ಅವರ್ಶಯಕತೆಗಳನ್ನು ಪೂರೈಸಬೇಕು. ಮಕ್ಕಳಿಗೆ ಶಾರೀರಿಕ ಪೌಷ್ಟಿಕತೆಯ ಜೊತೆಗೆ ಮಾನಸಿಕ, ನೈತಿಕ ಆಧ್ಯಾತ್ಮಿಕ ಪ್ರಬುದ್ಧತೆಯ ಉತ್ತಮ ಸಂಸ್ಕಾರ ದೊರಕುವಂತಾಗಬೇಕು. ಅದರ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸರಕಾರ ಎಲ್ಲ ರೀತಿಯ ಕ್ರಮಕೈಗೊಳ್ಳಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು. 

ಈ ಬೇಡಿಕೆಗೆ ಆಗ್ರಹಿಸಿ ಜ.10 ರಂದು ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯುವ ಧರಣಿಯಲ್ಲಿ ಲಿಂಗಾಯತ ಧರ್ಮ, ಜೈನ ಧರ್ಮ, ಬ್ರಾಹ್ಮಣ ಸಮುದಾಯ, ಪಿರಮಿಡ್ ಸ್ಪಿರುಚುಯಲ್ ಸುಸೈಟಿ ಮೂಮೆಂಟ್ ಆಫ್ ಇಂಡಿಯಾ, ರಾಷ್ಟಿçÃಯ ಬಸವ ದಳ, ಪತಂಜಲಿಯೋಗ ಟ್ರಸ್ಟ್ ಮುಂತಾದ ಸಸ್ಯಾಹಾರಿ ಧರ್ಮಗಳ ಸಮುದಾಯ ಸೇರಿದಂತೆ ಮತ್ತಿತರೆ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು, ಈ ಬೇಡಿಕೆ ಈಡೇರಿಕೆಗೆ ಜ.24 ಗಡುವು ನೀಡಲಾಗಿದ್ದು, ಅಷ್ಟರೊಗಳ ಬೇಡಿಕೆ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತ ಎಂದು ಎಚ್ಚರಿಕೆ ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷ ಕೆ. ಬಸವನಗೌಡ, ಜೈನ ಸಮಾಜದ ಸಂಕಲ್‌ಚAದ್ ಬಾಗ್ರೇಚ, ಪಿರಮಿಡ್ ಸೇವಾದಳ ಅಧ್ಯಕ್ಷ ಹಂಪಣ್ಣ, ರಾಷ್ಟಿçÃಯ ಬಸವದಳದ ಶಾರದಮ್ಮ, ಪಿರಮಿಡ್ ಮಾಸ್ಟರ್ ಗೀತಾಯಾದವ್, ವೈ. ಅರುಣಾಚಲಂ, ರವಿಶಂಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು. 

VARTHAJALA NEWSROOM, MALLESWARA, BENGALURU 9481309247
Tags

Post a Comment

0Comments

Post a Comment (0)