BREAKING NEWS : ಕೊರೋನ ಮುನ್ನೆಚ್ಚರಿಕೆ : ಬಿ ಎಂ ಟಿ ಸಿ ಸಾರಿಗೆ ಸೇವೆಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ನಿರ್ಬಂಧ

varthajala
0

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ ಬಿಬಿಎಂಪಿ ಪ್ರದೇಶ ಹಾಗು ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೋನ ವೈರಾಣು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗು ಹತೋಟಿಗೆ ತರಲು ವಾರಂತ್ಯ ಕರ್ಫ್ಯು ಜಾರಿಗೊಳಿಸಿದ ಹಿನ್ನೆಲೆ ಶನಿವಾರ ಹಾಗು ಭಾನುವಾರ (8/9 ಜನವರಿ ಹಾಗು 15/16 ಜನವರಿ). ಬಿ ಎಂ ಟಿ ಸಿ ಸಂಸ್ಥೆಯ ಸಾರಿಗೆ ಸೇವೆಗಳಲ್ಲಿ ಸಾರ್ವಜನಿಕ ಪ್ರಯಾಣಿಕರನ್ನು ನಿರ್ಬಂಧಿಸಲಾಗಿದೆ. ರಾಜ್ಯ ಸರಕಾರದ ಮಾರ್ಗಸೂಚಿಯಂತೆ, ಬೆಂ ಮ ಸಾ ಸಂಸ್ಥೆಯು ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸಾರಿಗೆಗಳನ್ನು ಕೆಳಕಂಡ0ತೆ ಒದಗಿಸಲಾಗುತ್ತಿದೆ.


ಸಾರಿಗೆ ಸೇವೆಗಳ ಲಭ್ಯತೆ: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಂಟೈನ್ಮ0ಟ್ ವಲಯಗಳನ್ನು ಹೊರತುಪಡಿಸಿ, ಶೇ.10 ರಷ್ಟು ಅಗತ್ಯ ಸಾರಿಗೆಗಳನ್ನು ಕಾರ್ಯಾಚರಿಸಲಾಗುವುದು.

ಕಾರ್ಯಾಚರಣೆ ವೇಳೆ: ಅಗತ್ಯ ಸಾರಿಗೆ ಸೇವೆಗಳನ್ನು ಬೆಳಗ್ಗೆ 6-00 ರಿಂದ 22:00 ಘಂಟೆವರೆಗೂ ಕಾರ್ಯಾಚರಿಸಲಾಗುವುದು.

ಅನುಮತಿಸುವ ಪ್ರಯಾಣಿಕರು :


ಅ) ಕೇಂದ್ರ/ರಾಜ್ಯ ಸರಕಾರ/ ಅರೆ ಸರಕಾರದ ಎಲ್ಲಾ ಇಲಾಖೆಗಳ ಅಧಿಕಾರಿ/ನೌಕರರು, ಸಾರ್ವಜನಿಕ ಉದ್ದಿಮೆ/ನಿಗಮ/ಮಂಡಳಿ ಹಾಗು ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ/ನೌಕರರು.

ಆ) ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿ.

ಇ) ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳು/ನೌಕರರು, ಪ್ರಯೋಗಾಲಯ ನೌಕರರು, ಡಯಾಗ್ನಾಸ್ಟಿಕ್ ಕೇಂದ್ರಗಳಲ್ಲಿನ ವೈದ್ಯರು, ನರ್ಸ್, ಪಾರಾಮೆಡಿಕಲ್, ಆಶಾ ಕಾರ್ಯಕರ್ತರು, ವೈದ್ಯಕೀಯ ತಂತ್ರಜ್ಞರು ಇತ್ಯಾದಿ.

ಈ) ವ್ಯೆದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆ ಹಾಗು ಪ್ರಯೋಗಾಲಯಗಳಿಗೆ ಪ್ರಯಾಣಿಸುವ ರೋಗಿಗಳು ಹಾಗು ಅವರ ಸಹಾಯಕರು.

ಉ) ಸರಕಾರಿ ಮತ್ತು ಖಾಸಗಿ ಬ್ಯಾಂಕ್ ಮತ್ತು ವಿಮಾ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು.

ಊ) ಪತ್ರಕರ್ತರು (ಮುದ್ರಣ ಮತ್ತು ವಿದ್ಯುನ್ಮಾನ ಮೀಡಿಯಾ)

ಋ) ರೈಲು/ವಿಮಾನಯಾನ ಪ್ರಯಾಣಿಕರು, ರೈಲು/ವಿಮಾನ ಟಕೇಟ್ ಮತ್ತು ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಲು ಅನುಮತಿಸಲಾಗಿದೆ.

ಎ) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರದೊಂದಿಗೆ ಅನುಮತಿಸಲಾಗಿದೆ.

ಏ) ಸರಕಾರದ ಆದೇಶದನ್ವಯ ಅನುಮತಿಸಲಾದ ಕೈಗಾರಿಕೆ ಮತ್ತು ಇತರೆ ವಲಯಗಳ ಸಿಬ್ಬಂದಿಗಳು.

ಐ) ಪ್ರಯಾಣಿಕರು ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

ಒ) ಸಾರ್ವಜನಿಕ ಪ್ರಯಾಣಿಕರಿಗೆ ಅವಕಾಶವಿರುವುದಿಲ್ಲ.


ಚಾಲನಾ ಸಿಬ್ಬಂದಿ ಹೊಣೆಗಾರಿಕೆ:

ಅ) ಕರ್ತವ್ಯ ನಿರ್ವಹಿಸುವಾಗ ಚಾಲನಾ ಸಿಬ್ಬಂದಿ ಮುಖಗವಸನ್ನು ಧರಿಸತಕ್ಕದ್ದು, ಸಾನಿಟೈಸರ್ ಬಳಸಿ ಶುಚಿತ್ವ ಕಾಪಾಡವುದು.

ಆ) ಪ್ರಯಾಣಿಕರನ್ನು ಬಸ್ಸಿನಲ್ಲಿ ಆಸನಗಳು ಖಾಲಿಯಿದ್ದಾಗ ಮಾತ್ರ ಪ್ರಯಾಣಿಸಲು ಅನುಮತಿಸುವುದು.

ಇ) ನಿಗದಿತ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಹತ್ತಿಸುವುದು/ಇಳಿಸುವುದು.

ಈ) ಎಲ್ಲಾ ಪ್ರಯಾಣಿಕರ ಗುರುತಿನ ಚೀಟಿಯನ್ನು ಪರಿಶೀಲಿಸುವುದು.


ಸಾರ್ವಜನಿಕ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಕ್ರಮಗಳು.

1) ಪ್ರಯಾಣಿಕರು ಮೂಗು, ಬಾಯಿ ಮುಚ್ಚಿಕೊಳ್ಳುವಂತೆ ಬಟ್ಟೆ ಅಥವ ಮುಖಗವಸು ಕಡ್ಡಾಯವಾಗಿ ಧರಿಸುವುದು.

2) ಮುಖಗವಸು ಧರಿಸದ ಪ್ರಯಾಣಿಕರನ್ನು ಬಸ್ಸಿನಲ್ಲಿ ಪ್ರಯಾಣಿಸಲು ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು.

3) ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಸ್ಸನ್ನು ಹತ್ತುವುದು ಮತ್ತು ಇಳಿಯುವುದು.

4) ಪ್ರಯಾಣಿಕರ ಆಸನಗಳು ಭರ್ತಿಯಾಗಿದ್ದಲ್ಲಿ, ಬಸ್ಸನ್ನು ಹತ್ತಬಾರದು, ಮುಂದಿನ ಬಸ್ಸಿಗಾಗಿ ಕಾಯುವುದು.

5) ಜ್ವರ ಹಾಗು ಇತರೆ ಖಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಬಾರದು ಎಂದು ಬೆಂಗಳೂರು ನಗರ ಸಾರಿಗೆ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ..


ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಶುಕ್ರವಾರ ರಾತ್ರಿ 10 ಗಂಟೆಯಿ0ದ ವಾರಾಂತ್ಯ ಕರ್ಫ್ಯೂ ಸಹ ಜಾರಿಗೆ ಬರುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ಬಸ್ ಸಂಚಾರದ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ. 5/1/2022ರ ರಾತ್ರಿ 10 ಗಂಟೆಯಿ0ದ 19/1/2022ರ ಮುಂಜಾನೆ 5 ಗಂಟೆಯ ತನಕ ವಾರಾಂತ್ಯ ಕರ್ಫ್ಯೂ ಆದೇಶ ಜಾರಿಯಲ್ಲಿರುತ್ತದೆ.


ಕೋವಿಡ್; ವಿಧಾನಸೌಧ ಉದ್ಯೋಗಿಗಳಿಗೆ ಮಾರ್ಗಸೂಚಿ

ಶುಕ್ರವಾರ ರಾತ್ರಿ 10 ಗಂಟೆಯಿ0ದ ಸೋಮವಾರ ಬೆಳಗ್ಗೆ 5 ಗಂಟೆ ತನಕ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದ ಕುರಿತು ಮಾರ್ಗಸೂಚಿಯಲ್ಲಿ ಮಾಹಿತಿ ನೀಡಲಾಗಿದೆ.

ಹೋಮ್ ಐಸೋಲೇಷನ್ ಮಾರ್ಗಸೂಚಿ:

ವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ವಾಣಿಜ್ಯ ವಹಿವಾಟು ಬಹುತೇಕ ಬಂದ್ ಆಗುತ್ತದೆ. ಪ್ರಯಾಣಿಕರು/ ವಿದ್ಯಾರ್ಥಿಗಳ ಸಂಚಾರ ಕಡಿಮೆ ಇರುತ್ತದೆ. ಆದ್ದರಿಂದ ಈ ಕೆಳಕಂಡ ಮಾರ್ಗಸೂಚಿ ಅನ್ವಯ ಬಸ್ ಸಂಚಾರ ಇರುತ್ತದೆ.

ರಾಜ್ಯದಲ್ಲಿ ಹೊಸ ಕೋವಿಡ್ ಮಾರ್ಗಸೂಚಿ: ಸಣ್ಣ ಕೈಗಾರಿಕೆಗಳ ಕಥೆಯೇನು?

* ವಾರಾಂತ್ಯ ಕರ್ಫ್ಯೂ ದಿನಗಳಂದು ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಬಸ್‌ಗಳ ಸಂಚಾರವನ್ನು ನಡೆಸಬೇಕು.

* ಸಾಧ್ಯವಾದಷ್ಟು ಮಟ್ಟಿಗೆ ರಾತ್ರಿ ಸಾರಿಗೆ ಸೇವೆಗಳ ಬುಕ್ಕಿಂಗ್ ಆನ್‌ಲೈನ್ ಮೂಲಕವೇ ಮಾಡಿಸಬೇಕು. ರಾತ್ರಿ ಸಾರಿಗೆ ಬುಕಿಂಗ್ ಪರಿಶೀಲನೆ ಮಾಡಿ ಅಗತ್ಯವಿದ್ದಲ್ಲಿ ಮಾತ್ರ ಬಸ್ ಓಡಿಸಬೇಕು.

* ಕೇರಳ, ಮಹಾರಾಷ್ಟç, ಗೋವಾ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರು ಕೋವಿಡ್ 19 ಲಸಿಕೆ ಪಡೆಯದಿದ್ದರೂ/ ಪಡೆದಿದ್ದರೂ ಸಹ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯವಾಗಿದೆ.

* ಪ್ರಯಾಣಿಕರ ಕೋವಿಡ್ ಪ್ರಮಾಣ ಪತ್ರ, ಆರ್‌ಟಿಪಿಸಿಆರ್ ಪರೀಕ್ಷೆ ವರದಿಯನ್ನು ಪರಿಶೀಲಿಸುವಂತೆ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳುವಳಿಕೆ ನೀಡುವುದು.

* ಚಾಲನಾ ಸಿಬ್ಬಂದಿಗಳು, ಪ್ರಯಾಣಿಕರು ಕಡ್ಡಾಯಾಗಿ ಮಾಸ್ಕ್ ಧರಿಸುವುದು ಹಾಗೂ ಕೋವಿಡ್ 19 ಸೋಂಕು ಹರಡದಂತೆ ತಡೆಗಟ್ಟುವ ನಿಬಂಧನೆಗಳು/ ಮಾರ್ಗಸೂಚಿಗಳನ್ನು ಪಾಲಿಸುವುದು.

ನಮ್ಮ ಮೆಟ್ರೋ ಸಂಚಾರ ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ನಮ್ಮ ಮೆಟ್ರೋ ಸಂಚಾರವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ.

ಬಿಎಂಆರ್‌ಸಿಎಲ್ ರೈಲು ಸಂಚಾರದ ಅವಧಿಯನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 8 ರಿಂದ ರಾತ್ರಿ 9ರ ತನಕ ಮಾತ್ರ ಮೆಟ್ರೋ ರೈಲು ಸಂಚಾರ ನಡೆಸಲಿವೆ. ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ.

ವಾರಾ0ತ್ಯ ಕರ್ಫ್ಯೂ ಅವಧಿಯಲ್ಲಿ ಟರ್ಮಿನಲ್‌ನಿಂದ ಪ್ರತಿ 20 ನಿಮಿಷಕ್ಕೆ ಒಂದು ರೈಲು ಹೊರಡಲಿದೆ. ಟರ್ಮಿನಲ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 9 ಗಂಟೆಗೆ ಹೊರಡಲಿದೆ.

ಕಠಿಣ ನಿಯಮಗಳು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಜ್ಞರ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ರಾಜ್ಯದಲ್ಲಿ ಕೋವಿಡ್ ಹರಡುವಿಕೆ ತಡೆಯಲು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಡಿಸೆಂಬರ್ 28ರಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ನೈಟ್ ಕರ್ಫ್ಯೂ ವಿಸ್ತರಣೆ, ವಾರಾಂತ್ಯದ ಕರ್ಫ್ಯೂ ಜಾರಿ, ಬೆಂಗಳೂರಿನಲ್ಲಿ ಶಾಲೆಗಳ ಭೌತಿಕ ತರಗತಿ ಬಂದ್, ಚಿತ್ರಮಂದಿರದಲ್ಲಿ ಶೇ 50ರಷ್ಟು ಸೀಟು ಭರ್ತಿ ಸೇರಿದಂತೆ ಹಲವಾರು ನಿಯಮಗಳನ್ನು ಘೋಷಣೆ ಮಾಡಲಾಗಿದೆ.

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತದಲೇ ಇದೆ. ಬುಧವಾರದ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ 4246 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 17,414 ಆಗಿದೆ.

ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಬುಧವಾರ ನಗರದಲ್ಲಿ  ಮಧ್ಯಾಹ್ನದ ವೇಳೆಗೆ 3605 ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 14762.

Post a Comment

0Comments

Post a Comment (0)