ನಾಗರೀಕ ಸೇವಾ ಪರೀಕ್ಷೆಗಳ ಸಿದ್ದತೆ ಕುರಿತು ನೇರ ಪ್ರಸಾರದ ವೆಬಿನಾರ್‌ ಕಾರ್ಯಾಗಾರ \

varthajala
0
ದಿನಾಂಕ: 27.01.2022 ರಂದು ಬೆಂಗಳೂರಿನಲ್ಲಿರುವ ಭಾರತೀಯ ಸಾಮಾಜಿಕ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯಿಂದ ನಾಗರೀಕ ಸೇವಾ ಪರೀಕ್ಷೆಗಳ ಸಿದ್ದತೆ ಕುರಿತು ನೇರ ಪ್ರಸಾರದ ವೆಬಿನಾರ್‌ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಹಿರಿಯ ಅಧಿಕಾರಿಗಳಾದ  ಮೊಹಮದ್‌ ಮೊಹಸಿನ್, ಭಾ.ಆ.ಸೇ, ರಾಜ್ಯ ಆಯುಕ್ತರು ಹಾಗೂ ಸರ್ಕಾರದ ಪದನಿಮಿತ್ತ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ (ಪುನರ್‌ ನಿರ್ಮಾಣ ಹಾಗು ಪುನರ್ ವಸತಿ) ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಪ್ರತಿಯೊಬ್ಬರು ತಮ್ಮಲ್ಲಿ ಇಚ್ಚಾಶಕ್ತಿಯನ್ನು ಹೊಂದಿದ್ದು ಸತತ ಪರಿಶ್ರಮ, ಸತತ ಅಧ್ಯಯನ ಹಾಗೂ ಆತ್ಮ ವಿಶ್ವಾಸದಿಂದ ನಾಗರೀಕ ಸೇವಾ ಪರೀಕ್ಷೆಯಲ್ಲಿ ಖಚಿತ ಯಶಸ್ಸನ್ನು ಸಾಧಿಸಬಹುದು. ಸಮಾಜಸೇವೆಯಲ್ಲಿ ಉತ್ತಮ ಅಧಿಕಾರಿಯ ಪಾತ್ರ ಬಹುಮುಖ್ಯವಾಗಿದ್ದು, ದೀನ-ದಲಿತರು, ದುರ್ಬಲರಿಗೆ ಹಾಗೂ ಹಿಂದುಳಿದವರ ಅಭ್ಯುದಯಕ್ಕೆ ನಾಗರೀಕ ಸೇವಾ ಅಧಿಕಾರಿಯು ಸಂವಿಧಾನಾತ್ಮಕ ಮಾರ್ಗದಲ್ಲಿ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದರು. ಈ ನಿಟ್ಟಿಯಲ್ಲಿ ಇಂದಿನ ಯುವ ಜನಾಂಗವು ನಾಗರೀಕ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಲು ತಮ್ಮನ್ನು ಸಾರ್ವಜನಿಕ ಸೇವೆಗೆ ಅರ್ಪಿಕೊಳ್ಳಬೇಕೆಂದರು.
\ಡಾ. ಮಾಜುದ್ದಿನ್‌ ಖಾನ್‌, ಆಪರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವರು ಸದರಿ ಕಾರ್ಯಾಗಾರದ ಪರಿಕಲ್ಪನೆಯ ಕುರಿತು ಮಾತನಾಡುತ್ತಾ ಸದರಿ ನಾಗರೀಕ ಸೇವಾ ಪರೀಕ್ಷೆಗಳ ಸಿದ್ದತೆ ಕುರಿತು ನೇರ ಪ್ರಸಾರದ ವೆಬಿನಾರ್‌ ಕಾರ್ಯಾಗಾರವನ್ನು ರಾಜ್ಯದಲ್ಲಿರುವ ಎಲ್ಲ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ಉಚಿತವಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಂತೆ ನಿರಂತರವಾಗಿ ಹಮ್ಮಿಕೊಂಡಿದ್ದು ನಾಗರೀಕ ಸೇವಾ ಪರೀಕ್ಷೆಯ ಆಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಬೆಂಗಳೂರಿನ ಪ್ರತಿಷ್ಟಿತ ನಾಗರೀಕ ಸೇವಾ ತರಬೇತಿ ಸಂಸ್ಥೆಯಾದ ಇನ್ ಸೈಟ್ಸ್‌ ಇಂಡಿಯಾ ಅಕಾಡೆಮಿಯ ಸ್ಥಾಪಕರು ಹಾಗೂ ನಿರ್ದೇಶಕರಾದ  ವಿನಯಕುಮಾರ್‌ ಜಿ.ಬಿ. ರವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ನಾಗರೀಕ ಸೇವಾ ಪರೀಕ್ಷೆಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸಲು ಸೂಕ್ತ ಅಧ್ಯಯನ, ಬರವಣಿಗೆ ಕೌಶಲ್ಯ ಹಾಗೂ ವಿಶ್ಲೇಷಣಾ ಕೌಶಲ್ಯವು ಅಗತ್ಯವಾಗಿದ್ದು ಇದಕ್ಕೆ ಸ್ವಯಂ ಅಧ್ಯಯನ ಹಾಗೂ ತರಬೇತಿಯು ಅತ್ಯಗತ್ಯ ಎಂದರು. ಅಭ್ಯರ್ಥಿಗಳ ಅನೇಕ ಪ್ರಶ್ನೆಗಳಿಗೆ ಉತ್ತರಿಸಿ, ಗಂಭೀರ ಅಧ್ಯಯನ ಹಾಗೂ ಪರೀಕ್ಷೆ ಕುರಿತು ಅಭ್ಯರ್ಥಿಗಳ ವಿವಿಧ ಸಮಸ್ಯೆಗಳಿಗೆ  ರಾಜ್ಯ ವಕ್ಫ್‌ ಮಂಡಳಿಯು ಹಮ್ಮಿಕೊಂಡಿರುವ ನಾಗರೀಕ ಸೇವಾ ಪರೀಕ್ಷೆಗಳ ಸಿದ್ದತೆ ಕುರಿತು ನೇರ ಪ್ರಸಾರದ ವೆಬಿನಾರ್‌ ಕಾರ್ಯಾಗಾರವು ಉತ್ತಮ ವೇದಿಕೆಯಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

 

           ಬಿ. ಮೊಹಮದ್‌ ಸಾದಿಕ್ ಹಿರಿಯ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿಶೇಷ ಆಹ್ವಾನಿತರಿಗೆ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿಯಾದ  ಜೀಷಾನ್‌ ಅಲಿ ಖಾನ್‌ ಕಾರ್ಯಕ್ರಮ ನಿರ್ವಹಿಸಿದರು.  ಈ ಕಾರ್ಯಾಗಾರದಲ್ಲಿ ರಿಜ್ವಾನುದ್ದಿನ್‌, ಫೈಜಿ ಕುಂದಮೇರಿ, ನದೀಮ್‌ ಪಟೇಲ್‌ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.‌

Tags

Post a Comment

0Comments

Post a Comment (0)