ಅಟಲ್‍ಜೀ ಜನಸ್ನೇಹಿ ನಿರ್ದೇಶನಾಲಯದಲ್ಲಿ ಸಾಫ್ಟ್‍ವೇರ್ ಡೆವೆಲಪರ್ ಹುದ್ದೆಗೆ ನೇಮಕಾತಿ

varthajala
0

ಬೆಂಗಳೂರು, ಫೆಬ್ರವರಿ 07 (ಕರ್ನಾಟಕ ವಾರ್ತೆ) : ಅಟಲ್‍ಜೀ ಜನಸ್ನೇಹಿ ನಿರ್ದೇಶನಾಲಯದಲ್ಲಿ ಖಾಲಿ ಇರುವ 5 (ಐದು) ಸಾಫ್ಟ್‍ವೇರ್ ಡೆವೆಲಪರ್‍ಗಳನ್ನು ಗುತ್ತಿಗೆ ಆಧಾರದ ನೇಮಿಸಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ಈ ಹುದ್ದೆಗಳಿಗೆ ಮಾಸಿಕ ರೂ.80,000/- ಗಳ ವೇತನವನ್ನು ನಿಗದಿಪಡಿಸಲಾಗಿದ್ದು, ವಿದ್ಯಾರ್ಹತೆ ಮತ್ತು ನೈಪುಣ್ಯತೆ ಹೊಂದಿರುವವರಿಗೆ ಆದ್ಯತೆಯನ್ನು ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು BE/B.Tech in Computer Science /ECE/IT/ Information Science or MCA ವಿದ್ಯಾರ್ಹತೆಯನ್ನು ಹೊಂದಿರಬೇಕು. 4 to 5 years in .net (Asp.net) development of which at least 2 years  in MVC Architecture. (C# full stack) development and development in MS SQL  And should have experience in Database design, writing stored procedures/ Functions, API development ಅನುಭವವನ್ನು ಹೊಂದಿರಬೇಕು.

  ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಫೆಬ್ರವರಿ 11, 2022 ಕೊನೆಯ ದಿನಾಂಕವಾಗಿದ್ದು, ಖುದ್ದಾಗಿ/ಅಂಚೆ/ಕೊರಿಯರ್/ ಇ-ಮೇಲ್ (ajs.directorate1@gmail.comಮೂಲಕ ನಿರ್ದೇಶಕರು, ಅಟಲ್‍ಜೀ ಜನಸ್ನೇಹಿ ನಿರ್ದೇಶನಾಲಯ, ಎಸ್.ಎಸ್.ಎಲ್.ಆರ್. ಕಟ್ಟಡ, ಕೆ.ಆರ್.ಸರ್ಕಲ್, ಬೆಂಗಳೂರು-560001 ಇವರಿಗೆ ಕಛೇರಿ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)