" ಸಿಲಿಕಾನ್ ಸಿಟಿಯಲ್ಲಿ ಪವರ್ ಸ್ಟಾರ್ ಡಾ. ಪುನೀತ್ ಜನ್ಮದಿನಾಚರಣೆ "

varthajala
0

 ‘ಅಪ್ಪು ಜನಸೇವೆ ಬಣ್ಣಿಸಲು ಪದಗಳೇ ಸಾಲದು’

ಎಲ್ಲರ ನೆಚ್ಚಿನ ಅಪ್ಪು, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ 47ನೇ ಜನ್ಮದಿನ ಇಂದು. ಇದೇ ಮೊದಲ ಬಾರಿಗೆ ರಾಜನಿಲ್ಲದೆ ವಿಶ್ವದೆಲ್ಲೆಡೆ ಹುಟ್ಟುಹಬ್ಬ ಆಚರಿಸಲಾಯಿತ್ತು . ಇಂದೇ ಪುನೀತ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ತೆರೆಗಪ್ಪಳಿಸಿದ್ದು, ಅಭಿಮಾನಿಗಳಲ್ಲಿ ಸಂತಸವನ್ನು ಇಮ್ಮಡಿಗೊಳಿಸಿದೆ.



ಬೆಂಗಳೂರು : ಮಾರ್ಚ್ ೧೭ : ನಗರದ ಬನಶಂಕರಿಯ  ಕತ್ತರಿಗುಪ್ಪೆ ಸಮೀಪ ಇರುವ ಚೆನ್ನಮ್ಮನ ಕೆರೆ ಅಚ್ಚಕಟ್ಟುವಿನಲ್ಲಿ ಇರುವ ವೃತ್ತದಲ್ಲಿ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ  - ಅಪ್ಪು ಅಭಿಮಾನಿಗಳಾದ ಗ್ರೀನ್ ಬಾಯ್ಸ್ ತಂಡದ ಆನಂದ್ , ಮಧು , ಹರೀಶ್ , ರಾಜು , ರವಿ ಲಕ್ಕಿ , ದರ್ಶನ್ , ಮೋಹನ್ ಗೌಡ , ಮರಿ ಸ್ವಾಮಿ ಇನ್ನೂ ಮೊದಲಾದವರು ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ  ಹಾಗು  ಅನ್ನದಾನ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದರು .

" ಪೂಜಾ ಕುಣಿತ "

 ಚನ್ನಪಟ್ಟಣದ ಆದಿಶಕ್ತಿ ದೇವತೆಯ ಪೂಜಾ ಕುಣಿತದ ಜೊತೆ ಜೊತೆಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಾದ   ಗ್ರೀನ್ ಬಾಯ್ಸ್ ತಂಡದ ರವರ ಕೋರಿಕೆಯಂತೆ ಪುನೀತ್ ರಾಜ್ ಕುಮಾರ್ ಭಾವಚಿತ್ರ ವನ್ನು ದೇವಿಯ ಹಿಂಭಾಗದಲ್ಲಿ ಕಾಣುವಂತೆ ಚನ್ನಪಟ್ಟಣದ ಸುಭಾಷ್ , ನಾಗೇಶ್ ಅವರು  ಪೂಜಾ ಕುಣಿತ ನಡೆಸಿಕೊಟ್ಟರು .

ನಗರದ   ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯ ದತ್ತಾತ್ರೆಯ ನಗರದಲ್ಲಿ ಇರುವ " ನವಚೈತನ್ಯ  ಕನ್ನಡ  ಗೆಳಯರ  ಬಳಗದಿಂದ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ 47ನೇ ಜನ್ಮದಿನ  ಆಚರಣೆ  ಪ್ರಯುಕ್ತ   ಅನ್ನದಾನ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು  ಹಾಗು  ನಗರದಾದ್ಯಂತ  , ಸಂಗೀತ ಕಾರ್ಯಕ್ರಮ, ವಸ್ತು ಪ್ರದರ್ಶನ ಸೇರಿದಂತೆ ಅಪ್ಪು ಸ್ಮರಣೆಗಾಗಿ ಹಲವಾರು ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು  . 



" ನವಚೈತನ್ಯ  ಕನ್ನಡ  ಗೆಳಯರ  ಬಳಗ  ದಿಂದ   : ಅನ್ನದಾನ " 


" ಜೇಮ್ಸ್ " -   ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ  ಕೊನೆಯ ಚಿತ್ರ  

 ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಕೊನೆಯ ಚಿತ್ರ ಜೇಮ್ಸ್ ಚಲನಚಿತ್ರವು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ 4 ಸಾವಿರ ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು .  

 ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ  " ಕರ್ನಾಟಕ ರತ್ನ ಪ್ರಶಸ್ತಿ "  - ಅಭಿಮಾನಿಗಳು  ಸಂತಸ  .... 


ಸದ್ಯದಲ್ಲೇ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು  ಅದಕ್ಕೆ   ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ  ಅಭಿಮಾನಿಗಳಾದ  ಗ್ರೀನ್ ಬಾಯ್ಸ್ ತಂಡ ಹಾಗು " ನವಚೈತನ್ಯ  ಕನ್ನಡ  ಗೆಳಯರ  ಬಳಗದವರು  ಸಂತಸ ವ್ಯಕ್ತಪಡಿಸಿದ್ದಾರೆ .

ಚಿತ್ರ : ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ


Post a Comment

0Comments

Post a Comment (0)