FREE ENTRY FOR PUC. : ಪ್ರಥಮ ಪಿ.ಯು.ಸಿ. ತರಗತಿಗಳಿಗೆ ಉಚಿತ ಪ್ರವೇಶ

varthajala
0

ಉತ್ತರಹಳ್ಳಿ ಪದವಿ ಪೂರ್ವ ಕಾಲೇಜು 2022-23ನೇ ಸಾಲಿಗೆ ಪ್ರಥಮ ಪಿ.ಯು.ಸಿ. ತರಗತಿಗಳಿಗೆ ಉಚಿತ ಪ್ರವೇಶ:*

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ವಾರ್ಡ್ ಸಂ. 184, ಉತ್ತರಹಳ್ಳಿ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಬೆಂಗಳೂರು-560061 ರಲ್ಲಿ ಮಾನ್ಯ ಆಯುಕ್ತರು ರವರ ಆದೇಶದಂತೆ ಉತ್ತರಹಳ್ಳಿ ವಾರ್ಡ್ ಮತ್ತು ಸುತ್ತಮುತ್ತಲಿನ ವಾರ್ಡ್‌ಗಳ ಬಡವರ್ಗದ ಮಕ್ಕಳಿಗೆ ಅನುಕೂಲವಾಗಲೆಂದು 2022-23ನೇ ಸಾಲಿಗೆ ಉತ್ತರಹಳ್ಳಿಯಲ್ಲಿ ಪದವಿಪೂರ್ವ ಕಾಲೇಜನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. 

ಪಾಲಿಕೆ ವತಿಯಿಂದ ಪದವಿಪೂರ್ವ ಕಾಲೇಜಿನಲ್ಲಿ ಈ ಕೆಳಗಿನ ಸಂಯೋಜನೆಗಳುಳ್ಳ ತರಗತಿಗಳನ್ನು ಪ್ರಾರಂಭಿಸಲಾಗಿದೆ. 

1. ಕಲಾ ವಿಭಾಗದಲ್ಲಿ HEPS. 

2. ವಾಣಿಜ್ಯ ವಿಭಾಗದಲ್ಲಿ HEBA & CEBA.

3. ವಿಜ್ಞಾನ ವಿಭಾಗದಲ್ಲಿ PCMB & PCMC 

ಪಾಲಿಕೆ ವತಿಯಿಂದ ಉಚಿತ ಪ್ರವೇಶದ ಜೊತೆಗೆ ಈ ಕೆಳಕಂಡ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು.

• ಉಚಿತ ಪಠ್ಯಪುಸ್ತಕಗಳು ಹಾಗೂ ನೋಟ್ ಪುಸ್ತಕಗಳು.

• ಉಚಿತ ಸಮವಸ್ತ್ರ, ಸೈಟರ್, ಟ್ರಾಕ್ ಶೂಟ್ಸ್ ಮತ್ತು ಬ್ಲೇಸರ್.

• ಉಚಿತ ಟ್ಯಾಬ್ ಮತ್ತು ಲ್ಯಾಪ್‌ಟಾಪ್‌ಗಳು.

• ಉತ್ತಮ ಗ್ರಂಥಾಲಯ, E-Library ಹಾಗೂ ಪ್ರಯೋಗಾಲಯಗಳ ವ್ಯವಸ್ಥೆ ಮತ್ತು ಉಚಿತ ಶೈಕ್ಷಣಿಕ ಪ್ರವಾಸ.

• ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ CET & TALLY ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುವುದು.

• ದ್ವಿತೀಯ PUC ವಾರ್ಷಿಕ ಪರೀಕ್ಷೆಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ 35,000/- ರೂ. ಪ್ರೋತ್ಸಾಹಧನ ನೀಡಲಾಗುವುದು. SC / ST ವಿದ್ಯಾರ್ಥಿಗಳಿಗೆ ಸಮಾಜಕಲ್ಯಾಣ ಇಲಾಖೆಯಿಂದ ವಿಶೇಷ ವಿದ್ಯಾರ್ಥಿವೇತನ ನೀಡಲಾಗುವುದು. 


ನಮ್ಮ ಶಾಲಾ-ಕಾಲೇಜಿನಲ್ಲಿ ದೊರೆಯುವ ಇನ್ನಿತರೆ ಮೂಲಭೂತ ಸೌಕರ್ಯಗಳು:


• ನುರಿತ ಉಪನ್ಯಾಸಕರಿಂದ ಬೋಧನೆ

• ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ CCTV ಅಳವಡಿಸಲಾಗಿದೆ

• ಶುದ್ಧ ಕುಡಿಯುವ ನೀರಿನ ವ್ಯವಸ್ಥೆ

• ಪ್ರತಿ ಕೊಠಡಿಗಳಲ್ಲಿ ಸ್ಮಾರ್ಟ್ ಬೋರ್ಡ್(Smart Board) ಅಳವಡಿಸಲಾಗಿದೆ

• ಉಚಿತ ಗಣಕಯಂತ್ರ(Computer Training) ತರಬೇತಿಯನ್ನು ನೀಡಲಾಗುವುದು

• ಕಾಲೇಜಿನಲ್ಲಿ ಭಾರತ್ ಸೈಟ್ಸ್ & ಗೈಡ್ಸ್ ಘಟಕವನ್ನು ಪ್ರಾರಂಭಿಸಲಾಗುವುದು

• ಇಸ್ಕಾನ್ ವತಿಯಿಂದ ಮಧ್ಯಾಹ್ನದ ಬಿಸಿ ಊಟ ಹಾಗೂ ಇನ್ನೂ ಅನೇಕ ಸೌಲಭ್ಯಗಳನ್ನು ಪಾಲಿಕೆ ವತಿಯಿಂದ ನೀಡಲಾಗುವುದು.

ಮಾಹಿತಿಗಾಗಿ:

ಅಪ್ಪಾಜಿ, ಪ್ರಾಂಶುಪಾಲರು,

ಪದವಿ ಪೂರ್ವ ಕಾಲೇಜು, ಉತ್ತರಹಳ್ಳಿ. ಮೊ.ಸಂ: 9480683774

Post a Comment

0Comments

Post a Comment (0)